ಪೊಲೀಸ್ ನಂತರ ಆತನ ಮೂರು ವರ್ಷದ ಪುಟ್ಟ ಮಗಳೂ ಸಹಿತ ಕೊರೊನಾ ಪಾಸಿಟಿವ್! ಮಗಳಿಗೆ ನೋಡಿ ಹರಿಯಿತು ಕಣ್ಣೀರು ಕೋಡಿ!
ಕಾನ್ಪುರ:- ಕೋರೊನಾ ವೈರಸ್ ಮಹಾಸಂಕಟದ ಸಮಯದಲ್ಲಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿಯ ಒಂದು ವಿಚಿತ್ರವಾದ ಘಟನೆ ಬೆಳಕಿಗೆ ಬಂದಿದೆ, ಅದನ್ನು ಕೇಳಿದರೆ ನಿಮ್ಮ ಕಣ್ಣಲ್ಲಿಯೂ ನೀರು ಬರುವುದುಖಚಿತ. ಅದೇನೆಂದರೆ, ಐದು ದಿವಸಗಳ ಹಿಂದೆ ಕೋರೊನಾ ವೈರಸ್ ಗೆ ಬಲಿಯಾದ ರಾಯಪುರಾವಾ ಸ್ಟೇಷನ್ ದಲ್ಲಿಯ ಒಬ್ಬ ಪೊಲೀಸ್ ಅಧಿಕಾರಿಯನ್ನು ಕಾಶಿರಾಮ ಆಸ್ಪತ್ರೆಗೆ ದಾಖಲಾಗಿಸಿತ್ತು. ಅಲ್ಲದೆ ಅವರ ಕುಟುಂಬಕ್ಕೆ ಗೃಹ ಬಂಧನದಲ್ಲಿ ಇಡಲಾಯಿತು. ತದನಂತರ ಶನಿವಾರ ಅವರ ಕುಟುಂಬದ ಎಲ್ಲ ಸದಸ್ಯರ ತಪಾಸಣೆಯ ರಿಪೋರ್ಟ್ ಬಂದಿತು. ಆ ರಿಪೋರ್ಟ್ ನಲ್ಲಿ ನಮ್ಮ ಯೋಧನ 3 ವರ್ಷದ ಮಗಳ ರಿಪೋರ್ಟ್ ಪಾಸಿಟಿವ್ ಬಂದಿತು.
ರಿಪೋರ್ಟ್ ನೋಡಿದ ಕೂಡಲೇ ಅಲ್ಲಿದ್ದ ಸ್ಥಳೀಯ ಡಾಕ್ಟರ ಆ 3 ವರ್ಷದ ಮಗುವನ್ನು ಆಸ್ಪತ್ರೆಗೆ ಕರೆತರಲು ಅವರ ಮನೆಗೆ ಹೋದರು, ಪಾಪ ಮಗುವಿಗೆ ಏನು ಗೊತ್ತು ಏನಾಗಿದೆ ಅಂತ. ಡಾಕ್ಟರ್ ಮನೆಗೆ ಹೋದಾಗ ಆಆಗು ಅವರನ್ನು ‘ ನಮ್ಮ ತಂದೆ ಎಲ್ಲಿದ್ದಾರೆ’ ಎಂದು ಪ್ರಶ್ನೆ ಮಾಡಿತು. ಅದನ್ನು ಕೇಳಿದ ಡಾಕ್ಟರ್ ಸಹ ಕಣ್ಣೀರಿಟ್ಟರು.

ಆಗ ಡಾಕ್ಟರ್ ರು ಆ ಮಗುವಿಗೆ ‘ ನಿಮ್ಮತಂದೆ ನಿಮಗೆ ಕರೆದಿದ್ದಾರೆ’ ಎಂದು ಆ ಮಗುವನ್ನು ಹೇಳಿದರು. ಆದರೆ ಆ ಮಗು ನಮ್ಮ ತಂದೆ ಎಲ್ಲಿದ್ದಾರೆ , ನಮ್ಮ ತಾಯಿಏಕೆ ನನ್ನ ಹತ್ತಿರ ಬರುತ್ತಿಲ್ಲ ಎಂದು ಕೇಳಿದಳು. ತದನಂತರ ತನ್ನತಾಯಿಯ ಕಡೆಗೆ ನೋಡುತ್ತಾ “ನಮ್ಮ ತಂದೆ ಮನೆಗೆ ಏಕೆ ಬರುತ್ತಿಲ್ಲ, ತಂದೆ ಯಾವಾಗಬರುವರು?” ಎಂದು ತಾಯಿಯನ್ನು ಪ್ರಶ್ನಿಸಿದಳು. ಏನು ಅರಿಯದ ಆ ಎಳೆಯ ಮಗುವಿನ ಪ್ರಶ್ನೆ ಕೇಳಿ ಅಲ್ಲಿದ್ದ ಮೆಡಿಕಲ್ ಟೀಮ್ ನ ಪ್ರತಿ ಸದಸ್ಯರ ಕಣ್ಣಲ್ಲಿ ಕಣ್ಣೀರು ಬಂದವು. ಆದರೆ ಕೊನೆಗೆ ಮೆಡಿಕಲ್ ಟೀಮ್ ನ ಸದಸ್ಯರು ಮಗುವಿಗೆ, ‘ನಿಮ್ಮ ತಾಯಿ ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾಳೆ ಆದ್ದರಿಂದ ನಿನಗೆ ನಿಮ್ಮ ತಂದೆಯ ಹತ್ತಿರ ಕರೆದು ಕೊಂಡು ಹೋಗಲು ಬಂದಿದ್ದೇವೆ ‘ ಎಂದು ಹೇಳಿದರು.

ಕೊನೆಗೆ ಮೆಡಿಕಲ್ ಟೀಮ್ ನವರು ಆ ಮಗುವನ್ನು ಕಾಶಿರಾಮ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆ ಮಗು ಆಸ್ಪತ್ರೆಯಲ್ಲಿ ತನ್ನ ತಂದೆಯನ್ನು ನೋಡಿದ ಕೂಡಲೇ ಅವರ ಹತ್ತಿರ ಹೋಗಲು ಹಠಮಾಡತೊಡಗಿತು. ಅದನ್ನು ನೋಡುತ್ತಿದ್ದ ಸಿಪಾಯಿ ತನ್ನ ಮಗುವಿನ ಸ್ಥಿತಿಯನ್ನು ಕಂಡು ಇದ್ದ ಬೆಡ್ ಮೇಲೆ ದುಃಖದಿಂದ ಕಣ್ಣೀರು ಹಾಕಲು ಪ್ರಾರಂಭಿಸಿದರು. ತಾಯಿಯಿಂದ ದೂರವಿದ್ದ ಮಗು , ಹಾಗೂ ತಂದೆಯ ದುಃಖ ನೋಡಿ ಅಲ್ಲಿದ್ದ ಆಸ್ಪತ್ರೆಯ ಕರ್ಮಚಾರಿಗಳ ಕಣ್ಣಲ್ಲಿ ನೀರು ಬಂದವು. ಅದರ ನಂತರ ಆ 3 ವರ್ಷದ ಮಗುವಿನ ಬೆಡ್ ತನ್ನ ತಂದೆಯ ಹತ್ತಿರವೇ ಹಾಕಿದರು.