ಪೋನ್ ನಲ್ಲಿ ಮಾತಾಡುತ್ತಲೇ ಟ್ರೈನ್ ಕೆಳಗಡೆ ಬಿದ್ದ ಮಹಿಳೆ, ‘ಜೀವಕ್ಕಿಂತಲೂ ಫೋನ್ ನಲ್ಲಿ ಮಾತುಕತೆಯೇ ತುಂಬಾ ಮುಖ್ಯ’ ಎಂದ ನೆಟ್ಟಿಗರು!!!

ಇಂದಿನ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಇವೆರಡು ಪ್ರತಿಯೊಬ್ಬರ ಜೀವನದ ಮಹತ್ವದ ಭಾಗಗಳಾಗಿವೆ. ಎಲ್ಲ ವರ್ಗದ ಎಲ್ಲ ವಯಸ್ಸಿನ ಜನರು ಇದರಲ್ಲಿ ತಮ್ಮ ಸಮಯವನ್ನು ಸ್ವಲ್ಪಾದರೂ ಕಳೆದೆ ಕಳೆಯುತ್ತಾರೆ. ಪ್ರತಿಯೊಬ್ಬರು ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಸರ್ಚ್ ಮಾಡುತ್ತಲೇ ಇರುತ್ತಾರೆ. ಅಲ್ಲದೆ ಸದ್ಯಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್ ನಲ್ಲಿ ಚಾಟ್ ಮಾಡುವದು ಹಾಗೂ ಕಾಲಿಂಗ್ ಮಾಡುವದು ಟ್ರೆಂಡ್ ಆಗಿದೆ. ಒಮ್ಮೆ ಮೊಬೈಲ್ ನಲ್ಲಿ ಮಾತನಾಡಲು ಶುರು ಮಾಡಿದರೆ ಸಾಕು ಮುಂದೆ ಏನೇ ಬಂದರು ಅದರ ಕಡೆಗೆ ಲಕ್ಷ್ಯನೇ ಇರುವದಿಲ್ಲ ಅಲ್ಲದೆ ಕೆಲವೊಮ್ಮೆ ಮಾತನಾಡುವ ಕಾರಣದಿಂದಾಗಿ ದೊಡ್ಡ ದೊಡ್ಡ ಅನಾಹುತಕ್ಕೆ ಈಡಾಗುತ್ತಾರೆ. ಪ್ರಸ್ತುತ ಅಂತಹ ಒಂದು ಘಟನೆಯ ವೀಡಿಯೋ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಯುವತಿ ತಾನು ಮೊಬೈಲ್ ನಲ್ಲಿ ಮಾತನಾಡುತ್ತ ಹಾಗೆ ಪ್ಲೇಟ್ ಫಾರ್ಮ್ ಮೇಲೆ ಹೊರಟಿರುತ್ತಾಳೆ. ಆದರೆ ಆಕೆ ಮಾತನಾಡುವದರಲ್ಲಿ ಮುಂದೆ ಏನನ್ನು ನೋಡದೆ ಹಾಗೆ ಹೊರಟಿರುವಾಗ ಒಮ್ಮೆಲೇ ಕಾಲು ಜಾರಿ ಟ್ರ್ಯಾಕ್ ಮೇಲೆ ಬಿಳುತ್ತಾಳೆ. ಆಕೆ ಬಿದ್ದ ತಕ್ಷಣವೇ ಅಲ್ಲಿಂದ ಒಂದು ಕಂಟೇನರ್ ಹೊತ್ತ ಟ್ರೈನ್ ಅಂದರೆ ಮಾಲಗಾಡಿ ಬರುತ್ತದೆ. ಬರುತ್ತಿದ್ದನ್ನು ನೋಡಿ ಈ ಯುವತಿ ಟ್ರ್ಯಾಕ್ ಮೇಲೆ ಅಂಗಾತಾಗಿ ಮಲಗಿಕೊಳ್ಳುತ್ತಾಳೆ. ಟ್ರೈನ್ ಹಾಗೆ ಅವಳ ಮೇಲಿಂದ ಹಾಯ್ದು ಹೋಗುತ್ತದೆ. ಸುರಕ್ಷಿತವಾಗಿ ಟ್ರ್ಯಾಕ್ ನ ಮಧ್ಯದಲ್ಲಿ ಮಲಗಿಕೊಂಡಿದ್ದರಿಂದ ಯುವತಿಗೆ ಯಾವುದೇ ಪ್ರಕಾರದ ಗಾಯವಾಗಲಿಲ್ಲ. ಆದರೆ ಅಲ್ಲಿದ್ದ ವ್ಯಕ್ತಿಗಳು ಮಾತ್ರ ಈಕೆಯ ಅವಸ್ಥೆ ನೋಡಿ ತುಂಬಾ ಆಶ್ಚರ್ಯ ಪಡುತ್ತಾರೆ. ಏಕೆಂದರೆ ಅವಳು ಟ್ರ್ಯಾಕ್ ಮೇಲೆ ಬಿದ್ದರೂ ಸಹ ಮೊಬೈಲ್ ನಲ್ಲಿ ಮತನಾಡುವದನ್ನು ಬಿಟ್ಟೆ ಇರಲಿಲ್ಲ ಟ್ರೈನ್ ಹಾಯ್ದು ಹೋದಾಗಲೂ ಸಹ ಎದ್ದೇಳುವಾಗ ಆ ಯುವತಿಯ ಕಾಲ್ ಹಾಗೆ ಚಾಲ್ತಿಯಲ್ಲಿತ್ತು.

ವಿಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಐಪಿಎಸ್ ಅಧಿಕಾರಿ ದಿಪಾಂಷು ಕಬ್ರಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ ‘ಪೋನ್ ನಲ್ಲಿ ಹರಟೆ ಹೊಡೆಯುವದು ಎಲ್ಲಕ್ಕಿಂತ ಮುಖ್ಯವಾಗಿದೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದುವರೆಗೆ ಈ ವಿಡಿಯೋ ಸುಮಾರು ಎಪ್ಪತ್ತಾರು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ.