ಫೋಟೋ ಝೂಮ್ ಮಾಡಿ ನೋಡಬಹುದು: ವೆಲಂಟೈನ್ ಸ್ಪೆಷಲ್ ಈ ವೈರಲ್ ಫೋಟೋದಲ್ಲಿ ಹಾರ್ಟ್ ಶೇಪ್ ಬಲೂನ್ ಗುರುತಿಸಿ ಹೇಳಿ ನೋಡೋಣ….
ವೆಲಂಟೈನ್ ವೀಕ್ ಪ್ರಾರಂಭವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಿಂದ ಹಿಡಿದು ಮಾರುಕಟ್ಟೆಗಳ ವರೆಗೆ ಎಲ್ಲವೂ ಪ್ರೇಮಕ್ಕೆ ಸಂಬಂಧಿಸಿದ ವಿಷಯಗಳಿಂದಲೇ ತುಂಬಿ ಹೋಗಿದೆ ಎಂದರೆ ತಪ್ಪಲ್ಲ. ಬ್ರಿಟಿಷ್ ರೀಟೇಲರ್ 247 ಬ್ಲಾಯಿಂಡ್ಸ್ ವೆಲಂಟೈನ್ ಥೀಮ್ ನಿಂದ ಕೂಡಿದ ಒಂದು ಪಜಲ್ ಫೋಟೋ ತಂದಿದೆ. ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ. ಜೊತೆಗೆ ಪ್ರಸ್ತುತ ಫೋಟೋ ವೆಲಂಟೈನ್ ಥೀಮ್ ಮೇಲೆ ಆಧಾರಿತವಾಗಿರುವದರಿಂದ ಸ್ವಲ್ಪ ಹೆಚ್ಚೇ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಹಾರ್ಟ್ ಶೇಪ್ ಬಲೂನ್ ಒಂದಿದೆ. ಅದನ್ನು ಶೋಧಿಸಬೇಕಾಗಿದೆ. ಹಾಗಾದರೆ ನಿಮ್ಮ ಸೂಕ್ಷ್ಮ ಕಣ್ಣುಗಳು ಈ ಚಾಲೆಂಜ್ ನ್ನು ಸ್ವೀಕರಿಸುವದೇ? ಒಂದು ವೇಳೆ ಯಸ್ ಎಂದರೆ ಒಂದು ಕೈ ನೋಡಿಯೇ ಬಿಡಿ.

ಪ್ರಸ್ತುತ ಚಿತ್ರದಲ್ಲಿ ಹಾರ್ಟ್ ಶೇಪ್ ಬಲೂನ್ ಶೋಧಿಸಲು ನೇಟಿಜನ್ಸ್ ಗಳು ಭರ್ಜರಿ ಪ್ರಯತ್ನ ಮಾಡುತ್ತಿದ್ದಾರೆ. ಹಾಗೂ ಇದರಲ್ಲಿ ತುಂಬಾ ಮಜಾ ಸಹ ಬರುತ್ತಿದೆ. ಫೋಟೋ ಗುಲಾಬಿ ಬಣ್ಣದಿಂದ ಕೂಡಿದ್ದು ಅದರಲ್ಲಿ ಅನೇಕ ಧನುಷ್ಯ, ಹೃದಯ ಹಾಗೂ ಗುಲಾಬಿ ಹೂವಿನ ಚಿತ್ರಗಳು ಕಂಡು ಬರುತ್ತಿವೆ. ಅದರಲ್ಲಿ ಒಂದೇ ಒಂದು ಹಾರ್ಟ್ ಶೇಪ್ ಬಲೂನ್ ಅಡಗಿದೆ ಅದಕ್ಕೆ ಕೆಳಗೆ ಒಂದು ಪುಟ್ಟ ದಾರ ಅಥವಾ ರಿಬ್ಬನ್ ಇದೆ. ಅದನ್ನು ನಿಮಗೆ ಶೋಧಿಸಬೇಕಾಗಿದೆ. ಪ್ರಶ್ನೆ ಜಟಿಲವಾಗಿದೆ. ಆದರೆ ಪಜಲ್ ಬಿಡಿಸುವವರಿಗೆ ಮತ್ತು ಸೂಕ್ಷ್ಮ ದೃಷ್ಟಿಯುಳ್ಳ ವ್ಯಕ್ತಿಗಳಿಗೆ ಮತ್ತು ಉತ್ತರವನ್ನು ಹುಡುಕಿಯೇ ತೀರುವ ಛಲಗಾರರಿಗೆ ಇದೇನು ಕಷ್ಟದ ಕೆಲಸವಲ್ಲ.
ಮಿತ್ರರೇ, ಒಂದು ವೇಳೆ ನೀವೂ ಅನೇಕ ಸಲ ಪ್ರಯತ್ನಿಸಿದರೂ ಉತ್ತರ ಹುಡುಕುವಲ್ಲಿ ಯಶಸ್ವಿಯಾಗದೆ ಇದ್ದರೆ ನೊಂದುಕೊಳ್ಳಬೇಡಿ. ನಿಮಗಾಗಿ ನಾವು ಸಹಾಯ ಮಾಡುತ್ತೇವೆ. ಇಲ್ಲಿ ಕೆಳಗೆ ನೀಡಿದ ಫೋಟೋ ನೋಡಿ. ಅಲ್ಲಿ ಉತ್ತರವನ್ನು ನೀಡಿದ್ದೇವೆ. ನೀವೂ ಹುಡುಕಿದ ಉತ್ತರ ಸರಿ ಅಥವಾ ತಪ್ಪು ಅದನ್ನು ಸಹ ಅಲ್ಲಿ ನೋಡಬಹುದು.

ಆಪ್ಟಿಕಲ್ ಇಲ್ಯೂಜನ್ ಒಳಗೊಂಡಿರುವ ಫೋಟೋ ಇದಾಗಿದೆ. ಈ ರೀತಿಯ ಆಪ್ಟಿಕಲ್ ಇಲ್ಯೂಜನ್ ರೀತಿಯ ಪಜಲ್ಸ್ ಗಳ ಉತ್ತರ ಹುಡುಕಲು ಕಷ್ಟವಾಗುತ್ತದೆ ಹಾಗೂ ತುಂಬಾ ಸಮಯ ಖರ್ಚು ಆಗುತ್ತದೆ. ಆದರೆ ಒಂದು ಮಾತ್ರ ನಿಜ ಟೈಮ್ ಪಾಸ್ ಮಾತ್ರ ಚೆನ್ನಾಗಿ ಆಗುತ್ತದೆ.