ಪೋಲಿಸ್ ಉದ್ಯೋಗಕ್ಕೆ ಬೈ ಹೇಳಿ, ಆಲೂಗಡ್ಡೆ ಕೃಷಿ ಆರಂಭಿಸಿದ: ಇಂದು ಗಳಿಸುತ್ತಿದ್ದಾನೆ ವಾರ್ಷಿಕ 3.5 ಕೋಟಿ ಆದಾಯ

ನಮ್ಮ ದೇಶ ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಕೆಲವರಿಗೆ ಈ ಕೃಷಿ ಇಷ್ಟವಾಯಿತೆಂದರೆ ಆಯ್ತು ಬೇರೆ ತಳಕು ಬಳಕಿನ ಜೀವನ ಇಷ್ಟವಾಗುವುದಿಲ್ಲ. ಇಲ್ಲಿಯವರೆಗೆ ಅನೇಕ ವ್ಯಕ್ತಿಗಳು ತಮ್ಮ ನೌಕರಿಯನ್ನು ಬಿಟ್ಟು ಕೃಷಿ ವ್ಯವಸಾಯ ಮಾಡಿ ಸಾಕಷ್ಟು ಹಣಗಳಿಸಿದ ಸುದ್ದಿಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಓದಿರಬಹುದು. ಇಂತಹದೇ ಒಂದು ಯಶಸ್ವಿ ರೈತನ ಮಾಹಿತಿಯನ್ನು ಈ ಅಂಕಣದಲ್ಲಿ ತಂದಿದ್ದೇವೆ. ಪ್ರಸ್ತುತ ವ್ಯಕ್ತಿಯು ಪೊಲೀಸ್ ನೌಕರಿಯನ್ನು ಬಿಟ್ಟು ಆಲೂಗಡ್ಡೆಯ ವ್ಯವಸಾಯ ಮಾಡಿ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾನೆ.

ಈ ರೈತನ ಹೆಸರು ಪಾರ್ಥಿಭಾಯಿ ಜೇಠಾಭಾಯಿ ಚೌಧರಿ ಇವರು ಪೊಲೀಸ್ ಅಧಿಕಾರಿಯಾಗಿ ನೌಕರಿ ಮಾಡುತ್ತಿದ್ದರು. ಆದರೆ ಇವರ ಮನಸ್ಸಿಗೆ ಆ ನೌಕರಿಯಲ್ಲಿ ಸಮಾಧಾನ ಸಿಗುತ್ತಿರಲಿಲ್ಲ. ಇದನ್ನು ತಿಳಿದ ಚೌಧರಿಯವರು ನೌಕರಿಯನ್ನು ತ್ಯಜಿಸಿ ಕೃಷಿ ವ್ಯವಸಾಯ ಮಾಡುವ ಸಲುವಾಗಿ ತಮ್ಮ ಹಳ್ಳಿಗೆ ವಾಪಸಾದರು.

ಇವರು ಪೊಲೀಸ್ ಬ್ಯಾಗ್ರೌಂಡ್ ನಿಂದ ಬಂದಿದ್ದರಿಂದ ಕೃಷಿಯ ಬಗ್ಗೆ ಅಷ್ಟೊಂದು ಸರಿಯಾದ ಜ್ಞಾನವಿರಲಿಲ್ಲ. ತುಂಬು ಆತ್ಮವಿಶ್ವಾಸದಿಂದ ಈ ಕೆಲಸದಲ್ಲಿ ಮುನ್ನುಗ್ಗಿದರು. ಕೃಷಿ ವ್ಯವಸಾಯ ಮಾಡುವ ಮೊದಲು ಕೃಷಿಯ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿದರು.

ಚೆನ್ನಾಗಿ ತಯಾರಿ ಮಾಡಿಕೊಂಡ ನಂತರ ಆಮೇಲೆ ಕೃಷಿ ಕೆಲಸಕ್ಕೆ ಕೈಹಾಕಿದರು. ಗುಜರಾತಿನ ಬನಾಸ್ ಕಾಠಾ ಜಿಲ್ಲೆ ಕೃಷಿಗೆ ಪ್ರಸಿದ್ಧವಾಗಿದೆ. ಇದೇ ಭೂಮಿಯಲ್ಲಿ ಚೌಧರಿಯವರು ವರ್ಷಕ್ಕೆ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಇದರ ಜೊತೆಗೆ ಅಲ್ಲಿಯ ರೈತರಿಗೆ ಹೆಚ್ಚುವರಿ ಲಾಭ ತೆಗೆದುಕೊಳ್ಳುವ ಟ್ರೈನಿಂಗ್ ಸಹ ನೀಡುತ್ತಿದ್ದಾರೆ.

ಇವರಿಗೆ ಕೃಷಿಯ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಆದರೆ ಕೃಷಿಯನ್ನೆ ಮಾಡುವ ಆಸೆ ಮಾತ್ರ ತುಂಬಾ ಇಟ್ಟುಕೊಂಡಿದ್ದರು. ಇಂದು ಅವರ ತೆಗೆದುಕೊಂಡ ಪರಿಶ್ರಮ ಮತ್ತು ಸಮರ್ಪಣೆಗೆ ಕೃಷಿ ಕ್ಷೇತ್ರದಲ್ಲಿ ಇಷ್ಟೊಂದು ಹೆಸರು ಮತ್ತು ಮನ್ನಣೆ ಸಿಗುತ್ತದೆಂಬ ಕಲ್ಪನೆಯೂ ಇವರಿಗೆ ಇರಲಿಲ್ಲ.

ಚೌಧರಿಯವರು ದಾಖಲೆಯ ಆಲೂಗಡ್ಡೆಯನ್ನು ಬೆಳೆಸಿ ಇಂದು ‘ಪೊಟೇಟೊ ಮ್ಯಾನ್’ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಮೀಡಿಯಾ ರಿಪೋರ್ಟ್ ಪ್ರಕಾರ 18 ವರ್ಷಗಳ ಹಿಂದೆಯೇ ಪೊಲೀಸ್ ನೌಕರಿಯನ್ನು ತ್ಯಜಿಸಿ ಕೆನಡಾದ ಒಂದು ಬಹುರಾಷ್ಟ್ರೀಯ ಕಂಪನಿಯ ಕಡೆಗೆ ಕೃಷಿ ಪ್ರಕ್ರಿಯೆಯ ಬಗ್ಗೆ ತರಬೇತಿಯನ್ನು ಪಡೆಯುವ ಅವಕಾಶ ಒದಗಿಬಂತು .

ಇದೇ ಕಾರಣದಿಂದ ಇಂದು ಇವರು ಒಳ್ಳೆಯ ದರ್ಜೆಯ ಆಲೂಗಡ್ಡೆಯ ಉತ್ಪಾದನೆ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ಇವರ ಆಲೂಗಡ್ಡೆಯನ್ನು ಖರೀದಿ ಮಾಡುತ್ತವೆ. ಇವರು ದೊಡ್ಡ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ವಿತರಣೆ ಮಾಡುತ್ತಾರೆ. ಹೀಗಾಗಿ ಕಂಪನಿಗಳಿಂದ ತುಂಬಾ ಲಾಭವಾಗುತ್ತಿದೆ. ಸೂತ್ರಗಳಿಂದ ದೊರೆತ ಮಾಹಿತಿಯ ಪ್ರಕಾರ ಚೌಧರಿ ಅವರ ಕಡೆಗೆ ಇಂದು ಸುಮಾರು 20 ಜನರು ಕೆಲಸ ಮಾಡುತ್ತಿದ್ದಾರೆ. ಇವರ ವಾರ್ಷಿಕ ವಹಿವಾಟು 3.5 ಕೋಟಿ ರೂಪಾಯಿಗಳಷ್ಟು ಇದೆ.

ಮೊದಮೊದಲು ಚೌಧರಿ ಅವರಿಗೆ ಆಲೂಗಡ್ಡೆಯ ಉತ್ಪಾದನೆಯನ್ನು ಮಾಡುವುದು ಅಷ್ಟೊಂದು ಸರಳವಾಗಿರಲಿಲ್ಲ. ಏಕೆಂದರೆ ಈ ಬೆಳೆಗೆ ಬೇಕಾಗುವ ನೀರಿನ ಸಮಸ್ಯೆ ತುಂಬಾ ದೊಡ್ಡದಾಗಿತ್ತು. ಅದರ ಮೇಲೆ ಉಪಾಯವೆಂದು ಹನಿ ನೀರಾವರಿ ಶುರುಮಾಡಿದರು. ಇದರಿಂದ ಕಡಿಮೆ ನೀರಿನಲ್ಲಿ ಹೆಚ್ಚು ಭೂಮಿಯನ್ನು ಆಲೂಗಡ್ಡೆಯ ಕೃಷಿ ವ್ಯವಸಾಯಕ್ಕೆ ಉಪಯೋಗಿಸಿದರು.

ಇಂದು ಪಾರ್ಥಿಭಾಯಿ ತಮ್ಮ 87 ಎಕರೆ ಜಮೀನಿನಲ್ಲಿ ಆಲೂಗಡ್ಡೆಯ ಉತ್ಪಾದನೆಯನ್ನು ಮಾಡಿ ಯಶಸ್ವಿಯಾಗಿದ್ದಾರೆ. ಒಂದು ಹೆಕ್ಟೇರಿಗೆ ಸುಮಾರು 1200 ಕಿಲೋ ಆಲೂಗಡ್ಡೆಯನ್ನು ಉತ್ಪಾದಿಸುತ್ತಿದ್ದಾರೆ. ಈ ಆಲೂಗಡ್ಡೆಗಳನ್ನು ಉತ್ತಮ ದರ್ಜೆಯ ಚಿಪ್ಸ್ ತಯಾರಿಸಲು ಉಪಯೋಗಿಸಲಾಗುತ್ತದೆ. ಚೌಧರಿ ಅವರು ಮೊದಲು ಮೆಕೆನ್ ಕಂಪನಿಗೆ ಆಲೂಗಡ್ಡೆಯನ್ನು ವಿತರಿಸುತ್ತಿದ್ದರು. ಸದ್ಯ ಅವರು ಬಾಲಾಜಿಯಂತಹ ದೊಡ್ಡ ದೊಡ್ಡ ದೇಸಿ ಕಂಪನಿಗಳಿಗೆ ತಮ್ಮ ಆಲೂಗಡ್ಡೆಯನ್ನು ವಿತರಣೆ ಮಾಡುತ್ತಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಲೂಗಡ್ಡೆ ಉತ್ಪಾದನೆ ಮಾಡುವ ಮತ್ತು ಕೋಟಿ ರೂಪಾಯಿಗಳನ್ನು ಗಳಿಸುವ ಪಾರ್ಥಿಭಾಯಿ ತಮ್ಮ ಕುಟುಂಬಕ್ಕಾಗಿಯೂ ಸಮಯ ನೀಡುತ್ತಾರೆ. ಆಲೂಗಡ್ಡೆ ಸಾಧಾರಣವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಬಿತ್ತಿ ಡಿಸೆಂಬರ್ ವರೆಗೆ ಬೆಳೆಯನ್ನು ತೆಗೆದುಕೊಳ್ಳಲಾಗುತ್ತದೆ. ಬೆಳೆ ಬಂದ ನಂತರ ಅದನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟು ಡಿಮಾಂಡ್ ಹೆಚ್ಚಾದ ನಂತರ ಮಾರಾಟ ಮಾಡುತ್ತಾರೆ.