ಫೋಟೋದಲ್ಲಿರುವ ಮಹಿಳೆಯ ವಯಸ್ಸು 45 ಎಂದರೆ ನಂಬುವಿರಾ? ಗೃಹಿಣಿಯಿಂದ ಬಾಡಿ ಬಿಲ್ಡರ್ ಆದ ಮಹಿಳೆಯ ಈ PHOTOS ನೋಡಿದರೆ ಸಲ್ಯೂಟ್ ಎನ್ನುವಿರಿ!
ಈ ಫೋಟೋದಲ್ಲಿ ಕಂಡುಬರುತ್ತಿರುವ ಮಹಿಳೆ 45 ರ ಪ್ರಾಯದವಳಿದ್ದಾಳೆ ಎಂದರೆ, ನಿಮಗೂ ನಿಜವೆನಿಸಲಿಕ್ಕಿಲ್ಲ.
ಭಾರತ ಪುರುಷ ಪ್ರಧಾನ ದೇಶವಾಗಿರುವದರಿಂದ ಇಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಸಮಯ ಬದಲಾದಂತೆ ಜನರ ವಿಚಾರಗಳು ಬದಲಾಗುತ್ತ ಬಂದವು. ಶಿಕ್ಷಣ, ಆಧುನಿಕೀಕರಣ, ಮಾಧ್ಯಮಗಳ ಬಳಕೆ, ಹೀಗಾಗಿ ಈ ಮಹಿಳೆಯರ ಸ್ವಾತಂತ್ರ್ಯ, ಮತ್ತು ಸಬಲಿಕರಣಗಳ ಬಗ್ಗೆ ನಿರ್ಮಾಣವಾದ ಕಾನೂನುಗಳು ಹೀಗೆ ಸ್ತ್ರೀಯರ ಬಗ್ಗೆ ಮನುಷ್ಯನ ವಿಚಾರ ಮಾಡುವ ಪದ್ಧತಿಯಲ್ಲಿ ಧನಾತ್ಮಕವಾಗಿ ಬದಲಾಗುತ್ತ ಬಂದಿತು. ನೂರಕ್ಕೆ ನೂರರಷ್ಟು ಇಲ್ಲದಿದ್ದರೂ ಸಮಾಧಾನಕರವಾದ ಬದಲಾವಣೆಗಳು ಕಂಡು ಬರುತ್ತಿವೆ. ಹಳ್ಳಿಗಳಲ್ಲಿ ಪರಿಸ್ಥಿತಿ ಇನ್ನು ಬಹಳಷ್ಟು ಸುಧಾರಿಸಬೇಕಿದೆ.
ಭಾರತದಲ್ಲಿ ಇಂಥ ಪರಿಸ್ಥಿತಿಗಳು ಇರುವದರಿಂದಲೇ ಭಾರತದ ಮಹಿಳೆಯರ ಆಸೆ ಆಕಾಂಕ್ಷೆಗಳು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಾಲು ಮುರಿದುಕೊಂಡು ಬಿದ್ದು ಬಿಡುತ್ತವೆ. ಆದರೆ ಕೆಲವು ಸ್ತ್ರೀಯರು ಮಾತ್ರ ತಮ್ಮ ಕನಸುಗಳನ್ನು ಪೂರ್ಣಗೊಳಿಸಲು ಏನೇ ಕಷ್ಟಗಳು ಬಂದರೂ ಅವುಗಳನ್ನು ಮೆಟ್ಟಿ ನಿಲ್ಲುವರು. ಇಂಥ ಮಹಿಳೆಯರಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿರುವ ‘ಕಿರಣ್ ದೆಂಬಲಾ’ ಅವಳ ಬಗ್ಗೆ ಈ ಲೇಖನದಲ್ಲಿ ತಿಳಿಯುವಾ.
ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ಕಿರಣ್ ದೆಂಬಲಾ ಅವರು ಮದುವೆಯ ನಂತರ ಹೈದ್ರಾಬಾದಿನಲ್ಲಿ ತಮ್ಮ ವಾಸ್ತವ್ಯ ಹೂಡಿದರು. 2006 ರಲ್ಲಿ ಅವರ ಮೆದುಳಿನಲ್ಲಿ ಒಂದು ಟ್ಯೂಮರ್ ಇರುವದು ಗೊತ್ತಾಯಿತು. ಮುಂದೆ ಅದರ ಮೇಲೆ 3 ವರ್ಷಗಳ ವರೆಗೆ ಉಪಚಾರ ಮಾಡಿಕೊಂಡು ಕಡಿಮೆ ಮಾಡಿಕೊಂಡರು. ಇಷ್ಟೆಲ್ಲ ಮಾಡುವಾಗ ಅವರ ತೂಕ ಹೆಚ್ಚಾಯಿತು. ತನ್ನ ಆರೋಗ್ಯಕ್ಕೆ ಬಂದ ಈ ಸಂಕಟದಿಂದ ದೂರಾದ ಮೇಲೆ ವ್ಯಾಯಾಮದ ಕಡೆಗೆ ಗಮನ ಕೊಟ್ಟು ಮತ್ತೆ ಜೀವನವನ್ನು ಸುಂದರವನ್ನಾಗಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು.
ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಡಾಕ್ಟರ್ಸ್ ಗಳ ಮಾರ್ಗದರ್ಶನದ ಪ್ರಕಾರ ಜಿಮ್ ಗೆ ಕೂಡಿಕೊಂಡರು. ಅವಿರತ ಪ್ರಯತ್ನದಿಂದಾಗಿ 7 ತಿಂಗಳಲ್ಲಿ 24 ಕಿಲೋ ಗಳ ವರೆಗೆ ತಮ್ಮ ತೂಕವನ್ನು ಇಳಿಸಿಕೊಂಡರು. ಇದನ್ನೆಲ್ಲ ಮಾಡುವಾಗ ಅಲ್ಲಿಯ ಜ್ಞಾನವನ್ನು ಸಂಪಾದಿಸಿ ತಾವೇ ಸ್ವತಃ ಜಿಮ್ ಟ್ರೆನರ್ ಆದರು. ಅಷ್ಟೇ ಅಲ್ಲ ಸೆಲಿಬ್ರಿಟಿಗಳಿಗೂ ಟ್ರೇನಿಂಗ್ ಕೊಡಲು ಪ್ರಾರಂಭಿಸಿದರು. ಸತತ ಪ್ರಯತ್ನದಿಂದಾಗಿ 6 ಪ್ಯಾಕ್ ಆಬ್ಸ್ ಬಾಡಿ ತಯಾರಿಸಿಕೊಂಡರು. ಆತ್ಮವಿಶ್ವಾಸ ಮತ್ತು ಸಾಧಿಸುವ ಛಲ ಎರಡನ್ನು ಕಣ್ಣು ಮುಂದಿಟ್ಟುಕೊಂಡು ಈಗ ಒಂದು ಪೈಲವಾನ್ ಹಾಗೆ ಸುಪುಷ್ಟವಾದ ಬಾಡಿಯನ್ನು ಕಿರಣ್ ಅವರು ತಯಾರಿಸಿಕೊಂಡಿದ್ದಾರೆ.
ಕಿರಣ್ ಅವರು ಎರಡು ಮಕ್ಕಳು ತಾಯಿಯಾಗಿದ್ದರೂ ಸಹಿತ ಸದ್ಯಕ್ಕೆ ಜನಪ್ರಿಯ ಫೈಟ್ ನೆಸ್ ಟ್ರೆನರ್ ಆಗಿ ತಮ್ಮ ಪರಿಚಯವನ್ನು ಮಾಡಿಕೊಂಡಿದ್ದಾರೆ. 45 ರ ಪ್ರಾಯದ ಕಿರಣ ಅವರ ಮುಂದೆ ಪುರುಷ ಬಾಡಿ ಬಿಲ್ಡರ್ ಗಳು ಸಹಿತ ನಾಚುತ್ತಾರೆ. ಭಾರತದ ಕಡೆಯಿಂದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 6 ನೆ ಕ್ರಮಾಂಕವನ್ನು ಗಿಟ್ಟಿಸಿ ಸಮಾಧಾನವಾಗಬೇಕಾಯಿತು.