ಪ್ರಸೂತಿಗಾಗಿ ಹೊಳೆ ಹಳ್ಳಗಳನ್ನು ದಾಟುತ್ತ ಕಾಲ್ನಡಿಗೆಯಲ್ಲೇ 23 ಕಿಮೀ ಪ್ರವಾಸ ಮಾಡಿದ ಗರ್ಭವತಿ ಮಹಿಳೆ!!

ಭಾರತದ ಅನೇಕ ಮೂಲೆಗಳಲ್ಲಿ ವಿಕಾಸ ಪಥ ಇನ್ನೂ ಮೈಲಿ ಮೈಲಿಗಳಷ್ಟು ದೂರವಿದೆ, ಎಂದರೆ ತಪ್ಪಾಗಲಾರದು.

ಮಹಾರಾಷ್ಟ್ರದ ದುರ್ಗಮ ಹಾಗೂ ನಕ್ಸ್ ಲೈಟ್ ಪ್ರದೇಶಕ್ಕೆ ಹೆಸರುವಾಸಿಯಾದ ಗಡಚಿರೋಲಿ ಜಿಲ್ಲೆಯ ಭಾಮರಾಗಡ ತಾಲೂಕಿನ ತುರೆಮರ್ಕಾ ಊರಿನದಿದೆ. ಇಲ್ಲಿಯ ಮಹಿಳೆಯೊಬ್ಬಳು ತನ್ನ ಪ್ರಸೂತಿಗಾಗಿ 23 ಕಿ.ಮೀ. ನಡೆದುಕೊಂಡೇ ಪ್ರವಾಸ ಮಾಡಿದ್ದಾಳೆ. ಮಧ್ಯದಲ್ಲಿ ನದಿ ಹಳ್ಳಗಳಲ್ಲಿ ದಾರಿ ಹುಡುಕುತ್ತ ಜೊತೆಯಲ್ಲಿ ಆಶಾ ಕಾರ್ಯಕರ್ತೆಯ ಸಹಾಯದಿಂದ ಈ ಅಂತರ ಕ್ರಮಿಸಿದ್ದಾಳೆ. ಕೊನೆಗೆ ಪ್ರಸಿದ್ಧ ಸಮಾಜ ಸೇವಕರಾದ ಪ್ರಕಾಶ ಆಮ್ಟೆಯವರ ಹೇಮಲಕಸಾ ಜನತಾ ಪ್ರಕಲ್ಪದ ದವಾಖಾನೆಗೆ ಹೋಗಿ ಪ್ರಸೂತಿ ಮಾಡಿಕೊಂಡಿದ್ದಾಳೆ.

ಗಡಚಿರೋಲಿ: ಈ ಜಿಲ್ಲೆಯಲ್ಲಿ ಇಂದಿಗೂ ವಿಕಾಸ ಈ ಶಬ್ದದ ಅರ್ಥವೇ ಗೊತ್ತಿಲ್ಲವೆನಿಸುತ್ತದೆ. ನಕ್ಷಲಗ್ರಸ್ತವಾದ ಈ ದುರ್ಗಮ ಭಾಗ ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಸೀಮೆಯಲ್ಲಿ ಬರುವ ತುರೆಮರ್ಕಾ ಊರಲ್ಲಿಯ ಘಟನೆ ಇದೆ. ಪ್ರಸೂತಿಗಾಗಿ ಗರ್ಭವತಿ ಮಹಿಳೆಗೆ 23 ಕಿ.ಮೀ ಅಂತರ ನಡೆದುಕೊಂಡೇ ಕ್ರಮಿಸಬೇಕಾಯಿತು. ಇವಳ ಜೊತೆಗೆ ಆಶಾ ಕಾರ್ಯಕರ್ತೆ ಇದ್ದು ದವಾಖಾನೆಗೆ ಬಂದ ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ರೋಷನಿ ಪೊಟಾದಿ ಹೆಸರಿನ ಮಹಿಳೆಯು ತುರೆಮರ್ಕಾ ಊರಿನಿಂದ ಆಸ್ಪತ್ರೆಗೆ ನಡೆದುಕೊಂಡು ಹೋದವಳು. ಈ ಊರಿನಿಂದ ಬೇರೆ ಊರಿಗೆ ಇನ್ನುವರೆಗೆ ಸರಿಯಾದ ರಸ್ತೆಗಳಿಲ್ಲ. ಯಾವ ಊರಿಗೂ ಹೋಗಬೇಕಾದರೆ ಹೊಳೆ ಹಳ್ಳಗಳನ್ನು ದಾಟಿ ನಡೆದುಕೊಂಡೇ ಹೋಗಬೇಕು. ಕಾರಣ ಅವುಗಳ ಮೇಲೆ ಯಾವುದೇ ರೀತಿಯ ಚಿಕ್ಕ ಪುಟ್ಟ ಸೇತುವೆಗಳಿಲ್ಲ. ದಟ್ಟ ಅರಣ್ಯ, ದಾರಿ ಸರಿ ಇಲ್ಲ, ಆರೋಗ್ಯದ ಯಾವುದೇ ಸೇವೆ ಇಲ್ಲ, ಇಂಥದ್ದರಲ್ಲಿ ಮೇಲೆ ಮಳೆ ಬೇರೆ. ಇಂಥ ಭ’ಯಾನಕ ಸ್ಥಿತಿ. ದೇಶ ಸ್ವತಂತ್ರವಾಗಿ 72 ವರ್ಷಗಳು ಕಳೆದರೂ ಇನ್ನುವರೆಗೆ ಹೀಗೆ ಎಂದರೆ ಇದು ತುಂಬಾ ದುರದೃಷ್ಟಕರ.

ಊರಲ್ಲಿ ಆರೋಗ್ಯ ಸೇವೆ ಇಲ್ಲದ ಕಾರಣ ಆಕೆಗೆ ದವಾಖಾನೆಗೆ ಹೋಗುವದು ಅನಿವಾರ್ಯವಾಗಿತ್ತು. ಹೀಗಾಗಿ 23 ಕಿ.ಮೀ ನಡೆದು ಲಾಹೇರಿ ಹೆಸರಿನ ಊರಿಗೆ ಬಂದಾಗ ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳಿಲ್ಲದ ಕಾರಣ ಅಲ್ಲಿಂದ ಆಂಬ್ಯುಲೆನ್ಸ್ ನಲ್ಲಿ ಹೇಮಲಕಸಾ ಕ್ಕೆ ಬಂದ ನಂತರ ಡಾ. ಅಂಘಾ ಆಮ್ಟೆಯವರು ಡಿಲೇವರಿ ಮಾಡಿದ್ದಾರೆ. ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈಗಿನ ಜಗತ್ತು ವಿಜ್ಞಾನದ ಜಗತ್ತಾಗಿದೆ. ಆದರೆ ಈ ಗಡಚಿರೋಲಿ ಜಿಲ್ಲೆಯಲ್ಲಿ ಇನ್ನು ಅನೇಕ ಭಾಗಗಳು ದುರ್ಗಮ ಪ್ರದೇಶವಾಗಿವೆ. ದೇಶ ಸ್ವತಂತ್ರವಾದಾಗಿನಿಂದ ಇಲ್ಲಿಯವರೆಗೂ ಇಲ್ಲಿ ವಿದ್ಯುತ್ ಇಲ್ಲ, ರಸ್ತೆಗಳಿಲ್ಲ, ಆರೋಗ್ಯದ ಸೌಲಭ್ಯವಿಲ್ಲ. ಇಂಥ ದುರ್ಗಮವಾದ ಭಾಗಗಳಲ್ಲಿ ವಿಕಾಸದ ಕೆಲಸಗಳು ನಡೆಯುತ್ತಿವೆ ಎಂದು ಬರೀ ಪೇಪರ್ ಮೇಲೆ ಅಷ್ಟೇ ತೋರಿಸುತ್ತಾರೆ. ಪ್ರತ್ಯಕ್ಷವಾಗಿ ಕೆಲಸಗಳು ನಡೆಯುವದೇ ಇಲ್ಲ. ರೋಗಿಗಳಿಗೆ ಖಾಟ್ ದ ಮೇಲೆ ಇಲ್ಲ ನಡೆದುಕೊಂಡೇ ಆಸ್ಪತ್ರೆಗೆ ತಲುಪಬೇಕಾಗುತ್ತದೆ