ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ: ಈ ಭಾರತೀಯ ಸಾಧಕನ ಕಥೆಯನ್ನು ಅಮೆರಿಕಾದ ಶಾಲೆಗಳಲ್ಲಿ ಬೋಧಿಸಲಾಗುತ್ತದೆ!

ವರದಿಗಳ ಪ್ರಕಾರ ವಿಶ್ವ ಮಟ್ಟದಲ್ಲಿ ಪ್ರತಿದಿನವೂ ಕೂಡಾ ಸುಮಾರು ಒಂದೂವರೆ ಲಕ್ಷ ಮರಗಳನ್ನು ಕಡಿಯಲಾಗುತ್ತದೆ. ಹೀಗೆ ಮರಗಳನ್ನು ಕಡಿದ ಜಾಗದಲ್ಲಿ ಬಹಳ ಬೇಗ ಕಾಂಕ್ರೀಟ್ ಕಾಡು ಕೂಡ ನಿರ್ಮಾಣವಾಗಿರುತ್ತದೆ. ಅಂದರೆ ಹಸಿರಿನಿಂದ ಕಂಗೊಳಿಸುತ್ತಿದ್ದ ಜಾಗದಲ್ಲಿ ಮಾನವ ವಾಸಿಸುವ ಸ್ಥಳಗಳ ನಿರ್ಮಾಣವಾಗಿರುತ್ತದೆ. ಮರಗಳ ಈ ಮಟ್ಟದ ನಿರ್ಮೂಲನೆಯು ಕೇವಲ ನೀರು ಹಾಗೂ ವಾಯುವಿನ ಮೇಲೆ ಮಾತ್ರವೇ ದು ಷ್ಪ ರಿಣಾಮವನ್ನು ಬೀರುತ್ತಿಲ್ಲ. ಬದಲಾಗಿ ಅದು ಪ್ರವಾಹ ಹಾಗೂ ಮಳೆಯ ಕೊರತೆಯನ್ನು ಉಂಟುಮಾಡಿದೆ. ಒಂದು ಕಡೆ ಮರಗಳನ್ನು ಕಡಿಯುತ್ತಾ ಇರುವಾಗಲೇ ಮತ್ತೊಂದು ಕಡೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ವಹಿಸಿರುವ ವ್ಯಕ್ತಿಯೊಬ್ಬರು ಈ ವಿಚಾರದಲ್ಲಿ ಕಳೆದ ಕೆಲವು ದಶಕಗಳಿಂದಲೂ ಕೂಡ ಸಕಾರಾತ್ಮಕವಾದ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದ್ದಾರೆ.

ಈ ವ್ಯಕ್ತಿಯು ತಾನು ಒಂಟಿಯಾಗಿಯೇ ತನ್ನ ಶ್ರದ್ಧೆ ಹಾಗೂ ಶ್ರಮದ ಬಲದಿಂದ ಮಾಡುತ್ತಿರುವ ಕಾರ್ಯವನ್ನು, ಅವರ ಆತ್ಮವಿಶ್ವಾಸದಿಂದ ಸಿಕ್ಕಿರುವ ಯಶಸ್ಸನ್ನು ಕುರಿತಾಗಿ ಅಮೆರಿಕಾದ ಶಾಲೆಯಲ್ಲಿ ಬೋಧನೆಯನ್ನು ಮಾಡಲಾಗುತ್ತದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾದವ್ ಪೆಯಾಂಗ್ ಪ್ರಸ್ತುತ ಭಾರತದಲ್ಲಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎನ್ನುವ ಹೆಸರಿನಿಂದಲೇ ಕರೆಯಲ್ಪಡುತ್ತಾರೆ. ಅಸ್ಸಾಂ ರಾಜ್ಯದ ನಿವಾಸಿಯಾಗಿರುವ ಇವರು 1979 ರಲ್ಲಿ ಒಂದು ಭ ಯಂ ಕರವಾದ ಪ್ರವಾಹವನ್ನು ಕಣ್ಣಾರೆ ಕಂಡಿದ್ದರು. ಈ ಪ್ರವಾಹವೂ ಸಂಪೂರ್ಣ ಪ್ರದೇಶದಲ್ಲಿ ಒಂದು ಭೀ ಕ ರ ತೆಯನ್ನು ಸೃಷ್ಟಿಸಿತ್ತು. ಪ್ರವಾಹ ನಿಂತ ನಂತರ ಇಡೀ ಪ್ರದೇಶದಲ್ಲಿ ಕೇವಲ ಮಣ್ಣು ಹಾಗೂ ಕೆಸರು ತುಂಬಿ ಹೋಗಿತ್ತು.

ಆಗ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಜಾದವ್ ಬ್ರಹ್ಮಪುತ್ರ ನದಿಯ ತೀರದಲ್ಲಿದ್ದ ದ್ವೀಪದಂತಹ ತಮ್ಮ ಮನೆಯ ಬಳಿಗೆ ಹೋಗುವಾಗ ಪ್ರವಾಹದಿಂದ ಉಂಟಾದ ದುಸ್ಥಿತಿಯಲ್ಲಿ ಹಾವುಗಳ ಸಹಿತ ಹಲವು ಜೀವಿಗಳು ಸಾ ಯು ತ್ತಿರುವುದನ್ನು ಕಣ್ಣಾರೆ ಕಂಡರು. ಇದನ್ನು ನೋಡಿ ಅವರ ಮನಸ್ಸಿಗೆ ಬಹಳ ಬೇಸರವಾಯಿತು‌. ಆಗಲೇ ಅವರು ಒದ್ದೆ ಮಣ್ಣಿನಿಂದ ಕೂಡಿದ ಆ ಪ್ರದೇಶವನ್ನು ದಟ್ಟ ಅರಣ್ಯವಾಗಿ ಪರಿವರ್ತಿಸಲು ಮನಸ್ಸಿನಲ್ಲಿ ಒಂದು ನಿರ್ಧಾರವನ್ನು ಮಾಡಿದರು. 1963 ರಲ್ಲಿ ಜನಿಸಿದ ಜಾಧವ್ ಅವರು ಈ ಸ್ಪೂರ್ತಿದಾಯಕ ಕಾರ್ಯವನ್ನು ತನ್ನ 16ನೇ ವಯಸ್ಸಿನಲ್ಲಿ ಆರಂಭಿಸಿದರು.

ಅವರ ಪ್ರಯತ್ನದಿಂದಾಗಿ ಅವರ ಮನೆಯ ಸುತ್ತಮುತ್ತಲಿನ ಪ್ರದೇಶವು ಒಂದು ದಟ್ಟವಾದ ಕಾಡಾಗಿ ಪರಿವರ್ತನೆಯಾಗಿದೆ. ಆರಂಭದ ದಿನಗಳಲ್ಲಿ ಜಾದವ್ ಅವರು ಮಾಡುತ್ತಿದ್ದ ಈ ಪ್ರಯತ್ನವನ್ನು ನೋಡಿ ಸ್ಥಳೀಯರು ಹಾಸ್ಯ ಮಾಡುತ್ತಿದ್ದರಂತೆ. ಆದರೆ ದಿನ ಕಳೆದಂತೆ ಗ್ರಾಮಸ್ಥರು ಸಹಾ ಜಾದವ್ ಅವರ ಪ್ರಯತ್ನವನ್ನು ಸಮರ್ಥನೆ ಮಾಡುತ್ತಾ, ಬಿದಿರಿನ ಗಿಡಗಳನ್ನು ಹಾಗೂ ಕೆಲವು ಸಸ್ಯಗಳ ಬೀಜಗಳನ್ನು ನೆಡಲು ನೀಡಿದರಂತೆ. ಅವರು ಹೊಸ ಹೊಸ ಸಸಿಗಳನ್ನು ನೆಟ್ಟು ಅವುಗಳ ಆರೈಕೆಯನ್ನು ಮಾಡುವುದಕ್ಕೆ ಪ್ರಾರಂಭಿಸಿದರು. ಜಾದವ್ ಅವರ ಕಠಿಣ ಪರಿಶ್ರಮದ ಫಲವಾಗಿ ಇಂದು ದಟ್ಟ ಅರಣ್ಯ ಪ್ರದೇಶವೊಂದು ನಿರ್ಮಾಣವಾಗಿದೆ. ಜೋರಾಹಟ್ ನಲ್ಲಿರುವ ಜಂಗಲ್ ಮೊಲೈ ಅರಣ್ಯಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ಇಲ್ಲಿ ಸುಮಾರು1360 ಎಕರೆಗಳ ಪ್ರದೇಶದಲ್ಲಿ ದಟ್ಟವಾದ ಅರಣ್ಯ ವ್ಯಾಪಿಸಿದೆ. ಇದರಲ್ಲಿ ರಾಯಲ್ ಬಂಗಾಳದ ಹುಲಿಗಳು, ಖಡ್ಗ ಮೃಗಗಳು ಹಾಗೂ ಇನ್ನೂ ಅನೇಕ ವಿಶೇಷ ಜಾತಿಯ ಪ್ರಾಣಿ ಹಾಗೂ ಪಕ್ಷಿಗಳು ತಮ್ಮ ನೆಲೆಯನ್ನು ಕಂಡು ಕೊಂಡಿದೆ. ಮುಂಜಾನೆ 5 ಗಂಟೆಗೆ ಎದ್ದು ಸಸ್ಯಗಳ ಆರೈಕೆಯನ್ನು ಆರಂಭಿಸುವ ಇವರ ಪ್ರಯತ್ನಗಳನ್ನು ಗುರುತಿಸಿದ ಭಾರತ ಸರ್ಕಾರವು 2015ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅದೇ ವರ್ಷ ಜಾಧವ್ ಅವರನ್ನು ಫ್ರಾನ್ಸ್ ನಲ್ಲಿ ನಡೆದಂತಹ ಗ್ಲೋಬಲ್ ಕಾನ್ಫರೆನ್ಸ್ ಆಫ್ ಸಸ್ಟೈನಬಲ್ ದೆವಲಪ್ಮೆಂಟ್ ನಲ್ಲಿ ಗೌರವಿಸಲಾಯಿತು.

ಈಗ ಜಾಧವ್ ಅವರ ಸಾಧನೆಯನ್ನು ಅಮೆರಿಕಾದ ಮಕ್ಕಳಿಗೆ ಪಠ್ಯದ ಮೂಲಕ ಬೋಧನೆ ಮಾಡಲಾಗುತ್ತಿದೆ. ಜಾಧವ್ ಅವರ ಅಪಾರವಾದ ಸಾಧನೆಯನ್ನು ಗುರುತಿಸಿ ಕಾಜಿರಂಗ ವಿಶ್ವವಿದ್ಯಾಲಯ ಹಾಗೂ ಅಸ್ಸಾಂ ನ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಇವರ ಜೀವನದ ಕುರಿತಾದ ಒಂದು ಡಾಕ್ಯುಮೆಂಟರಿ ಸಿನಿಮಾ ಕೂಡಾ ಮಾಡಲಾಗಿದ್ದು, ಇದನ್ನು ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಗಿದೆ.