ಪ್ರೇಯಸಿಯನ್ನು ಭೇಟಿಯಾಗಲು ಬೈಕ್ ಮೇಲೆ ಪಾಕಿಸ್ತಾನಕ್ಕೆ ಹೊರಟ ಯುವಕ! ಬಾರ್ಡರ್ ನಲ್ಲಿ ಅರೆಸ್ಟ್ ಮಾಡಿದ BSF!
ಉಸ್ಮಾನಾಬಾದ (ಮಹಾರಾಷ್ಟ್ರ):- ಗಡಿ ಭದ್ರತಾ ಪಡೆಯು(ಬಿಎಸ್’ಎಫ್) ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಒಬ್ಬ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈ ಯುವಕ ಮಹಾರಾಷ್ಟ್ರದ ಉಸ್ಮಾನಬಾದದ ನಿವಾಸಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಈ ಯುವಕನ ಹೆಸರು ಜಿಶಾನ್ ಸಿದ್ಧಿಕಿ ಇದೆ. ಈತ ಗಡಿಯಲ್ಲಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೋಗಿದ್ದನು. ಆತನಿಗೆ ರಾತ್ರಿ 9.30 ಕ್ಕೆ ಪಾಕಿಸ್ತಾನ ಸೀಮೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ತನ್ನ ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಆತ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದನು. ದೇಶಾದ್ಯಂತ ಕೋರೊನಾ ದಿಂದಾಗಿ ಎಲ್ಲಡೆಗೂ ಲಾಕ್ಡೌನ್ ಇದ್ದರು ಸಹ ಈ ಯುವಕ ಅಲ್ಲಿಯವರೆಗೆ ಹೇಗೆ ತಲುಪಿದನು? ಎಂಬ ಪ್ರಶ್ನೆ ನಿರ್ಮಾಣವಾಗಿದೆ.
ದೊರೆತ ಮಾಹಿತಿಯ ಅನುಸಾರ, ಜಿಶಾನ್ ನು ಉಸ್ಮಾನಾಬಾದ್ ದಿಂದ ಅಹಮದ್ ನಗರದ ವರೆಗೆ ಸೈಕಲ್ ಮೇಲೆ ಹೋಗಿ ತಲುಪಿದ. ಅಹಮದ್ ನಗರದಿಂದ ಗುಜರಾತ್ ವರೆಗೆ ಮೋಟಾರ್ ಸೈಕಲ್ ಮೇಲೆ ತಲುಪಿ ಅಲ್ಲಿಂದ ನಡೆಯುತ್ತ ಗಡಿಯ ಸಮೀಪ ತಲುಪಿದನು. ಆತನ ಬೈಕ್ ಉಸುಕಿನಲ್ಲಿ ಸಿಕ್ಕಿ ಬಿದ್ದ ಕಾರಣ ಆತ ನಡೆದುಕೊಂಡು ಪಾಕಿಸ್ತಾನಕ್ಕೆ ಹೋಗುವವನಿದ್ದನು. ಭದ್ರತಾ ಪಡೆಯು ಉಸುಕಿನಲ್ಲಿ ಸಿಕ್ಕಿ ಬಿದ್ದ ಬೈಕ್ ಯಾರದಿರಬಹುದು ಇನ
ಎಂದು ಶೋಧನೆ ಅಭಿಯಾನ ಶುರು ಮಾಡಿದರು.
ಸೋಶಿಯಲ್ ಮಿಡಿಯಾ ಮಾಧ್ಯಮದಿಂದ ಆಪಾದಿತ ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಸೀಮಾ ರೇಷೆ ಪಾರು ಮಾಡಿ ಪಾಕಿಸ್ತಾನದ ಕಡೆಗೆ ಹೋಗುವದು ಜಿಶಾನ್ ಅವರ ಆಸೆಯಾಗಿತ್ತು. ತನ್ನ ಆಪಾದಿತ ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಹೋಗುತ್ತಿದ್ದ ಯುವಕನನ್ನು ಬಿಎಸ್’ಎಫ್ ನವರು ಪಾಕಿಸ್ತಾನ ಮತ್ತು ಕಚ್ಛ ಗಡಿಯಲ್ಲಿ ಬಂಧಿಸಿದ್ದಾರೆ.
ಉಸ್ಮಾನಬಾದದ ಪೊಲೀಸರ ಒಂದು ತಂಡ ಈ ಯುವಕನನ್ನು ತಮ್ಮ ವಶಕ್ಕೆ ತಗೆದುಕೊಳ್ಳಲು ಅಲ್ಲಿಂದ ರವಾನೆ ಯಾಗಿದ್ದಾರೆ. ಈ ಯುವಕನ ಹೇಳಿಕೆಯಲ್ಲಿ ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂಬುದರ ಶೋಧನೆ ಮಾಡುವವರಿದ್ದಾರೆ.
ಈ ಯುವಕನ ತಂದೆ ಒಬ್ಬ ಮೌಲಾನಾ ಆಗಿದ್ದಾರೆ. ಈತನು ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾನೆ. ಹೋಗುವಾಗ ಈತ ಉಸ್ಮಾನಬಾದದಿಂದ ಅಹಮದ್ ನಗರ ಜಿಲ್ಲೆಯ ವರೆಗೆ ಸೈಕಲ್ ಮೇಲೆ ಹೋಗಿದ್ದಾನೆ. ಅಲ್ಲಿಂದ ಈತ ದ್ವಿಚಕ್ರ ವಾಹನ ತಗೆದುಕೊಂಡಿದ್ದಾನೆ. ಈತನ ಮಾಹಿತಿ ತಿಳಿದ ನಂತರ ಎಟಿಎಸ್, ಸೈಬರ್, ಔರಂಗಾಬಾದ, ಉಸ್ಮಾನಬಾದ, ಮುಂಬೈ ಟೀಮ್ ಗಳನ್ನು ಕಾರ್ಯಗತಗೊಳಿಸಲಾಗಿದೆ. ಉಸ್ಮಾನಬಾದ, ಔರಂಗಾಬಾದ ಮತ್ತು ಮುಂಬೈ ಎಟಿಎಸ್ ಶೋಧನೆ ನಡೆಸಿದರು. ಆತನ ಲ್ಯಾಪ್ಟಾಪ್ ತಪಾಸಣಿ ಮಾಡಲಾಯಿತು. ತಪಾಸಣೆ ಮಾಡಿದ ನಂತರ ಆತನು ಪಾಕಿಸ್ತಾನದ ಒಂದು ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದಾನೆ ಅಂದಕೂಡಲೇ ಆತನ ಕುರಿತು ಸೀಮೆಯಲ್ಲಿ ಕಾರ್ಯಗತವಾಗಿದ್ದ ಭದ್ರತಾ ಪಡೆಗೆ ತಿಳಿಸಲಾಯಿತು.