ಪ್ರವಾಸಕ್ಕೆ ಹೋಗದೆ ಮನೆಯಲ್ಲಿಯೇ ಉಳಿದ ಅಸ್ವಸ್ಥ ಗಂಡ; ತಾನೇ ಅಳವಡಿಸಿದ CCTV ಯಲ್ಲಿ ಪ್ರೇಯಸಿ ಜೊತೆಗೆ ಹೆಂಡತಿ ಕೈಗೆ ಸಿಕ್ಕಿಬಿದ್ದ ಭೂಪ!
ಗಂಡ ಹೆಂಡತಿಯರ ಮಧ್ಯದಲ್ಲಿ ಎಷ್ಟೇ ಪ್ರೀತಿ, ವಿಶ್ವಾಸವಿದ್ದರೂ ಹೆಂಡತಿ ಮಾತ್ರ ಗಂಡನ ಮೇಲೆ ಒಂದು ಕಣ್ಣು ಇಟ್ಟೆ ಇಟ್ಟಿರುತ್ತಾಳೆ, ಅಲ್ವಾ? ಏಕೆಂದರೆ ಗಂಡನ ಮೇಲೆ ಸಂಶಯ ತೆಗೆದುಕೊಳ್ಳುವುದು ಹೆಂಡತಿಯ ಸ್ವಾಭಾವಿಕ ಗುಣವೇ ಆಗಿದೆ ಎನ್ನಬಹುದು. ಆದರೆ ಎಲ್ಲ ಹೆಂಡತಿಯರು ಹಾಗೆ ಇರುವುದಿಲ್ಲ ಮತ್ತು ಎಲ್ಲ ಗಂಡಂದಿರರು ಸಹ ಪ್ರಾಮಾಣಿಕರಾಗಿರುವದಿಲ್ಲ ಎಂದೂ ಇಲ್ಲಿ ನಮೂದಿಸಬೇಕೆನಿಸುತ್ತದೆ.
ಒಂದ್ ರಿಪೋರ್ಟ್ ಪ್ರಕಾರ ಹೆಂಡತಿ ಗಂಡನಿಗೆ ಇಂಥ ಕೇಸ್ನಲ್ಲಿ ರೆಡ್ ಹ್ಯಾಂಡ್ ಹಿಡಿದಿದ್ದಾಳೆ. ಹೆಂಡತಿಯು ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದಳು. ಆದರೆ ಆಕೆಯ ಗಂಡ ಮಾತ್ರ ಅನಾರೋಗ್ಯದ ಕಾರಣವನ್ನು ನೀಡಿ ಮನೆಯಲ್ಲಿಯೇ ಉಳಿದುಕೊಳ್ಳುವ ವಿಚಾರ ಮಾಡಿದನು. ಹೀಗಾಗಿ ಆತನ ಹೆಂಡತಿಯೊಬ್ಬಳೆ ಪ್ರವಾಸಕ್ಕೆ ಹೋದಳು. ಆದರೆ ಪ್ರವಾಸದಿಂದ ಮರಳಿ ಬಂದ ನಂತರ ಆಕೆಗೆ ತನ್ನ ಕಾಲ್ಕೆಳಗಿನ ಭೂಮಿಯೇ ಬಾಯಿ ತೆರೆದು ನುಂಗುತ್ತಿರುವ ಅನುಭವ ಆಯಿತು.
ಪ್ರವಾಸದಿಂದ ಮರಳಿ ಬಂದ ನಂತರ ಮಹಿಳೆಯು ಮನೆಯಲ್ಲಿಯ ಸಿಸಿಟಿವಿ ಫುಟೇಜ್ ಗಳನ್ನು ಚೆಕ್ ಮಾಡಿ ನೋಡಿದಳು. ಅದರಲ್ಲಿ ಗಂಡನ ಕೃಷ್ಣ ಲೀಲೆ ಬೆಳಕಿಗೆ ಬಂದಿತು. ಡೈಲಿ ಸ್ಟಾರ್ ನ್ಯೂಸ್ ನೀಡಿದ ರಿಪೋರ್ಟ್ ಪ್ರಕಾರ, ಮಹಿಳೆಯು ಟಿಕ್ ಟಾಕ್ ಮಾಧ್ಯಮದಿಂದ ತನ್ನ ಪತಿಯ ಬಗ್ಗೆ ಆಗಿರುವಂತಹ ಕಟು ಅನುಭವಗಳನ್ನು ಹೇಳಿದ್ದಾಳೆ. ಮಹಿಳೆಯು ಮನೆಯಲ್ಲಿ ಸಿಸಿಟಿವಿ ಫುಟೇಜ್ ನೋಡಿದಾಗ ಅದರಲ್ಲಿ ತನ್ನ ಗಂಡನು ಇನ್ನೊಬ್ಬಳ ಜೊತೆಗೆ ಇರುವುದು ಕಂಡುಬಂತು. ಪತಿಯು ಬಾಗಿಲಲ್ಲಿ ನಿಂತಿರುವಾಗ ಹಿಂದಿನ ಕೋಣೆಯಿಂದ ತುಂಡು ಬಟ್ಟೆಗಳನ್ನು ಧರಿಸಿದ ಮಹಿಳೆಯೊಬ್ಬಳು ಹೊರಗೆ ಬರುವ ದೃಶ್ಯ ಸಿಸಿಟಿವಿಯಲ್ಲಿ ಮಹಿಳೆಗೆ ಕಂಡುಬಂದಿದೆ.
ಪತಿ ಮತ್ತು ಆತನ ಪ್ರೇಯಸಿ ಬಾಗಿಲ ಹತ್ತಿರವೇ ಸ್ವಲ್ಪ ಸಮಯ ಒಬ್ಬರಿಗೊಬ್ಬರು ಕಿಸ್ ಮಾಡುತ್ತಾರೆ. ನಂತರ ಆಲಿಂಗನ ಸಹ ಮಾಡುತ್ತಾರೆ. ತದನಂತರ ಆ ಮಹಿಳೆಯು ಬಾಯ್ ಹೇಳಿ ಅಲ್ಲಿಂದ ಹೋಗಿಬಿಡುತ್ತಾಳೆ. ಈ ಎಲ್ಲ ದೃಶ್ಯವು ಡೋರ್ ಬೆಲ್ ಹತ್ತಿರವಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಶೇಷವೆಂದರೆ ಸಿಸಿಟಿವಿ ಕ್ಯಾಮೆರಾ ಪತಿಯೇ ಅಳವಡಿಸಿದ್ದನು.