ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಅವರ ವರ್ಕೌಟ್ Video; ‘ಥ್ಯಾಂಕ್ಯೂ’ ಎಂದ ಫ್ಯಾನ್ಸ್!

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ದೇಹಾರೋಗ್ಯಕ್ಕೆ ಹಿಂದೆಂದೂ ಇಲ್ಲದ ಮಹತ್ವ ವನ್ನು ಈಗ ನೀಡಲಾಗುತ್ತಿದೆ. ಅದರಲ್ಲೂ ಊಹೆ ಕೂಡಾ ಮಾಡಿರದ ಹೊಸ ಹೊಸ ಸೋಂಕುಗಳು ಕಾಣಿಸಿಕೊಂಡ ನಂತರವಂತೂ ರೋ”ಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಆಗಿ ಹೋಗಿದೆ. ಅದಕ್ಕಾಗಿಯೇ ಯೋಗ, ಧ್ಯಾನ, ಆಧುನಿಕ ವಿಧಾನದ ಎಕ್ಸಸೈಸ್ ಗಳು ಹೀಗೆ ಅನೇಕ ರೀತಿಯ ವಿಧಾನಗಳನ್ನು ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಇರುವ ಪ್ರತಿಯೊಬ್ಬರೂ ಕೂಡಾ ಗಮನವನ್ನು ನೀಡುತ್ತಿದ್ದಾರೆ. ಯೋಗ ಹಾಗೂ ಜಿಮ್ ಗಳಂತಹ ಕಡೆಗೆ ಹೆಚ್ಚಿನ ಆದ್ಯತೆಯನ್ನು ಕೂಡಾ ನೀಡುತ್ತಿದ್ದಾರೆ.

ಸಿನಿಮಾ ನಟ ನಟಿಯರು, ಮಾಡೆಲ್ ಗಳಾದರೆ ಅವರು ಸಾಮಾನ್ಯ ಜನರು ಗಿಂತಲೂ ಹೆಚ್ಚು ಫಿಟ್ನೆಸ್ ಗೆ ಆದ್ಯತೆಯನ್ನು ನೀಡುತ್ತಾರೆ‌. ನಟ ನಟಿಯರು ವರ್ಕೌಟ್ ಮಾಡುವ ವೀಡಿಯೋಗಳು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜನರಲ್ಲಿ ಒಂದು ಜಾಗೃತಿಯನ್ನು ಕೂಡಾ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ‌. ಅದರಲ್ಲೂ ಕೆಲವು ನಟಿಯರು ಸೋಶಿಯಲ್ ಮೀಡಿಯಾಗಳ ಮೂಲಕ ಜನರಿಗೆ ಫಿಟ್ನೆಸ್ ಹಾಗೂ ಆರೋಗ್ಯದ ಟಿಪ್ಸ್ ಗಳನ್ನು ನೀಡುವ ವೀಡಿಯೋಗಳು ಕೂಡಾ ನಮಗೆ ನೋಡಲು ಸಿಗುತ್ತವೆ ಮತ್ತು ಅನೇಕರು ಅಲ್ಲಿ ನಟಿಯರು ಹೇಳುವುದನ್ನು ಅನೇಕರು ಫಾಲೋ ಮಾಡುತ್ತಾರೆ.

ಈಗ ಇದೇ ಹಾದಿಯಲ್ಲಿ ಸ್ಯಾಂಡಲ್ವುಡ್ ನ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ವರ್ಕೌಟ್ ಮಾಡುತ್ತಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು, ಈ ವೀಡಿಯೋ ಕೂಡಾ ಸಾಕಷ್ಟು ವೈರಲ್ ಆಗಿದೆ ಕೂಡಾ. ರಾಗಿಣಿ ಪ್ರಜ್ವಲ್ ಅವರು ಕೂಡಾ ಆಗಾಗ ಫಿಟ್ನೆಸ್ ಕುರಿತಾದ ವೀಡಿಯೋಗಳನ್ನು ಶೇರ್ ಮಾಡುವ ಮೂಲಕ ಎಕ್ಸಸೈಸ್ ಅನ್ನು ಹೇಗೆ ಮಾಡಬೇಕು? ಎಷ್ಟು ಸಮಯ ಮಾಡಬೇಕು? ಎಂಬುದನ್ನು ಕೂಡಾ ವಿವರಿಸುವುದನ್ನು ನಾವು ಕಾಣಬಹುದು.

ವಿಡಿಯೋ ನೋಡಿ

ರಾಗಿಣಿ ಪ್ರಜ್ವಲ್ ಅವರು ಶೇರ್ ಮಾಡಿರುವ ಈ ಫಿಟ್ನೆಸ್ ವೀಡಿಯೋದಲ್ಲಿ ಕೂಡಾ ಅವರು ತಾವು ಮಾಡುತ್ತಿರುವ ಎಕ್ಸಸೈಸ್ ಅನ್ನು ಹೇಗೆ ಮಾಡಬೇಕೆಂಬುದನ್ನು ಕೂಡಾ, ಅದರಿಂದಾಗುವ ಉಪಯೋಗವನ್ನು ಕೂಡಾ ಅವರು ವಿವರಿಸಿದ್ದಾರೆ‌.
ರಾಗಿಣಿ ಪ್ರಜ್ವಲ್ ಅವರು ಶೇರ್ ಮಾಡಿರುವ ಈ ಫಿಟ್ನೆಸ್ ವೀಡಿಯೋವನ್ನು ಒಂದು ಲಕ್ಷ ನಲ್ವತ್ತು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ನೆಟ್ಟಿಗರು ಕೂಡಾ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದು, ಯೋಗ ಎನ್ನುವುದು ಅತ್ಯುತ್ತಮ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.