ಪ್ರೇಯಸಿಯ ತಾಯಿಯ ಜೀವ ಉಳಿಸಲು ಕಿಡ್ನಿಯನ್ನೇ ದಾನ ಮಾಡಿದ ಪ್ರಿಯಕರ; ತಿಂಗಳಲ್ಲಿಯೇ ಪ್ರೇಯಸಿ ಕೊಟ್ಟ ಶಾಕ್ ನೋಡಿ…!
ಪ್ರೀತಿಯು ಕುರುಡಾಗಿರುತ್ತದೆ ಎಂದು ಹೇಳುತ್ತಾರೆ. ಪ್ರೀತಿಯ ನಶೆಯಲ್ಲಿ ಜೊತೆಗಾರನ(ಳ) ಸಲುವಾಗಿ ವ್ಯಕ್ತಿಯು ಏನುಬೇಕಾದರೂ ಮಾಡುತ್ತಾನೆ(ಳೆ). ಇದಕ್ಕೊಂದು ಒಳ್ಳೆಯ ಉದಾಹರಣೆ ಸದ್ಯ ಮೆಕ್ಸಿಕೋದಲ್ಲಿ ಕಂಡು ಬಂದಿದೆ. ಇಲ್ಲಿ ಒಬ್ಬ ಪ್ರಿಯಕರನು ತನ್ನ ಪ್ರೇಯಸಿಯ ತಾಯಿಯ ಜೀವ ಉಳಿಸುವ ಸಲುವಾಗಿ ಸ್ವಂತದ ಕಿಡ್ನಿಯನ್ನು ದಾನ ಮಾಡಿದ. ಆದರೆ ಆಪರೇಷನ್ ಆದ ಒಂದೇ ತಿಂಗಳಿನ ಅಂತರದಲ್ಲಿ ಪ್ರೆಯಸಿಯು ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಂಡು ತನ್ನ ತಾಯಿಗೆ ಕಿಡ್ನಿಯನ್ನೇ ದಾನ ಮಾಡಿದ ಪ್ರಿಯಕರನಿಗೆ ಶಾಕ್ ಕೊಟ್ಟಿದ್ದಾಳೆ.
ದ ಸನ್ ನೀಡಿದ ರಿಪೋರ್ಟ್ ಪ್ರಕಾರ, ಮೆಕ್ಸಿಕೋದ ಬಾಜಾ ಕ್ಯಾಲಿಫೊರ್ನಿಯಾದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ಉಜಿಯಲ್ ಮಾರ್ಟಿನೆಜ್ ಹೆಸರಿನ ವ್ಯಕ್ತಿಯ ದುಃಖದ ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಾರ್ಟಿನೇಜ ತನಗೆ ಮೋಸ ಮಾಡಿದ ಪ್ರೇಯಸಿಯ ಬಗ್ಗೆ ಮಾತನಾಡುತ್ತಿದ್ದಾನೆ. ನಾನು ನನ್ನ ಪ್ರೇಯಸಿಯ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ್ದೆ. ಅದೇ ಕಾರಣಕ್ಕಾಗಿ ನಾನು ನನ್ನ ಒಂದು ಕಿಡ್ನಿಯನ್ನು ನನ್ನ ಪ್ರೇಯಸಿಯ ತಾಯಿಗೆ ದಾನ ಮಾಡಿದ್ದೆ ಎಂದು ತನ್ನ ವಿಡಿಯೋದಲ್ಲಿ ಮಾರ್ಟಿನೆಜ್ ಅಳಲು ತೋಡಿಕೊಂಡಿದ್ದಾನೆ. ಕಿಡ್ನಿ ದಾನ ಮಾಡುವ ಎಲ್ಲ ಪ್ರಕ್ರಿಯೆಗಳು ಪೂರ್ಣವಾದ ನಂತರ ತಿಂಗಳೊಳಗಾಗಿಯೇ ಆಕೆ ನನ್ನಿಂದ ದೂರವಾದಳು ಮತ್ತು ಬೇರೊಬ್ಬನ ಜೊತೆ ಮದುವೆಯಾದಳು.
ಮಾರ್ಟಿನೆಜ್ ಟಿಕ್ ಟಾಕ್ ನಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ ಆತ ಸೋಫಾದ ಮೇಲೆ ಬಿದ್ದು ಎಲ್ಲ ಘಟನೆಗಳನ್ನು ಕ್ರಮೇಣವಾಗಿ ಹೇಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋಗೆ ಇಲ್ಲಿಯವರೆಗೆ 16 ಮಿಲಿಯನ್ ಗಿಂತಲೂ ಅಧಿಕ ವ್ಯೂವ್ಸ್ ದೊರೆತಿವೆ. ಮಾರ್ಟಿನೆಜ್ ಹೇಳುವ ಪ್ರಕಾರ, ತನ್ನ ಪ್ರೇಯಸಿಯ ತಾಯಿಯ ಆರೋಗ್ಯ ತುಂಬಾ ಕ್ರಿಟಿಕಲ್ ಕಂಡೀಶನ್ ನಲ್ಲಿತ್ತು, ಆಕೆಯ ಒಂದು ಕಿಡ್ನಿ ಸಂಪೂರ್ಣವಾಗಿ ಅನುಪಯುಕ್ತವಾಗಿತ್ತು. ಹೀಗಾಗಿ ಅವರಿಗೆ ಅತ್ಯಂತ ವೇಗದಲ್ಲಿ ಕಿಡ್ನಿ ಟ್ರಾನ್ಸ್ಫರ್ ಶಸ್ತ್ರಕ್ರಿಯೆ ಮಾಡಿಕೊಳ್ಳುವುದು ಅವಶ್ಯಕವಾಗಿತ್ತು. ಆಗ ಮಾರ್ಟಿನೆಜ್ ಪ್ರೇಯಸಿಯ ತಾಯಿಗೆ ಕಿಡ್ನಿ ನೀಡುವ ನಿರ್ಣಯವನ್ನು ತೆಗೆದುಕೊಂಡನು.
ಮಾರ್ಟಿನೆಜ್ ಅವರು ಕಿಡ್ನಿ ದಾನ ಮಾಡುವ ವಿಚಾರವನ್ನು ಡಾಕ್ಟರಿಗೆ ತಿಳಿಸಿ ಅವರ ಜೊತೆಗೆ ಚರ್ಚೆ ಮಾಡಿ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣ ಮಾಡಿಕೊಂಡರು. ಪ್ರೇಯಸಿಯ ತಾಯಿಗೆ ಮಾಡಿದ ಶಸ್ತ್ರಕ್ರಿಯೆಯೂ ಯಶಸ್ವಿಯಾಯಿತು. ಮುಂದೆ ಅವರ ಆರೋಗ್ಯ ಸುಧಾರಿಸಿತು. ಆದರೆ ತಾನು ಪ್ರೇಯಸಿಗೆ ಮಾಡಿದ ಈ ಸಹಾಯದ ಬದಲಾಗಿ ಆಕೆ ನನ್ನನ್ನೇ ಮೋಸ ಮಾಡುತ್ತಾಳೆ ಎಂದು ಭಾವಿಸಿರಲಿಲ್ಲ ಎಂದು ವಿಡಿಯೋದಲ್ಲಿ ಮನನೊಂದು ಹೇಳಿದ್ದಾರೆ.
ತಾಯಿಯ ಶಸ್ತ್ರಕ್ರಿಯೆ ಆದ ನಂತರ ಕೆಲವೇ ದಿನಗಳಲ್ಲಿ ಪ್ರೇಯಸಿಯು ಮಾರ್ಟಿನೆಜ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡು ಬೇರೊಬ್ಬ ವ್ಯಕ್ತಿಯ ಜೊತೆಗೆ ಮದುವೆಯಾದಳು. ಈ ಎಲ್ಲ ಘಟನೆಯನ್ನು ಆತ ವಿಡಿಯೋದಲ್ಲಿ ಹೇಳಿದ ನಂತರ ಅನೇಕ ನೇಟಿಜನ್ಸ್ ಗಳು ಮಾರ್ಟಿನೆಜ್ ಜೊತೆಗೆ ತಮ್ಮ ಭಾವನೆಗಳನ್ನು ವ್ಯಕ್ತ ಮಾಡಿದ್ದಾರೆ. ನೀನು ಮಾಡಿರುವ ಈ ತ್ಯಾಗ ತುಂಬಾ ದೊಡ್ಡ ತ್ಯಾಗವಾಗಿದೆ ಎಂದು ಬಾಯಿತುಂಬಾ ಹೊಗಳಿದ್ದಾರೆ.