ಭಾರಿ ಪ್ರವಾಹ ಬಂದ ನದಿಗೆ ಟ್ರಾಕ್ಟರ್ ಇಳಿಸಿದ ಚಾಲಕ್! ಜನರಂತಿದ್ದಾರೆ “ಮೂರ್ಖತನ!” ನೋಡಿ ಈ ವೈರಲ್ ವಿಡಿಯೋ!

ಸಾಟಣಾ( ನಾಶಿಕ) :- ಸದ್ಯಕ್ಕೆ ನಮ್ಮ ಬದಿಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಮಳೆಯು ಎಲ್ಲೆಡೆಗೆ ತನ್ನ ಹಾಜರಾತಿಯನ್ನು ತೋರಿಸುತ್ತಿದೆ. ಆದ್ದರಿಂದ ಅಲ್ಲಿಯ ನದಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ನದಿಗಳಿಗೆ ಪ್ರವಾಹದ ಪರಸ್ಥಿತಿ ನಿರ್ಮಾಣವಾಗಿದ್ದರಿಂದ ತಮ್ಮ ಜೀವನವನ್ನು ಅಪಾಯದಲ್ಲಿ ಹಾಕಿಕೊಂಡು ನದಿ ದಾಟಬೇಡಿ, ಹೀಗೆ ಪದೇ ಪದೇ ಸೂಚನೆ ನೀಡುತ್ತಿದ್ದಾರೆ. ಆದರೆ, ಸಾಟಣಾದಲ್ಲಿ ಒಬ್ಬ ಟ್ರ್ಯಾಕ್ಟರ್ ಚಾಲಕನು ಅನಾವಶ್ಯಕವಾಗಿ ಸಾಹಸವನ್ನು ಮಾಡಿ ಎಲ್ಲರೂ ಉಸಿರು ಬಿಗಿಯಾಗಿ ಹಿಡಿದುಕೊಳ್ಳುವಂಥ ಪ್ರಸಂಗ ನಿರ್ಮಾಣ ಮಾಡಿದ್ದಾನೆ.

ಮಹಾರಾಷ್ಟ್ರ ರಾಜ್ಯದ ನಾಶಿಕ ಜಿಲ್ಲೆಯಲ್ಲಿ ಸಾಟಣಾ ಈ ವಿಭಾಗದಲ್ಲಿ ಹಗಲು ರಾತ್ರಿ ತುಂಬಾ ಜೋರಾಗಿ ಮಳೆಯಾಗಿದೆ. ಆದುದರಿಂದ ಅಲ್ಲಿಯ ನದಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ಕೆಲವೊಂದು ರಸ್ತೆಗಳು ಸಹ ನದಿಯಲ್ಲಿ ಮುಳುಗಿ ಹೋಗಿವೆ. ಶ್ರೀಪುರವಡೆ-ಟಿಂಗರಿ ಈ ರಸ್ತೆಯು ನೀರಿನ ಕೆಳಗಡೆ ಹೋದಾಗ ಅಲ್ಲಿಯ ಒಬ್ಬ ಚಾಲಕನು ಪ್ರವಾಹದ ನೀರಿನಲ್ಲಿ ಟ್ರ್ಯಾಕ್ಟರ್ ಹಾಕಿದನು.

ವಿಡಿಯೋ ನೋಡಿ..

ಈ ಚಾಲಕನು ಮೊದಲಿಗೆ ಪ್ರವಾಹದಲ್ಲಿ ತನ್ನ ಟ್ರ್ಯಾಕ್ಟರ್ ಕೊಂಡೊಯ್ಯಲು ನೀರಿನಲ್ಲಿ ಹಾಗೆ ನಡೆಸಿದನು. ಆಗ ಪ್ರವಾಹದ ದಿಶೆಗೆ ಟ್ರ್ಯಾಕ್ಟರ್ ಸಿಲುಕಿ ಮುಂದೆ ಹೋಗದೆ ಅಲ್ಲಿಯೇ ನಿಂತು ಕೊಂಡಿತು. ತದನಂತರ ಕೆಲವು ಸಮಯದ ವರೆಗೆ ಕಾಯ್ದನು. ಅಷ್ಟರಲ್ಲಿ ಒಬ್ಬ ಟ್ರ್ಯಾಕ್ಟರ್ ಟ್ರಾಲಿಗೆ ಜೋತಾಡತೊಡಗಿದನು. ಮತ್ತು ಇಬ್ಬರು ಟ್ರಾಲಿಯಲ್ಲಿ ಹತ್ತಿದ್ದರು. ನದಿಯ ಬದಿಯಲ್ಲಿದ್ದ ಜನರು ಅವರಿಗೆ ನದಿಯನ್ನು ದಾಟಬೇಡಿ ಎಂದು ಸಲಹೆ ನೀಡಿದರು. ಆದರೆ ಅದನ್ನು ಕೇಳದೆ ಟ್ರ್ಯಾಕ್ಟರ್ ನದಿಯಲ್ಲಿ ಹಾಕಿದನು. ನದಿಯ ಮಧ್ಯಭಾಗದಲ್ಲಿ ಹೋದಾಗ ಅರ್ಧ ಟ್ರ್ಯಾಕ್ಟರ್ ನೀರಿನ ಕೆಳಗಡೆ ಹೋಯಿತು.

ಆದರೆ ದೈವ ಬಲದಿಂದ ಅಥವಾ ಸೇವರ ದಯೆಯಿಂದ ಟ್ರ್ಯಾಕ್ಟರ್ ಹರಿದುಕೊಂಡು ಹೋಗಲಿಲ್ಲ. ಟ್ರ್ಯಾಕ್ಟರ್ ದ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.