ಪೊಲೀಸರು ಆ#ರೋಪಿಯ ಮುಖವನ್ನು ಕಪ್ಪು ಬಟ್ಟೆಯಿಂದ ಏಕೆ ಮುಚ್ಚುತ್ತಾರೆ? ಕಾರಣ ತಿಳಿದುಕೊಳ್ಳಿ.
ಯಾವುದೇ ಆರೋಪಿಯನ್ನು ಪೊಲೀಸರು ಬಂಧಿಸಿದಾಗ ಆತನನ್ನು ಮೀಡಿಯಾ ಎದುರುಗಡೆ ತರುವಾಗ ಆತನ ಮುಖವನ್ನು ಒಂದು ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಕವರ್ ಮಾಡಿ ತರುತ್ತಾರೆ. ಇದನ್ನು ನಾವೆಲ್ಲ ನ್ಯೂಜ ಚಾನೆಲ್ ನಲ್ಲಿ ಎಷ್ಟೋ ಸಲ ನೋಡಿದ ಸಂಗತಿಯಾಗಿದೆ. ಇಂದಿಗೂ ಸಹ ನಾವು ಅನೇಕ ಚಲನಚಿತ್ರ ಮತ್ತು ನ್ಯೂಜ್ ಗಳಲ್ಲಿ ಸಹ ಇದೆ ತರಹ ಆರೋಪಿಯನ್ನು ಕರೆದುಕೊಂಡು ಹೋಗುವದನ್ನು ನಾವು ನೋಡಿದ್ದೇವೆ.
ಆರೋಪಿಯು ತನ್ನ ಮುಖವನ್ನು ಯಾರಿಗೂ ಕಾಣಬಾರದು ಮತ್ತು ತನ್ನ ಮಾನ ಹಾನಿಯಗಬಾರದು ಎಂದು ಕಪ್ಪು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾನೆ ಎಂಬುದು ನಮ್ಮ ನಿಮ್ಮ ನಂಬಿಕೆಯಾಗಿದೆ. ಆದರೆ ಇದು ಸುಳ್ಳು. ನೀವೆಲ್ಲ ನೋಡಿರಬಹುದು ಕೆಲವೊಮ್ಮೆ ಆರೋಪದಲ್ಲಿ ಸಿಕ್ಕ ವ್ಯಕ್ತಿಯನ್ನು ಪೊಲೀಸರು ಹಿಡಿದುಕೊಂಡು ಹೋಗುವಾಗ ಆ ವ್ಯಕ್ತಿ ತನ್ನ ಬಳಿಯಲ್ಲಿದ್ದ ಕರವಸ್ತ್ರದಿಂದ ತನ್ನ ಮುಖವನ್ನು ಮುಚ್ಚಿಕೊಳ್ಳುತ್ತಾನೆ ಆದರೆ ಆ ವ್ಯಕ್ತಿಯ ಜೊತೆಗಿದ್ದ ಪೊಲೀಸರು ಸಹ ಆ ಸಮಯದಲ್ಲಿ ಏನು ಮಾಡುವದಿಲ್ಲ ಏಕೆಂದರೆ ಕಾನೂನಿನ ಪ್ರಕಾರ ಸರಿಯಾಗಿದೆ. ಹೇಗೆ ಅಂತ ತಿಳಿದುಕೊಳ್ಳಿ.
ಒಬ್ಬ ‘ಅ’ ವ್ಯಕ್ತಿ ‘ಬ’ ವ್ಯಕ್ತಿಯ ಮೇಲೆ ಅ#ತ್ಯಾಚಾರ ಮಾಡಿದ್ದಾನೆ ಅಂದುಕೊಳ್ಳೋಣ ಆಗ ‘ಅ’ ವ್ಯಕ್ತಿಯನ್ನು ಪೊಲೀಸರು ಬಂ#ಧಿಸುತ್ತಾರೆ. ಪೊಲೀಸರು ಆ ವ್ಯಕ್ತಿಯ ವಿರುದ್ಧ ಸಾಕ್ಷಿ ಹೇಳಲು ‘ಕ’ ವ್ಯಕ್ತಿಯ ಅವಶ್ಯಕ ವಾಗಿರುತ್ತದೆ. ಏಕೆಂದರೆ ಯಾವುದೇ ಆ#ರೋಪ ಸಿದ್ಧ ಮಾಡಲು ಮುಖ್ಯವಾದ ಸಂಗತಿಯಂದರೆ ಸಾಕ್ಷಿದಾರ. ನಾವು ಯಾವುದೇ ಸಾಕ್ಷ್ಯಧಾರಗಳನ್ನು ಹೇಗೆ ಗು#ಪ್ತವಾಗಿ ಇಡುತ್ತವೆಯೋ ಅದೇ ರೀತಿ ಸಾಕ್ಷಿ ಹೇಳುವ ವ್ಯಕ್ತಿಗೆ ಯಾವುದೇ ಪ್ರಕಾರದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆರೋಪಿಯ ಮುಖವನ್ನು ಮೀಡಿಯಾ ಎದುರುಗಡೆ ತರುವದಿಲ್ಲ ಎಲ್ಲಿಯವರೆಗೆ ಆ#ರೋಪಿಯ ಮೇಲೆ ಆ#ರೋಪ ಸಿದ್ಧವಾಗುವದಿಲ್ಲವೋ ಅಲ್ಲಿಯ ವರೆಗೆ ಆ#ರೋಪಿ ಮತ್ತು ಸಾಕ್ಷಿದಾರ ಇಬ್ಬರು ಸುರಕ್ಷಿತವಾಗಿ ಇರಬೇಕು ಅನ್ನುವ ನಿಟ್ಟಿನಿಂದ ಪೊಲೀಸರು ಸ್ವತಃ ಆ#ರೋಪಿಯ ಮುಖವನ್ನು ಮುಚ್ಚುತ್ತಾರೆ.

ಈ ನಿಮಗೆ ಗೊತ್ತಾಯಿತ್ತಲ್ಲ ಆ#ರೋಪಿಯ ಮುಖವನ್ನು ಏಕೆ ಮುಚ್ಚುತ್ತಾರೆ ಅಂತ. ಆದರೆ ನಿಮ್ಮ ಮನದಲ್ಲಿ ಇನ್ನೊಂದು ಪ್ರಶ್ನೆ ನಿರ್ಮಾಣ ವಾಗಿರಬಹುದು ಕೆಲವೊಮ್ಮೆ ಆ#ರೋಪಿಯ ಮುಖವನ್ನು ಮುಚ್ಚದೆ ಮೀಡಿಯಾ ಎದುರುಗಡೆ ಸಾದರ ಪಡಿಸುತ್ತಾರೆ ಅದು ಹೇಗೆ ಅಂತ. ಅದಕ್ಕೂ ಒಂದು ಕಾರಣ ವಿದೆ. ಯಾವ ಆ#ರೋಪಿಯನ್ನು ಮೀಡಿಯಾ ಎದುರುಗಡೆ ಮುಖವನ್ನು ಮರಿ ಮಾಡದೆ ಸಾದರ ಪಡಿಸುತ್ತಾರೆಯೋ ಆ ವ್ಯಕ್ತಿಯ ವಿರುದ್ಧ ಪೊಲೀಸ ಠಾಣೆಯಲ್ಲಿ ಮೊದಲೇ ಅರೆಸ್ಟ್ ವಾರಂಟ್ ಇರುತ್ತದೆ ಅಲ್ಲದೆ ಮಿಡಿಯಾದಲ್ಲೂ ಸಹ ಆ ವ್ಯಕ್ತಿಯ ಫೋಟೋ ಮೊದಲೇ ಪ್ರಸಿದ್ದಿ ಪಡಿಸಲಾಗಿರುತ್ತದೆ ಹೀಗಾಗಿ ಆ ವ್ಯಕ್ತಿ ಒಂದು ವೇಳೆ ಪೊಲೀಸರ ಕೈಗೆ ಸಿಕ್ಕರೆ ಸಾಕು ಆತನ ಎಲ್ಲ ಕಾರ್ಯಗಳು ಮೀಡಿಯಾದಲ್ಲಿ ಪ್ರಕಟ ಮಾಡಲು ಪೊಲೀಸರು ಸ್ವತಃ ತಾವೇ ಆರೋಪಿಯನ್ನು ಸಾದರ ಪಡಿಸುತ್ತಾರೆ.