ಪ್ರತಿ ದಿನ ATM ನಿಂದ ಕೇವಲ 100 ರೂ. ವಿತ್ ಡ್ರಾ ಮಾಡುತ್ತಿದ್ದ ಯೋಧ: ಸಂಶಯಗೊಂಡ ಗಾರ್ಡ್, ಆದರೆ ಸತ್ಯ ಬೇರೆಯೇ ಆಗಿತ್ತು, ಮನ ಕಲಕುವ ಸ್ಟೋರಿ ಇದು

ಜಗತ್ತಿನಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ನಮ್ಮ ಭಾರತದ ಶೂರ ಸೈನಿಕರು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಏನಾದರೂ ಒಂದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಈ ಸೈನಿಕರು ತಮ್ಮ ಜೀವನವನ್ನು ತುಂಬಾ ವಿಶೇಷವಾಗಿ ಜೀವಿಸುತ್ತಾರೆ. ಅವರ ಕುಟುಂಬದವರು ಮಾತ್ರ ಭೀತಿಯ ವಾತಾವರಣದಲ್ಲಿ ಇರುತ್ತಾರೆ. ಶತ್ರುವಿನ ಬುಲೆಟ್ ಯಾವಾಗ ತನ್ನ ಮಗ, ಗಂಡ, ತಂದೆ, ಅಣ್ಣನಿಗೆ ತಾಗುತ್ತದೆ ಎಂದು ಹೇಳಲು ಬರುವದಿಲ್ಲ ಎನ್ನುತ್ತಾರೆ. ಇಲ್ಲಿ ಉಲ್ಲೇಖಿಸುತ್ತಿರುವ ಸೈನಿಕನ ಜೀವನವು ಸಹ ಇಂತಹ ಪರಿಸ್ಥಿತಿಯಿಂದಲೇ ಕೂಡಿದೆ ಎನ್ನಬಹುದು.

ಈ ಸೈನಿಕನು ದಿನಂಪ್ರತಿ ಎಟಿಎಂನಿಂದ ಬರೀ ನೂರು ರೂಪಾಯಿಗಳನ್ನಷ್ಟೇ ತೆಗೆಯುತ್ತಿದ್ದನು. ಆತ ಯಾಕೆ ಹೀಗೆ ಮಾಡುತ್ತಿದ್ದನೆಂಬುದು ಇಲ್ಲಿ ತಿಳಿಯುವ.

370 ಆಕ್ಟ್ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ರಾಜ್ಯದಲ್ಲಿ ಈಗಲೂ ಸಹ ಮೊಬೈಲ್ ಮತ್ತು ಇಂಟರ್ನೆಟ್ ಸೇವೆ ಸರಿಯಾಗಿ ಲಭ್ಯವಿಲ್ಲ. ಹೀಗಾಗಿ ಇಲ್ಲಿ ಸೇವೆಯನ್ನು ಮಾಡುತ್ತಿರುವ ಸೈನಿಕರಿಗೆ ಮನೆಯವರ ಜೊತೆಗೆ ಮಾತನಾಡುವ ಯಾವುದೇ ಸೌಲಭ್ಯ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ತರುಣ ಸೈನಿಕನೊಬ್ಬನು ತನ್ನ ಹೆಂಡತಿಗೆ ತಾನು ಜೀವಂತವಿರುವ ಬಗ್ಗೆ ಸಂದೇಶ ನೀಡುವ ಸಲುವಾಗಿ ದಿನಂಪ್ರತಿ ಎಟಿಎಂನಿಂದ ನೂರು ರೂಪಾಯಿಗಳನ್ನು ತೆಗೆಯುತ್ತಿದ್ದನು. ಎಟಿಎಂನಿಂದ rs.100 ತೆಗೆದ ನಂತರ ಬ್ಯಾಂಕಿನಿಂದ ಹಣ ಕಟ್ ಆದ ಬಗ್ಗೆ ಮನೆಯವರಿಗೆ ಸಂದೇಶ ಹೋಗುತ್ತಿತ್ತು.

ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ಘಟನೆ ಸತ್ಯಾಸತ್ಯತೆಯ ಬಗ್ಗೆ ತಿಳಿದುಬಂದಿಲ್ಲ. ಆದರೆ ಇದು ವೈರಲ್ ಮಾತ್ರ ಹೆಚ್ಚಾಗುತ್ತಿದೆ.

ಕಾಶ್ಮೀರದಲ್ಲಿ ಸೇವೆಸಲ್ಲಿಸುತ್ತಿರುವ ಈ ಜವಾನನು ದಿನನಿತ್ಯ ಎಟಿಎಂನಿಂದ ನೂರು ರೂಪಾಯಿಗಳನ್ನು ತೆಗೆದು ಅದನ್ನು ತನ್ನ ಪಾಕೇಟಿನಲ್ಲಿ ಸರಿಯಾಗಿ ಇಟ್ಟುಕೊಂಡು ಅಲ್ಲಿಂದ ಹೋಗುತ್ತಿದ್ದನು. ಮರುದಿನ ಮತ್ತೆ ಬಂದು ಎಟಿಎಂನ ಲೈನ್ ನಲ್ಲಿ ನಿಲ್ಲುತ್ತಿದ್ದನು. ಈ ಸೈನಿಕನ ಬಗ್ಗೆ ಹೆಸರು ಮತ್ತು ಬೇರೆ ಯಾವುದೇ ಮಾಹಿತಿ ಗೊತ್ತಾಗಿಲ್ಲ. ಈ ಜವಾನನು ಎಟಿಎಂನಿಂದ ದಿನನಿತ್ಯ ನೂರು ರೂಪಾಯಿಗಳನ್ನು ತೆಗೆದು ತನ್ನ ಪಾಕೇಟಿನಲ್ಲಿ ಇಡುವುದು ಅಲ್ಲಿಯ ಗಾರ್ಡ್ ನಿಗೆ ಅನುಮಾನಕ್ಕೆ ಎಡೆಮಾಡಿ ಕೊಟ್ಟಿತು. ಕೊನೆಗೆ ಒಂದು ದಿನ ಗಾರ್ಡ್ ಜವನಾನಿಗೆ ನೀವು ಯಾಕೆ ದಿನಾಲು 100 ರೂಪಾಯಿಗಳನ್ನು ತೆಗೆಯುತ್ತಿರಿ? ಒಮ್ಮೆಲೆ ತೆಗೆದುಕೊಳ್ಳಬಹುದಲ್ಲ? ಎಂದು ಕೇಳಿದಾಗ ಸೈನಿಕನು ತನ್ನ ಭಾವನೆಯನ್ನು ಹೇಳಿದಾಗ ಗಾರ್ಡ್ ನ ಕಣ್ಣಲ್ಲಿ ನೀರು ಬಂದಿತು. ಈ ಘಟನೆಯನ್ನು ಕೇಳಿದಾಗ ಮನಸ್ಸು ಮಾತ್ರ ಭಾರವಾಗದೆ ಇರಲಾರದು, ಅಲ್ವಾ?