ಪೊಲೀಸ್ ವಾಹನ ಸಾಯರನ್ ಹೊಡೆಯುತ್ತ ಆ ಸೊಸೈಟಿಯಲ್ಲಿ ಪ್ರವೇಶಿಸಿ, ಪೊಲೀಸರು ಮಾಡಿದ್ದೇನು ಗೊತ್ತಾ?
ಹೊಸ ಸಾಂಗವಿ:- ಲಾಕ್ಡೌನ್ಕಾಲದಲ್ಲಿ ಪೊಲೀಸರ ವಾಹನ ಕಂಡರೆ ಜನರು ತಾವಿದ್ದ ಸ್ಥಳವನ್ನು ಬಿಟ್ಟು ಓಡಿಹೋಗುವರು. ರವಿವಾರದ ರಾತ್ರಿ ಹೀಗೆ ಒಂದು ಪೊಲೀಸರ ವಾಹನವು ಸಾಯರನ್ ಬಾರಿಸುತ್ತ ಪಿಂಪಳೆ ಸೌದಾಗಾರದಲ್ಲಿ ಪ್ರವೇಶಿಸಿತು. ಅಲ್ಲಿದ್ದ ಜನರೆಲ್ಲರೂ ಭಯಭೀತ ಗೊಂಡರು. ಏನಾದರೂ ಆಗಿದೆ ಎಂದು ಭಾವಿಸಿ ಜನರು ತಮ್ಮ ಮನೆಯ ಕಿಟಕಿಯಿಂದ ಹಾಗೂ ಬಾಲ್ಕನಿಯಿಂದ ಇಣುಕಿ ನೋಡಲು ಪ್ರಾರಂಭಿಸಿದರು. ಆಗ ಪೊಲೀಸರು ತಮ್ಮ ವಾಹನದಿಂದ ಕೆಳಗಿಳಿದು ಅಲ್ಲಿದ್ದ ಒಂದು ಮನೆಯಲ್ಲಿ ಪ್ರವೇಶ ಮಾಡಿದರು. ಆ ಮನೆಯಲ್ಲಿದ್ದ ಸದಸ್ಯರು ತುಂಬಾ ಗಾಬರಿಯಿಂದ ನೋಡಲು ಪ್ರಾರಂಭಿಸಿದರು. ಆದ್ರೆ ಪೊಲೀಸರು ಯಾವುದೇ ಪ್ರಕಾರದ ಆರೋಪ ಅಥವಾ ತಪಾಸಣೆಗಾಗಿ ಬಂದಿರಲಿಲ್ಲ ಹೊರೆತಾಗಿ ಮನೆಯವರಿಗಾಗಿ ಒಂದು ಸರ್ಪ್ರೈಸ್ ತಂದಿದ್ದರು.
ನೌಕರಿಯ ಸಲುವಾಗಿ ಹೋದ ತಂದೆ ಅಮೆರಿಕಾದಲ್ಲಿ ಸಿಲುಕಿ ಕೊಂಡಿದ್ದರು. ಅವರ ಮಗ ಪಿಂಪರಿ ಚಿಂಚವಾಡನಲ್ಲಿ ವಾಸವಾಗಿದ್ದರು. ತನ್ನ ಮಗನ ಜನ್ಮದಿನದ ಆಚರಣೆಯ ಮಾಡುವ ಸಲುವಾಗಿ ತಂದೆ ತುಂಬಾ ಚಿಂತಿತರಾಗಿದ್ದರು. ಅಮೇರಿಕೆಯ ಹಾಗೆ ಭಾರತದಲ್ಲೂಸಹ ಲಾಕ್ಡೌನ್ ಇದ್ದುದರಿಂದ ಲಾಕ್ಡೌನ್ ಯಾವಾಗ ಮುಗಿಯುವದು? ಜನ್ಮದಿನದ ಆಚರಣೆ ಹೇಗಾಗುವದು? ಎಂಬ ಆಲೋಚನೆ ಆ ತಂದೆಯನ್ನು ಕಾಡುತ್ತಿತ್ತು. ಹೋದ ವರ್ಷ ತಮ್ಮ ಸಂಬಂಧಿಕರು ಮೊದಲೇ ತಂದಿಟ್ಟ ಹೂಗುಚ್ಛ ಹಾಗೂ ಗಿಫ್ಟ್ ಶುಭಾಶಯಗಳ ಆಚರಣೆ ಮಾಡಿದ್ದು ನೆನೆದು ತಂದೆ ನೊಂದು ಕೊಳ್ಳುತ್ತಿದರು.
ಇಂಥ ಸಮಯದಲ್ಲಿ ಅಮೆರಿಕದಲ್ಲಿ ಸಿಕ್ಕಿ ಬಿದ್ದ ರಾಜೀವ ಲೋಚನ ಅವರು ತಮ್ಮ ಮಗ ವತ್ಸಲ್ ಇವನ ಜನ್ಮದಿನ ರವಿವಾರ ವಿದ್ದಿತ್ತು. ಜನ್ಮದಿನವನ್ನು ಆಚರಣೆ ಮಾಡುವುದು ತಂದೆಯ ಆಸೆಇತ್ತು. ಆದರೆ ಲಾಕ್ಡೌನ್ ಇದ್ದುದರಿಂದ ಅಮೆರಿಕಾದಲ್ಲಿ ಸಿಲುಕಿಕೊಂಡಿದ್ದ ತಂದೆ ಬೇರೇನೇ ಯೋಚನೆ ಮಾಡಿದ ಭಾವುಕರಾದ ತಂದೆ ಪಿಂಪರಿ ಪೊಲೀಸರನ್ನು ವಿನಂತಿಸಿಕೊಂಡು ತನ್ನ ಮನೆಗೆ ಹೋಗಲು ಬೇಡಿಕೊಂಡು ಒಂದು ಇಮೇಲ್ ನ್ನು ಪೊಲೀಸ ಸ್ಟೇಷನ್ ಗೆ ಕಳುಹಿಸಿದರು. ಅದನ್ನು ನೋಡಿದ ಪೊಲೀಸ್ ಅಧಿಕಾರಿ ಸಾಂಗವಿ ಪೊಲೀಸ್ ಅಧಿಕಾರಿಗೆ ಕಳುಹಿಸಿದರು. ಆಗ ಸಾಂಗವಿ ಪೊಲೀಸ್ ಠಾಣೆಯ ಪ್ರಮುಖರಾದ ಜ್ಞಾನೇಶ್ವರ ಸಾಬಳೆ, ಸೊಸೈಟಿಯ ಚೆಅರಮನ್ ಸಂತೋಷ ಮಸ್ಕರ ಇವರ ಜೊತೆಗೆ ಸಾಂಗವಿ ಪೊಲೀಸ್ ಅಧಿಕಾರಿಗಳು ಗುಂಪುನೊಂದಿಗೆ ಅವರ ಸೈಸೈಟಿಗೆ ಹೋಗಿ ಕೆಳಗಡೆ ನಿಂತರು.
ಅದರ ನಂತರ ವತ್ಸಲ ಮತ್ತು ಅವನ ತಾಯಿ ರಚನಾ ಇಬ್ಬರು ಕೆಳಗಡೆ ಬಂದರು. ಪೊಲೀಸ ವಾಹನದ ಮೇಲೆ ಕೇಕ್ ಇಟ್ಟು ಬರ್ತ್ ಡೇ ಹಾಡು ಹೇಳುತ್ತಾ ಜನ್ಮದಿನವನ್ನು ಆಚರಣೆ ಮಾಡಿದರು. ಈ ಎಲ್ಲ ಘಟನೆ ನಡೆದುದನ್ನು ಕಂಡು ಅಲ್ಲಿದಾ ಜನರು ತುಂಬಾ ಆಶ್ಚರ್ಯ ಗೊಂಡರು. ಲಾಕ್ಡೌನ್ಕಾಲದಲ್ಲಿ ಪೊಲೀಸರು ಸ್ವತಃ ಬಂದು ವತ್ಸಲ್ ನ ಜನ್ಮದಿನ ಆಚರಣೆ ಮಾಡಿದ ಘಟನೆ ತುಂಬಾ ವೈರಲ್ ಆಗಿದೆ. ವತ್ಸಲ್ ನ ತಾಯಿ ಪೊಲೀಸರ ಈ ಸಹಕಾರ ದಿಂದ ತಾಯಿ ಭಾವುಕಗೊಂಡು ಪೊಲೀಸರಿಗೆ ತುಂಬಾ ಹೃದಯದಿಂದ ಧನ್ಯವಾದಗಳು ತಿಳಿಸಿದರು. ಈ ರೀತಿಯಾದ ಜನ್ಮದಿನದ ಆಚರಣೆಯ ಕಂಡು ಅಲ್ಲಿದ್ದ ಜನರು ಆಶ್ಚರ್ಯಗೊಂಡು ಪೊಲೀಸರಿಗೆ ಧನ್ಯವಾದಗಳು ತಿಳಿಸಿದರು. ಜನರ ಜೊತೆಗೆ ಪ್ರೀತಿಯಿಂದ ಬೆರೆಯುವ ಸಲುವಾಗಿ ಇಂಥ ಒಂದು ಉಪಕ್ರಮ ತಗೆದುಕೊಂಡಿದ್ದೇವೆ ಎಂಬುದು ಪೊಲೀಸ ಅಧಿಕಾರಿಯ ಅಭಿಪ್ರಾಯ ವಾಗಿದೆ.
