ಪ್ರವಾಸಿಗರಿಗೆ ಗೊತ್ತಿಲ್ಲದೆ ಅವರದೇ ವಾಹನದ ಹಿಂದೆ ಅವಿತು ಕುಳಿತ ಹುಲಿಯು ಹಠಾತ್ ನಾಯಿಯ ಬೇಟೆಯಾಡಿದಾಗ…! ನೋಡಿ ಈ ವೈರಲ್ ವಿಡಿಯೋ.
ಅರಣ್ಯಗಳಲ್ಲಿ ಪ್ರಾಣಿಗಳು ಬೇಟೆಯಾಡುವ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡನೋಡುತ್ತಲೇ ವೈರಲ್ ಆಗುತ್ತವೆ. ಇದೇ ರೀತಿ ಬೇಟೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರಣ್ಯದಲ್ಲಿ ಸುತ್ತಾಡುವ ಪ್ರವಾಸಿಗರ ವಾಹನದ ಹಿಂದೆಯೇ ಅವಿತು ಕುಳಿತ ಹುಲಿಯೊಂದು ಹಠಾತ್ ಬಂದು ನಾಯಿಯ ಬೇಟೆಯಾಡಿದ ಭ#ಯಾನಕ ವಿಡಿಯೋ ಸಂಚಲನ ಮೂಡಿಸಿದೆ.
ಈ ವಿಡಿಯೋದಲ್ಲಿ ಜಂಗಲ್ ಸಫಾರಿ ಸಲುವಾಗಿ ಪ್ರವಾಸಿಗರು ತಿರುಗಾಡುವಾಗ ಹುಲಿಯನ್ನು ವೀಕ್ಷಿಸಲು ಎಲ್ಲರೂ ಒಂದು ಕಡೆ ನಿಂತಿದ್ದಾರೆ. ಆದರೆ ಇವರಿಗೆ ತಾವು ಸುತ್ತಾಡುತ್ತಿರುವ ವಾಹನದ ಹಿಂದೆಯೇ ಹುಲಿಯೊಂದು ನಾಯಿಯ ಬೇಟೆಗಾಗಿ ಅವಿತು ಕುಳಿತಿದೆ ಎಂಬುದು ಗೊತ್ತೇ ಇಲ್ಲ.
ಇವರ ವಾಹನದ ಒಂದು ಬದಿಯಲ್ಲಿ ನಾಯಿಯು ಯಾವುದರ ಪರಿವೇ ಇಲ್ಲದೆ ತನ್ನಷ್ಟಕ್ಕೆ ತಾನು ತಿರುಗಾಡುತ್ತಿದೆ. ತನ್ನ ಬದಿಗೆ ತನ್ನನ್ನು ತಿನ್ನಲು ಹುಲಿಯೊಂದು ಹೊಂಚು ಹಾಕಿ ಎರಗಲಿದೆ ಎಂಬ ಕಲ್ಪನೆ ನಾಯಿಗೆ ಇಲ್ಲ. ಕ್ಷಣಾರ್ಧದಲ್ಲಿ ಹುಲಿಯು ನಾಯಿಯ ಮೇಲೆ ಅಟ್ಯಾಕ್ ಮಾಡಿ ಅದನ್ನು ತನ್ನ ಬಾಯಿಯಲ್ಲಿ ಹಿಡಿದು ತೆಗೆದುಕೊಂಡು ಹೋಯಿತು.
ವಿಡಿಯೋ ನೋಡಿ
Tiger kills dog inside R'bhore. In doing so it is exposing itself to deadly diseases such as canine distemper that can decimate a tiger population in no time. Dogs have emerged as a big threat to wildlife. Their presence inside sanctuaries needs to be controlled @ParveenKaswan pic.twitter.com/t7qDR1MvNl
— Anish Andheria (@anishandheria) December 27, 2021
ಹುಲಿಯು ನಾಯಿಯ ಬೇಟೆಯಾಡುವ ಲೈವ್ ದೃಶ್ಯ ಪ್ರವಾಸಿಗರು ತಮ್ಮ ಅತೀ ಸಮೀಪದಲ್ಲಿಯೇ ಅನುಭವಿಸಿದರು. ಮತ್ತೊಂದು ಕ್ಷಣ ಅವರಿಗೆ ತಮ್ಮ ಜೀವದ ಬಗ್ಗೆಯೂ ನಿಶ್ಚಿತವಾಗಿ ಕಾಳಜಿ ಮೂಡಿರಬಹುದು. ಯಾಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ನಾಯಿಯ ಸ್ಥಾನದಲ್ಲಿ ಹುಲಿಗೆ ಈ ಪ್ರವಾಸಿಗರೇ ಆಹಾರವಾಗುತ್ತಿದ್ದರು. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಆದರೆ ವಿಡಿಯೋ ಮಾತ್ರ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.