ಪ್ರವಾಸದ ಸಮಯದಲ್ಲಿ ಬ್ಯಾಗ್ ಬದಲಾಯಿತು, ಪ್ರವಾಸಿ ತನ್ನ ಬ್ಯಾಗನ್ನು ಹುಡುಕಲು ಏಯರ್ ಲೈನ್ ವೆಬ್ಸೈಟ್ ನ್ನೇ ಹ್ಯಾಕ್ ಮಾಡಿದ!!!!

ಪ್ರಯಾಣದ ಸಮಯದಲ್ಲಿ ಪ್ರವಾಸಿಗರ ಲಗೇಜ್ ಕಳೆದು ಹೋಗುವದು ಅಥವಾ ಲಗೇಜ್ ಬದಲಾವಣೆಯ ಸಮಸ್ಯೆಗಳು ಆಗಾಗ್ಗೆ ಕೇಳಿಬರುತ್ತವೆ. ಅಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳು ತಮ್ಮ ಸೇವೆಯಿಂದ ಪ್ರಯಾಣಿಕರನ್ನು ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ, ಆಗ ಪ್ರಯಾಣಿಕರಿಗೆ ಯಾವುದೇ ಆಯ್ಕೆ ಇರುವದಿಲ್ಲ ಆದರೆ ಅಂತಹ ಒಂದು ಪ್ರಕರಣ ಮೊನ್ನೆಯಷ್ಟೇ ನಡೆದಿದೆ. ಆದರೆ ಈ ಪ್ರವಾಸಿಯ ಬ್ಯಾಗ್ ಪ್ರಯಾಣದ ಮಧ್ಯದಲ್ಲಿ ಬದಲಾವಣೆ ಯಾಗುತ್ತದೆ ಆಗ ಈತನು ತನ್ನ ಬದಲಾದ ಬ್ಯಾಗ್ ಕಂಡು ಹಿಡಿಯಲು ಮಾಡಿದ ಉಪಾಯ ಕೇಳಿದರೆ ಆಶ್ಚರ್ಯ ಪಡುವಿರಿ.

ಪ್ರವಾಸದ ಸಮಯದಲ್ಲಿ ಬ್ಯಾಗ್ ಬದಲಾಗಿದೆ.

ಸಾಫ್ಟ್‌ವೇರ್ ಎಂಜಿನಿಯರ್ ನಂದನ್ ಕುಮಾರ್ ಅವರು ಇಂಡಿಗೋ ವಿಮಾನದಲ್ಲಿ ಪಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣ ಮುಗಿಸಿ ಅವರ ಮನೆ ತಲುಪಿದಾಗ ಅವರ ಹೆಂಡತಿ ಬ್ಯಾಗ್ ನೋಡಿ ‘ಇದು ಬೇರೆಯವರ ಬ್ಯಾಗ್’ ಎಂದಳು. ನಂದನ್ ಅವರ ಬ್ಯಾಗ್ ಬದಲಿಗೆ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ಬಂದಿತ್ತು.

ಕಸ್ಟಮರ್ ಕೇರ್ ಸೇವೆಗೆ ಮಾಹಿತಿ ನೀಡಲಾಗಿದೆ

ನಂದನ ಅವರು ತಮ್ಮ ಬ್ಯಾಗ್ ಬದಲಾದ ಕುರಿತು indigo ಕಸ್ಟಮರ್ ಸರ್ವಿಸ್ ನವರಿಗೆ ವಿಚಾರಿಸಿದರು ಆದರೆ ಕಸ್ಟಮರ್ ಸರ್ವಿಸ್ ನವರು ಈ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ. ನಂದನ ಅವರು ತಮ್ಮ ಬ್ಯಾಗ್ ಬದಲಾವಣೆ ಹಾಗೂ ಹುಡುಕಾಟದ ಕುರಿತು ಸಂಪೂರ್ಣ ಮಾಹಿತಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಏರ್ ಲೈನ್ ಕಂಪೆನಿಯಿಂದ ಯಾವುದೇ ಸಹಾಯ ದೊರೆಯಲಿಲ್ಲ.

ನಂದನ ಅವರು ವಿಮಾನ ನಿಲ್ದಾಣದಿಂದ ಮನೆಗೆ ಹೋದಾಗ ಅವರ ಪತ್ನಿ ನಂದನ ಅವರುತಂದ ಲಗೇಜ್ ಓಪನ್ ಮಾಡಿ ನೋಡಿದರು ಆದರೆ ಅವರಿಗೆ ಅದರಲ್ಲಿ ನಂದನ ಅವರ ಯಾವುದೇ ವಸ್ತು ಅಥವಾ ಬಟ್ಟೆಗಳು ಕಂಡು ಬರಲಿಲ್ಲ ಆಗ ಈ ಬ್ಯಾಗ್ ಬೇರೆ ವ್ಯಕ್ತಿಯ ಬ್ಯಾಗ್ ಎಂದು ನಂದನ್ ಗೆ ತಿಳಿಸಿದರು. ಆಗ ನಂದನ್ ಅವರು ಗ್ರಾಹಕ ಸೇವೆಗೆ ಕರೆ ಮಾಡಿ ಈ ಕುರಿತು ವಿಚಾರಿಸದಾಗ ಕಂಪೆನಿಯ ಕಡೆಯಿಂದ ಯಾವುದೇ ರೆಸ್ಪಾನ್ಸ್ ಸಿಗಲಿಲ್ಲ. ಆಗ ಇವರು ತಮ್ಮ ಬ್ಯಾಗ್ ಮಾಹಿತಿ ತಿಳಿದುಕೊಳ್ಳಲು indigo ಕಂಪೆನಿಯ ವೆಬ್ಸೈಟ್ ಹ್ಯಾಕ್ ಮಾಡಬೇಕು ಎಂದು ವಿಚಾರ ಮಾಡಿದರು.

Indigo ಏರ್ ಲಾಯಿನ್ ವೆಬ್ಸೈಟ್ ಹ್ಯಾಕ್ ಮಾಡಲಾಯಿತು.

ನಂದನ್ ವೆಬ್‌ಸೈಟ್‌ನ ಡೆವಲಪರ್ ಕನ್ಸೋಲ್ ಅನ್ನು ತೆರೆದರು ಮತ್ತು ನೆಟ್‌ವರ್ಕ್ ಲಾಗ್ ದಾಖಲೆಗಳನ್ನು ಪತ್ತೆಹಚ್ಚಿದರು. ಕೆಲವು ಸಮಯದ ನಂತರ ತಮ್ಮ ಬ್ಯಾಗ್ ಬದಲಾವಣೆ ಯಾದ ವ್ಯಕ್ತಿಯ ಕುರಿತು ಸುಳಿವು ಸಿಕ್ಕಿತು. ಆ ಪ್ರವಾಸಿಯ ಸಂಪರ್ಕ ಮಾಹಿತಿ ಒಂದು ನೆಟ್ವರ್ಕ್ ರೆಸ್ಪಾನ್ಸ್ ಮೂಲಕ ದೊರೆಯಿತು.

ನಂದನ ಕುಮಾರ್ indigo ಕಂಪನಿಗೆ ಒಂದು ಸಲಹೆ ನೀಡಿದರು.

ಯಾವ ಪ್ರವಾಸಿಯ ಬ್ಯಾಗ್ ಬದಲಾಗಿದೆಯೋ ಆ ಪ್ರವಾಸಿ ತಮ್ಮ ಮನೆಯ ಹತ್ತಿರದಲ್ಲಿಯೇ ಇರುತ್ತಾನೆ ಎಂದು ನಂದನ ತಿಳಿಸಿದ್ದಾರೆ. ನಂದನ್ ಅವರು ಆ ಪ್ರವಾಸಿಯನ್ನು ಸಂಪರ್ಕಿಸಿ ತಮ್ಮ ಬ್ಯಾಗನ್ನು ತಗೆದುಕೊಂಡು ಬಂದಿದ್ದಾರೆ. ಬ್ಯಾಗ್ ದೊರೆತ ನಂತರ
ನಂದನ ಅವರು ಕಂಪೆನಿಗೆ ಒಂದುಷ್ಟು ಸಲಹೆ ನೀಡಿದ್ದಾರೆ. ಅದೆಂದರೆ ಕಸ್ಟಮರ್ ಸರ್ವಿಸ್ ಇನ್ನಷ್ಟು ಉತ್ತಮವಾಗಿಸುವದು ಅವಶ್ಯಕ ವಾಗಿದೆ. ಅಲ್ಲದೆ ಗ್ರಾಹಕರ ಡೇಟಾ ಲೀಕ್ ಆಗಬಾರದು ಇದಕ್ಕಾಗಿ ಸುರಕ್ಷಿತವಾಗಿ ವೆಬ್ಸೈಟ್ ಹೊಂದಾಣಿಕೆ ಮಾಡುವದು ತುಂಬಾ ಅವಶ್ಯಕವಾಗಿದೆ. ಎಂದು ಸಲಹೆ ನೀಡಿದ್ದಾರೆ.

Indigo ಕಂಪೆನಿಯು ನಂದನ್ ಅವರಿಗೆ ಸುಳ್ಳು ಹೇಳಲಾಗಿತ್ತು.

ನಂದನ್ ಅವರು ಹೇಳಿದ್ದೇನೆಂದರೆ, ಏರ್ ಲೈನ್ ಕಂಪೆನಿಯಾ ಕಸ್ಟಮರ್ ಸರ್ವಿಸ್ ನವರು ಬ್ಯಾಗ್ ಬದಲಾದ ಕುರಿತು ಪ್ರವಾಸಿಯನ್ನು ಮೂರು ಬಾರಿ ಕಾಲ್ ಮಾಡಲಾಗಿದೆ ಎಂದು ಹೇಳಿದರು. ಆದರೆ ಬ್ಯಾಗ್ ತಗೆದುಕೊಂಡು ಹೋದ ವ್ಯಕ್ತಿಯ ಮನೆಗೆ ಹೋಗಿ ಕಸ್ಟಮರ್ ಸರ್ವಿಸ್ ಕುರಿತು ವಿಚಾರಿಸಿದಾಗ ಈ ಕುರಿತು ಯಾವುದೇ ಕರೆ ಬಂದಿಲ್ಲ ಎಂದು ವ್ಯಕ್ತಿ ತಿಳಿಸಿದ್ದಾನೆ. ಹೀಗಾಗಿ ಕಂಪೆನಿ ನನಗೆ ಸುಳ್ಳು ಹೇಳಿದೆ ಎಂದು ತಿಳಿಸಿದ್ದಾರೆ.