ಪ್ರಾಪರ್ಟಿ ಲೆಕ್ಕದಲ್ಲಿಯೂ ‘ಕಿಂಗ್’ ಇದ್ದಾರೆ ಬಾಲಿವುಡ್ ಬಾದಶಾ ಶಾರುಖ್ ಖಾನ್! ಒಟ್ಟು ಸಂಪತ್ತು ಕೇಳಿದರೆ ಶಾಕ್
ಮಧ್ಯಮ ವರ್ಗದಿಂದ ಮೇಲೆ ಬಂದು ಬಾಲಿವುಡ್ ನಲ್ಲಿ ಎಲ್ಲಕ್ಕೂ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ಹೆಸರು ಇದೆ. ಇವರು ತಮ್ಮ 30 ವರ್ಷದ ಚಿತ್ರಜಗತ್ತಿನ ಪ್ರವಾಸದಲ್ಲಿ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸಿದ್ದಾರೆ. ತಾವು ಗಳಿಸಿದ ಹಣದ ವಿನಿಯೋಗ ವನ್ನು ಸಹ ಶಾರುಖ್ ಖಾನ್ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಚಲನಚಿತ್ರದ ಜೊತೆಗೆ ಅನೇಕ ವ್ಯವಸಾಯಗಳಲ್ಲಿ ತಮ್ಮ ಹಣದ ಹೂಡಿಕೆಯನ್ನು ಮಾಡಿದ್ದಾರೆ.
ತಮ್ಮ ಮೊದಲ ದಿವಾನಾ ಚಿತ್ರದ ಯಶಸ್ಸಿನಿಂದ ಮುಂದೆ ಬಂದು ಇಲ್ಲಿಯವರೆಗೆ ಸುಮಾರು 500 ಕೋಟಿ ರೂಪಾಯಿಗಳ ಒಡೆಯರಾಗಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಯ್ತು. ಈ ಚಿತ್ರದ ನಂತರ ಯಾವತ್ತೂ ಅವರು ಹಿಂದೆ ಹೊರಳಿ ನೋಡಿಲ್ಲ. ಅದಾದ ನಂತರ ಅನೇಕ ಚಿತ್ರಗಳು ಇವರಿಗೆ ಯಶಸ್ಸಿನ ಜೊತೆಗೆ ಹಣವನ್ನು ತಂದು ಕೊಟ್ಟವು. ಇಲ್ಲಿಂದ ಅವರು ಪ್ರತಿ ಚಿತ್ರಕ್ಕೆ ತೆಗೆದುಕೊಳ್ಳುವ ಫೀಸ್ ಸಹ ಹೆಚ್ಚಿಗೆ ಮಾಡುತ್ತಾ ಹೋದರು. ಇದರಿಂದ ಅವರ ಗಳಿಕೆಯಲ್ಲಿ ಅಪಾರವಾದ ಹೆಚ್ಚಳವಾಯಿತು. ಅವರ ಚಿತ್ರಗಳು ಯಶಸ್ಸು ಆಗಲು ಕಾರಣವಾದ ನಂತರ ನಿರ್ಮಾಪಕರು ಅವರ ಮೇಲೆ ಮುಗಿಬೀಳಲು ಪ್ರಾರಂಭಿಸಿದರು.

ಹೀಗಾಗಿ ಶಾರುಖ್ ಖಾನ್ ಅವರು ದಿನದಿಂದ ದಿನಕ್ಕೆ ಬೆಳೆಯುತ್ತ ಬಂದರು. ಮುಂಬೈಯ ಪಾಷ್ ಇಲಾಖೆಯಲ್ಲಿರುವ ಅವರ ಮನ್ನತ್ ಹೆಸರಿನ ಬಂಗಲೆಯು ಅವರ ಅಭಿಮಾನಿಗಳ ಮತ್ತು ಪ್ರವಾಸಿಗರ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ. ಶಾರುಖ್ ಅವರ ಈ ಬಂಗಲೆ ಮುಂಬೈಯ ಅತಿ ದುಬಾರಿ ಬಂಗಲೆಗಳಲ್ಲಿ ಒಂದಾಗಿದೆ.
ಮುಂಬೈ ಹೊರತಾಗಿ ಶಾರುಖ್ ಅವರು ದೆಹಲಿ, ಗೋವಾ, ಮತ್ತು ಅಲಿಬಾಗ್ ನಲ್ಲಿ ದೊಡ್ಡ ದೊಡ್ಡ ಬಂಗಲೆಗಳನ್ನು ಹೊಂದಿದ್ದಾರೆ. ಇನ್ನು ಭಾರತದ ಹೊರಗೆ ವಿದೇಶಗಳಲ್ಲಿಯ ಬಂಗಲೆಗಳ ಬಗ್ಗೆ ಹೇಳಬೇಕಾದರೆ, ದುಬೈ ಮತ್ತು ಲಂಡನ್ ಗಳಲ್ಲಿಯೂ ಅವರ ಮನೆ ಇವೆ. ಎಲ್ಲ ಬಂಗಲೆಗಳು ಕೋಟಿ ಕೋಟಿ ರೂಪಾಯಿಗಳ ಬೆಲೆಯುಳ್ಳದ್ದು ಮತ್ತು ಅನೇಕ ಸೌಲಭ್ಯಗಳಿಂದ ಪರಿಪೂರ್ಣವಾದವುಗಳಿವೆ.

ಮುಂಬೈಯಲ್ಲಿ ಅವರು ವಾಸಿಸುವ ಮನ್ನತ್ ಬಂಗಲೆ 200 ಕೋಟಿ ರೂಪಾಯಿಗಳ ಬೆಲೆಯುಳ್ಳದ್ದು ಇದೆ. ಶಾರುಖ್ ಅವರ ಹೆಂಡತಿಯಾದ ಗೌರಿ ಖಾನ್ ಳು ಮನೆಯ ಭವ್ಯತೆಗೆ ಕೋಟ್ಯಾವಧಿ ರೂಪಾಯಿಗಳನ್ನು ಖರ್ಚು ಮಾಡಿದ್ದಾಳೆ. ಶಾರುಖ್ ಅವರು ತಮ್ಮ ಕುಟುಂಬದ ಜೊತೆಗೆ 200 ಕೋಟಿ ರೂಪಾಯಿಗಳ ಈ ಮನೆಯಲ್ಲಿಯೇ ವಾಸಿಸುತ್ತಾರೆ.
ಇದರ ಜೊತೆಗೆ ಮುಂಬೈ ಹತ್ತಿರದ ಅಲಿಬಾಗ್ ನಲ್ಲಿ ಶಾರುಖ್ ಅವರ ದೊಡ್ಡ ಫಾರ್ಮ ಹೌಸ್ ಇದೆ. ಇವರ ಪ್ರತಿಯೊಂದು ಪಾರ್ಟಿಗಳು ಇದೇ ಫಾರ್ಮ್ ಹೌಸ್ ನಲ್ಲಿ ಜರುಗುತ್ತವೆ. ಅಲಿಬಾಗ್ ನ ಈ ಫಾರ್ಮಹೌಸ್ ಬೆಲೆ ಸುಮಾರು 75 ಕೋಟಿ ರೂಪಾಯಿಗಳು. ಶಾರುಖ್ ಅವರು ರಜೆಗಳಲ್ಲಿ ತಮ್ಮ ಕುಟುಂಬದ ಜೊತೆಗೆ ಇಲ್ಲಿಯೇ ಕಾಲವನ್ನು ಕಳೆಯುತ್ತಾರೆ.

ದಿಲ್ಲಿಯಲ್ಲಿ ಶಾರುಖ್ ಅವರ ಪಿತ್ರಾರ್ಜಿತ ಮನೆ ಇದೆ.ಇಲ್ಲಿಯೇ ಹಳೆಮನೆಗೆ ಶಾರುಖ್ ಅವರು ಸಂಪೂರ್ಣ ಹೊಸದನ್ನಾಗಿ ಮಾಡಿದ್ದಾರೆ. ಈ ಮನೆಯಲ್ಲಿ ಶಾರುಖ್ ಮತ್ತು ಗೌರಿ ಖಾನ್ ಅವರ ಅನೇಕ ನೆನಪುಗಳು ಹಾಗೆಯೇ ಇರುವುದರಿಂದ ಇಬ್ಬರಿಗಾಗಿ ಮನೆ ತುಂಬಾ ವಿಶೇಷವಾಗಿದೆ.
ಇನ್ನು ದುಬೈನಲ್ಲಿರುವ ಮನೆಯ ಬಗ್ಗೆ ಹೇಳಬೇಕಾದರೆ ಈ ಮನೆಯು ಕರಾವಳಿಯ ತೀರದಲ್ಲಿದೆ. ದುಬೈನಲ್ಲಿಯ ಮನೆಯ ಹೆಸರು ಜನ್ನತ ಇದೆ. ಈ ಮನೆಯ ಅಂದಾಜು ಬೆಲೆ 102 ಕೋಟಿ ರೂಪಾಯಿಗಳಷ್ಟು ಇದೆ.

ಶಾರುಖ್ ಖಾನ್ ತುಂಬಾ ಬೇಡಿಕೆಯ ನಟರಾಗಿರುವುದರಿಂದ ಇವರ ಗಳಿಕೆಯು ಸಹಿತ ತುಂಬಾ ಹೆಚ್ಚಳವಾಗಿದೆ. ಭಾರತದ ಹೊರತಾಗಿ ವಿದೇಶಗಳಲ್ಲಿ ಒಟ್ಟು 15 ವಿವಿಧ ದೇಶಗಳಲ್ಲಿ ಸ್ವಂತದ ಮನೆಗಳನ್ನು ಖರೀದಿ ಮಾಡಿದ್ದಾರೆ. ಅವುಗಳಲ್ಲಿ ಅಮೆರಿಕಾ ಇಟಲಿಗಳಂತಹ ದೇಶಗಳು ಶಾಮೀಲಾಗಿವೆ. ಅಮೆರಿಕೆಯಲ್ಲಿರುವ ಶಾರುಖ್ ಖಾನ್ ಅವರ ಮನೆ ಬೆಲೆ 185 ಕೋಟಿ ರೂಪಾಯಿಗಳಷ್ಟು ಇದೆ.
