ಫೋಟೋ ಜೂಮ್ ಮಾಡಿ ನೋಡಬಹುದು: ನಿಮ್ಮ ಕಣ್ಣುಗಳಿಗೊಂದು ಚಾಲೆಂಜ್! ಎದುರಿಗೆ ಕಾಣುವ ಬೆಡ್ ಶೀಟ್ ಮೇಲೆ ಬಿದ್ದಿದೆ ಸ್ಮಾರ್ಟ್ ಫೋನ್! ಶೋಧಿಸಿ ಹೇಳುವ ದೃಷ್ಟಿ ನಿಮ್ಮ ಕಣ್ಣುಗಳಿಗಿದೆಯೇ?
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಫೋಟೋಗಳು ವೈರಲ್ ಆಗುತ್ತದೆ. ಅದರಲ್ಲಿ ಫಜಲ್ಸ್ ಫೋಟೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಟೈಂಪಾಸ್ ಜೊತೆಗೆ ಯಾವುದಾದರೂ ಆಟ ಆಡುವುದು ಯಾರಿಗಾದರೂ ಇಷ್ಟವೇ. ದಿನಾಲು ಓದುವ ಅದೇ ಅದೇ ಸುದ್ದಿಗಳಿಂದ ನೇಟಿಜನ್ಸ್ ಗಳ ತಲೆ ಕೆಟ್ಟು ಹೋಗಿರುತ್ತದೆ ಮತ್ತು ಕೆಲವೊಮ್ಮೆ ಬೇಸರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಇಂಥ ಫಜಲ್ಸ್ ಫೋಟೋಗಳು ನೇಟಿಜನ್ಸ್ ಗಳ ಮನಸ್ಸಿಗೆ ಬೇರೆಯೇ ಮುದ ನೀಡುತ್ತವೆ. ಇಂಥ ಫೋಟೋಗಳಲ್ಲಿ ಕಾಣದಿರುವ ವಸ್ತುಗಳನ್ನು ಹುಡುಕುವುದರಿಂದ ಆಟದ ಜೊತೆಗೆ ಬೇಸರಿಸಿದ ಮನಸ್ಸಿಗೆ ಸ್ವಲ್ಪ ಉತ್ಸಾಹ, ಉಲ್ಲಾಸ ಸಿಕ್ಕಂತೆ ಆಗುತ್ತದೆ.
ಪ್ರಸ್ತುತ ಚಿತ್ರದಲ್ಲಿ ಬೆಡ್ ಶೀಟ್ ಕಾಣಿಸುತ್ತಿದೆ. ಈ ಬೆಡ್ ಶೀಟ್ ಮೇಲೆ ಒಂದು ಮೊಬೈಲ್ ಬಿದ್ದಿದೆ. ಅದು ಸಹಜವಾಗಿ ನೋಡಲು ಕಣ್ಣಿಗೆ ಗೋಚರಿಸುತ್ತಿಲ್ಲ. ತೀಕ್ಷ್ಣ ದೃಷ್ಟಿಯುಳ್ಳವರಿಗೆ ಮಾತ್ರ ಅದು ಗೋಚರಿಸುವುದು.
ಹಾಗಾದರೆ ನಿಮ್ಮ ತೀಕ್ಷ್ಣ ಕಣ್ಣುಗಳಿಗೆ ಅಲ್ಲಿ ಅವಿತು ಕುಳಿತಿರುವ ಫೋನ್ ಕಾಣಿಸುತ್ತಿದೆಯಾ? ಟ್ರೈ ಮಾಡಿ ನೋಡೋಣ. ಈ ಫೋಟೋ 2016 ರಿಂದ ಸೋಶಿಯಲ್ ಮೀಡಿಯಾದಲ್ಲಿ ಸುಳಿದಾಡುತ್ತಿದೆ. ಈ ಫೋಟೋವನ್ನು ಇಲ್ಲಿಯವರೆಗೆ 1 ಲಕ್ಷ 52 ಸಾವಿರ ಜನರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಪಜಲ್ ಫೋಟೋ ಸುಮಾರು 22 ಸಾವಿರ ಜನರು ಶೇರ್ ಮಾಡಿದ್ದಾರೆ.

ಒಂದು ವೇಳೆ ಈ ಟಾಸ್ಕ್ ನಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಕಣ್ಣುಗಳು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿವೆ ಅಂತಲೇ ಅರ್ಥ. ಆದರೆ ನಿಮ್ಮ ಕಣ್ಣುಗಳಿಗೆ ಈ ಬೆಡ್ ಶೀಟ್ ನಲ್ಲಿ ಅಡಗಿ ಕುಳಿತಿರುವ ಫೋನನ್ನು ಹುಡುಕಾಡಲು ಸಾಧ್ಯವಾಗದಿದ್ದರೆ ಅದಕ್ಕೆ ನಾವು ಸಹಾಯ ಮಾಡುತ್ತೇವೆ. ಬೆಡ್ ಶೀಟ್ ಮೇಲೆ ಮೊಬೈಲ್ ಬೋರಲಾಗಿ ಬಿದ್ದಿದೆ. ಅದರ ಹಿಂದಿನ ಕವರ್ ಬೆಡ್ ಸೀಟಿನ ಡಿಸೈನ್ ನ್ನೇ ಹೊಂದಿದೆ. ಹೀಗಾಗಿ ಅದು ಸಹಜವಾಗಿ ನೋಡುಗರ ಕಣ್ಣಿಗೆ ಗೋಚರಿಸುತ್ತಿಲ್ಲ. ಚಿತ್ರದಲ್ಲಿಯೇ ಹುಡುಕಾಡಲು ಯತ್ನಿಸುತ್ತಿರುವ ಫೋನ್ ಬೆಡ್ ಶೀಟ್ ಮೇಲೆ ಇಟ್ಟಿರುವ ಟೇಬಲ್ ನ ಬಲಭಾಗದ ಹತ್ತಿರ ಕಂಡುಬರುತ್ತದೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಫೋನ್ ಇದ್ದದ್ದು ಕಂಡುಬರುತ್ತದೆ. ಗೊತ್ತಾಯ್ತಾ ಮಿತ್ರರೇ ಫೋನ್ ಎಲ್ಲಿದೆ ಅಂತ?
