ಫಿಲಂ ಫೇರ್ ಫಂಕ್ಷನ್ ನಲ್ಲಿ ನಟನೊಬ್ಬ ಹಾಟ್ ಗರ್ಲ್ ಮಲೈಕಾಳ ನಡಿಗೆಯ ಸ್ಟೈಲ್ ಮಾಡಿದಾಗ ಮಲೈಕಾಳ ರಿಯಾಕ್ಷನ್ ನೋಡಿ ಹೇಗಿತ್ತು?

ಬಾಲಿವುಡ್ ಬಿಂದಾಸ್ ಗರ್ಲ್ ಮಲೈಕಾ ಅರೋರಾ ಯಾವತ್ತೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಇವರು ನಡಿಗೆಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಇವರ ನಡಿಗೆ ನೆಟ್ಟಿಗರಿಗೆ ತುಂಬಾ ಚುಚ್ಚುತ್ತದೆ. ಇವರ ಯಾವುದೇ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ನಡಿಗೆಯ ಬಗ್ಗೆ ಸಾಕಷ್ಟು ಕಮೆಂಟ್ಗಳು ನೋಡಲು ಸಿಗುತ್ತವೆ. ಅವರ ವಿಶೇಷ ನಡಿಗೆಯ ಚರ್ಚೆ ಈ ಬಾರಿ ಫಿಲಂ ಫೇರ್ ಅವಾರ್ಡ್ ನ ಫಂಕ್ಷನ್ ನಲ್ಲಿ ತುಂಬಾ ಚರ್ಚೆಗೆ ಈಡು ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಹೋಸ್ಟ್ ಆಗಿದ್ದ ಮನೀಶ್ ಪಾಲ್ ಅವರು ಮಲೈಕಾ ಅವರ ನಡಿಗೆಯ ಬಗ್ಗೆ ತುಂಬಾ ಮಾತನಾಡಿದರು ಜೊತೆಗೆ ಅವರ ಹಾಗೆ ನಡೆದು ತೋರಿಸಿದರು.

ಪ್ರಸ್ತುತ ವಿಡಿಯೋವನ್ನು ಫಿಲಂ ಫೇರ್ ಆಫೀಸಿಯಲ್ ಇನ್ಸ್ಟಾಗ್ರಾಮ್ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಶೋ ಹೋಸ್ಟ್ ಮಾಡಿದ ಮನಿಷ್ ಪಾಲ್ ಅವರು ತಾರೆಗಳ ಜೊತೆಗೆ ಸಾಕಷ್ಟು ಮಸ್ತಿ ಮಜಾಕ್ ಮಾಡಿದರು. ಇದೇ ಸಂದರ್ಭದಲ್ಲಿ ಮನೀಶ್ ಅವರು ಮಲೈಕಾ ಅವರ ಜೊತೆಗೆ ಮಾತಿಗಿಳಿದರು. ಅಷ್ಟೇ ಅಲ್ಲ ಎಲ್ಲಾ ತಾರೆಗಳ ಮುಂದೆ ಅವರಂತೆ ನಡೆದು ಸಹ ತೋರಿಸಿದರು. ಮಲೈಕಾ ಅವರ ನಡಿಗೆಯ ಆಕ್ಟಿಂಗ್ ಮಾಡುವಾಗ ಮನೀಶ್ ರ ಸ್ಟೈಲ್ ನೋಡಿ ಎಲ್ಲರ ಜೊತೆಗೆ ಮಲೈಕಾ ಸಹ ನಕ್ಕಿದ್ದೇ ನಕ್ಕಿದ್ದು. ಮನೀಶ್ ಅವರ ನಡಿಗೆ ಸ್ಟೈಲ್ ನೋಡಿ ಸ್ವತಃ ಮಲೈಕಾ ಅವರೇ ಇನ್ನೊಮ್ಮೆ ನಡೆದು ತೋರಿಸಿ ಎಂದು ರಿಕ್ವೆಸ್ಟ್ ಮಾಡುತ್ತಾಳೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

 

View this post on Instagram

 

A post shared by Filmfare (@filmfare)

ವಿಡಿಯೋ ನೋಡಿದ ನಂತರ ಯೂಸರ್ಸ್ ಗಳು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಯೂಸರ್ ಅಂತೂ “ಈ ರೀತಿಯ ಆಕ್ಷನ್ ಕೇವಲ ಮನೀಶ್ ಮಾತ್ರ ಮಾಡಬಹುದು ಹಾ ಹಾ ಹಾ” ಎಂದು ನಕ್ಕಿದ್ದಾನೆ. ಇನ್ನೊಬ್ಬ ಯುಸರ್ “ಮನೀಶ್ ತುಂಬಾ ಚೆನ್ನಾಗಿ ಮಲೈಕಾ ಅವರ ನಡೆಯುವ ಸ್ಟೈಲ್ ಮಾಡಿ ತೋರಿಸಿದ್ದಾನೆ” ಎಂದಿದ್ದಾನೆ.