ಪ್ರೀತಿಸಿದ ಹುಡುಗಿಯನ್ನು ನಡು ರಾತ್ರಿಯಲ್ಲಿ ಭೇಟಿ ಮಾಡಲು ಹೋಗಿ ಸಿಕ್ಕಿ ಬಿದ್ದ ಯುವಕ: ಮುಂದೆ ನಡೆದಿದ್ದು ಮಾತ್ರ ಅನಿರೀಕ್ಷಿತ
ಉತ್ತರ ಪ್ರದೇಶದ ರಾಮ್ಪುರ ವ್ಯಾಪ್ತಿಯಲ್ಲಿ ಒಂದು ವಿಚಿತ್ರವಾದ ಘಟನೆ ನಡೆದು ಅದು ಈಗ ಎಲ್ಲೆಡೆ ಸುದ್ದಿಯಾಗಿದೆ. ಘಟನೆ ಸಾಮಾನ್ಯವೇ ಆದರೂ ಅದರಿಂದ ಬಂದ ಫಲಿತಾಂಶ ಮಾತ್ರ ಊಹೆಗೆ ಮೀರಿದ್ದಾದ ಕಾರಣವೇ ಈಗ ಈ ಘಟನೆಯು ಎಲ್ಲೆಡೆ ಸುದ್ದಿಯಾಗಲು ಕಾರಣವಾಗಿದೆ. ಸಾಮಾನ್ಯವಾಗಿ ಹುಡುಗರು ತಾವು ಪ್ರೇಮಿಸಿದ ಹುಡುಗಿಯನ್ನು ರಹಸ್ಯವಾಗಿ ಭೇಟಿ ಮಾಡಲು ಹೋಗುವ ಸಾಹಸಕ್ಕೆ ಕೈಹಾಕುವುದನ್ನು ನಾವು ನೋಡಿದ್ದೇವೆ. ಇಂತಹುದೇ ಒಂದು ಸಾಹಸಕ್ಕೆ ಇಲ್ಲಿನ ಯುವಕನೊಬ್ಬ ಕೈ ಹಾಕಿ ಮಧ್ಯ ರಾತ್ರಿಯ ವೇಳೆಯಲ್ಲಿ ತಾನು ಪ್ರೀತಿಸಿರುವ ಹುಡುಗಿಯನ್ನು ಭೇಟಿ ಮಾಡಲು ಹೋಗಿದ್ದಾನೆ. ಆದರೆ ಅವನ ಅದೃಷ್ಟ ಸರಿಯಿರಲಿಲ್ಲ ಎಂದು ಅನಂತರ ಅವನಿಗೆ ಅರಿವಾಗಿದೆ.
ಪ್ರೇಯಸಿಯನ್ನು ಭೇಟಿ ಮಾಡಲು ಹೋದ ಪ್ರೇಮಿಯು ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅವನನ್ನು ಹುಡುಗಿಯ ಕುಟುಂಬದವರು ಒಂದು ಕೋಣೆಯಲ್ಲಿ ಭದ್ರವಾಗಿ ಕೂಡಿ ಹಾಕಿದ್ದು ಮಾತ್ರವಲ್ಲದೇ ರಾತ್ರಿಯೆಲ್ಲಾ ಅವನನ್ನು ಚಚ್ಚಿ ಬಾರಿಸಿ ತಮ್ಮ ಕೋ ಪ ವನ್ನು ತೀರಿಸಿಕೊಂಡಿದ್ದಾರೆ. ಬೆಳಕು ಹರಿದಾದ ಮೇಲೆ ಯುವಕನನ್ನು ಪೋಲಿಸರ ವ ಶ ಕ್ಕೆ ನೀಡಿದ್ದಾರೆ. ಆದರೆ ಕೆಲವರು ಇದೊಂದು ಪ್ರಕರಣವಾಗಿ ಎಲ್ಲೆಡೆ ಸುದ್ದಿಯಾಗುವುದು, ಕೋರ್ಟ್ ನಲ್ಲಿ ಮೊಕದ್ದಮೆಯಾಗುವುದು ಬೇಡವೆಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಹಾಗೂ ಮಾಡಿದ ರಾಜಿ ಸಂಧಾನ ಗಳನ್ನು ಮಾಡಿಸಿದ್ದಾರೆ.
ಇವೆಲ್ಲವುಗಳ ಫಲ ಎಂಬಂತೆ ಹುಡುಗಿಯ ಮನೆಯವರು ರಾತ್ರಿ ತಾವು ಹೊಡೆದು ಬುದ್ಧಿ ಕಲಿಸಲು ಮುಂದಾಗಿದ್ದ ಯುವಕನನ್ನೇ ಅಳಿಯನನ್ನಾಗಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.
ಈ ಘಟನೆಯು ವಾಸ್ತವವಾಗಿ ರಾಮ್ಪುರದ ಅಜೀಂನಗರ ಠಾಣಾ ವ್ಯಾಪ್ತಿಯಲ್ಲಿನ ಮೆಹಂದಿ ನಗರದ ಸುಮಾಲಿ ಎನ್ನುವ ಹಳ್ಳಿಯಲ್ಲಿ ನಡೆದಿದೆ. ಸ್ವಾರ್ ಕ್ಷೇತ್ರದ ಗದ್ದಿ ನಗಲಿಯ ನಿವಾಸಿ ಪ್ರೇಮ್ ಸಿಂಗ್ ಮೆಹಂದಿ ನಗರದ ಲಕ್ಷ್ಮೀ ಎಂಬ ಯುವತಿಯನ್ನು ಪ್ರೇಮಿಸುತ್ತಿದ್ದು, ಆತ ಲಕ್ಷ್ಮೀ ಯನ್ನು ಭೇಟಿ ಮಾಡಲು ಆಗಾಗ ರಹಸ್ಯವಾಗಿ ಮೆಹಂದಿ ಪುರಕ್ಕೆ ಬರುತ್ತಿದ್ದ. ಆದರೆ ಕಳೆದ ಬಾರಿ ಬಂದಾಗ ಸಿಕ್ಕಿ ಹಾಕಿಕೊಂಡಿದ್ದಾನೆ.
ಅರ್ಧ ರಾತ್ರಿ ವೇಳೆ ಪ್ರೇಮಿಯನ್ನು ನೋಡಲು ಬಂದಾಗ, ಮನೆಯವರಿಗೆ ಏನೋ ಸದ್ದಾದ ಅನುಮಾನ ಬಂದಿದ್ದು, ಅವರು ಕೂಡಾ ಬಹಳ ಎಚ್ಚರಿಕೆಯಿಂದ ಏನೆಂದು ನೋಡಲು ಹೊರಟಾಗ ಪ್ರೇಮ್ ಸಿಂಗ್ ಸಿಕ್ಕಿ ಬಿದ್ದಿದ್ದು, ಕಿರುಚಾಟ ಕೂಗಾಟ ಗಳು ಅವರ ನಡುವೆ ನಡೆದಿದ್ದು, ಅಕ್ಕ ಪಕ್ಕದವರು ಕೂಡಾ ತಡ ರಾತ್ರಿ ಲಕ್ಷ್ಮೀ ಮನೆ ಬಳಿ ಸೇರಿದ್ದು ಮಾತ್ರವಲ್ಲದೇ, ಎಲ್ಲರೂ ಕೂಡಾ ಪ್ರೇಮ್ ಸಿಂಗ್ ನಿಗೆ ಗೂಸಾ ನೀಡಿದ್ದಾರೆ. ಎಲ್ಲರಿಂದ ಪ್ರೇಮ್ ಸಿಂಗ್ ಏಟನ್ನು ತಿಂದ ಮೇಲೆ ವಿಷಯ ಪೋಲಿಸ್ ಠಾಣೆಯ ವರೆಗೆ ತಲುಪಿದೆ.

ಈ ವಿಷಯವಾಗಿ ಅಸಿಸ್ಟೆಂಟ್ ಪೋಲಿಸ್ ಕಮೀಷನರ್ ಅರುಣ್ ಕುಮಾರ್ ಸಿಂಹ ಅವರ ಮಾತನಾಡಿ ಈ ವಿಷಯ ಠಾಣೆಗೆ ಬಂದ ಕೂಡಲೇ ಯುವಕನನ್ನು ಆತನ ಕುಟುಂಬದವರನ್ನು ಠಾಣೆಗೆ ಕರೆಸಲಾಯಿತು. ಅನಂತರ ಯುವತಿ ಹಾಗೂ ಅವರ ಮನೆಯವರನ್ನು ಕರೆಯಿಸಿ ಪರಸ್ಪರ ಮಾತುಕತೆ ನಡೆಸಿದ ಮೇಲೆ ಎರಡೂ ಕುಟುಂಬದವರು ಮದುವೆಗೆ ಒಪ್ಪಿದ್ದರಿಂದ ಸಮಸ್ಯೆ ಅಲ್ಲಿಗೇ ಬಗೆಹರಿಯಿತು. ಪ್ರೇಮ್ ಸಿಂಗ್ ಮತ್ತು ಲಕ್ಷ್ಮೀ ಯ ಮದುವೆ ಹತ್ತಿರದ ದೇವಾಲಯವೊಂದರಲ್ಲಿ ಸರಳವಾಗಿ ನಡೆಯಿತು ಎಂದು ತಿಳಿಸಿದ್ದಾರೆ.