‘ಫುಲ್ ಜಾಲಿ ಮೂಡ್’ ನಲ್ಲಿ ಡಾನ್ಸ್ ಮಾಡೋ ಕ್ರಿಸ್ ಗೇಲ್ ವಿಡಿಯೋ ನೋಡಿ ಜನರು ಅಂತಿದ್ದಾರೆ ‘ಇದು ಜೀವನ ಅಂದ್ರೆ!’

ಗೇಲ್ ಅವರು ಮೈದಾನದಲ್ಲಿ ದೊಡ್ಡ ದೊಡ್ಡ ಸಿಕ್ಸರ್ ಗಳನ್ನು ಬಾರಿಸಲು ಖ್ಯಾತಿ ಪಡೆದಿದ್ದಾರೆ. ಇದಲ್ಲದೆ ಮೈದಾನದ ಹೊರಗಿನ ಫನ್ ಆಕ್ಟಿವಿಟಿಜ್ ದಿಂದಲೂ ಸಹಿತ ಯಾವತ್ತೂ ತುಂಬಾ ಚರ್ಚೆಯಲ್ಲಿರುತ್ತಾರೆ. ಗೇಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಅನೇಕ ತಮಾಷೆ ಭರಿತವಾದ ವಿಡಿಯೋ ಗಳನ್ನು ಶೇರ್ ಮಾಡುತ್ತಿರುತ್ತಾರೆ.

ಟೆರೇಸ್ ಮೇಲೆ ಡ್ಯಾನ್ಸ್ ಮಾಡುತ್ತ ಮಸ್ತಿ ಮಾಡಿದ ವೀಡಿಯೊ ಒಂದು ಈಗ ಶೇರ್ ಮಾಡಿದ್ದಾರೆ.

ಗೇಲ್ ಅವರು ತಮ್ಮ ಈ ವಿಡಿಯೋ ಕುರಿತು ಏನು ಹೇಳಿಲ್ಲ, ಆದರೆ ಯಾವುದೋ ಹೋಟೆಲ್ ನ ಟೆರೇಸ್ ಮೇಲೆ ಒಬ್ಬರೇ ಡ್ಯಾನ್ಸ್ ಮಾಡುತ್ತ ಕಾಣಿಸಿಕೊಂಡಿದ್ದಾರೆ. ಜೊತೆಗೆ ಒಂದು ಸ್ವಿಮ್ಮಿಂಗ್ ಫುಲ್ ಸಹ ಇದೆ. ಈ ಡಾನ್ಸ್ ಸಮಯದಲ್ಲಿ ಗೇಲ್ ಅವರು ಕೇವಲ ಒಂದು ಶಾರ್ಟ್ ಧರಿಸಿದ್ದಾರೆ ಅಷ್ಟೇ, ಅವರ ಕೈಯಲ್ಲಿ ಒಂದು ಕೆಂಪು ಬಣ್ಣದ ಗ್ಲಾಸ್ ಕೂಡ ಇದೆ.

ನೋಡಿ ಕ್ರಿಸ್ ಗೇಲ್ ಅವರ ಈ ಡಾನ್ಸಿಂಗ್ ಸ್ಟೈಲ್ ವಿಡಿಯೋ.

View this post on Instagram

🔌🪓🧨🔪💉🕺🏾

A post shared by KingGayle 👑 (@chrisgayle333) on

ಕ್ರಿಸ್ ಗೇಲ್ ಅವರ ಮತ್ತೊಂದು ಈ ಕೂಲ್ ಅಂದಾಜು ನೋಡಿ.

ಕ್ರಿಸ್ ಗೇಲ್ ಈಗ ಏಕಾಂಗಿಯಾಗಿ ಮೋಜು ಮಾಡಲು ಪ್ರಾರಂಭಿಸಿದ್ದಾರೆ ಎಂದು ತೋರುತ್ತದೆ. ಕ್ರಿಸ್ ಗೇಲ್ ಅವರು ಈ ಶೈಲಿಯಲ್ಲಿ ಭಾನುವಾರ ಆಚರಿಸುವುದನ್ನು ಕಾಣಬಹುದು.

ಗೇಲ್ ಅವರು ಸಂಡೇ ಕುರಿತು ತಮ್ಮ ಫ್ಯಾನ್ಸ್ ಗಳಿಗೆ ಕೇಳಿದ್ದರು ಒಂದು ಪ್ರಶ್ನೆ.

ಇದಕ್ಕಿಂತ ಮೊದಲು ಶುಕ್ರವಾರದಂದು ಕ್ರಿಸ್ ಗೇಲ್ ಅವರು ತಮ್ಮ ಒಂದು ವಿಡಿಯೋ ಶೇರ್ ಮಾಡುತ್ತ ತಮ್ಮ ಫ್ಯಾನ್ಸ್ ಗಳಿಗೆ ಒಂದು ಪ್ರಶ್ನೆ ಕೇಳಿದ್ದರು, ‘ ನೀವು ನನಗೋಸ್ಕರ ಈ ವೀಕೆಂಡ್ ಸಲುವಾಗಿ ಯಾವ ಪ್ಲಾನ್ ಮಾಡಿದ್ದೀರಿ?’. ಗೇಲ್ ಅವರು ಈ ರೀತಿಯ ಮನಸ್ಥಿತಿಯನ್ನು ಇಷ್ಟಪಡುತ್ತಾರೆ, ಎಂದು ಈ ವೀಡಿಯೊದೊಂದಿಗೆ ಅಭಿಮಾನಿಗಳಿಗೆ ತಿಳಿಸಿದ್ದರು.

ನೋಡಿ ವಿಡಿಯೋ- ವೀಕೆಂಡ್ ನಲ್ಲಿ ಕ್ರಿಸ್ ಗೇಲ್ ಅವರು ಏನು ಇಷ್ಟ ಪಡುತ್ತಾರೆ ನೀವೇ ನೋಡಿ.