ಫೋಟೋ ತೆಗೆಸಿಕೊಳ್ಳಲು ಬಂದ ಪೋಲಿಸನಿಗೆ ಬದಿಗೆ ಸರಿಸಿದ ನಂತರ, ಅಕ್ಷಯ್ ಕುಮಾರ್ ಮಾಡಿದ ಈ ಕೃತ್ಯಕ್ಕೆ ಎಲ್ಲರೂ ಹೊಗಳುತ್ತಿದ್ದಾರೆ.

ಬಾಲಿವುಡ್ ಕಿಲಾಡಿ ಎಂದೆ ಪರಿಚಿತರಾದ ಅಕ್ಷಯ್ ಕುಮಾರ್ ಅವರು ಸದ್ಯ ಮುಂಬರುವ ‘ಅತರಂಗಿ ರೆ’ ಚಿತ್ರದಿಂದಾಗಿ ತುಂಬಾ ಚರ್ಚೆಯಲ್ಲಿ ಇದ್ದಾರೆ. ಇವರ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಅವರದೇಯಾದ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಅಕ್ಷಯ್ ಕುಮಾರ್ ಅವರಿಗೆ ನಿಜಕ್ಕೂ ಹಾಡಿ ಹೊಗಳುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರ ಈ ವಿಡಿಯೋ ಸೆಲೆಬ್ರಿಟಿ ಫೋಟೋಗ್ರಾಫರ್ ಆದ ವಿರಲ್ ಭಯಾನಿ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಅಕ್ಷಯ್ ಕುಮಾರ್ ಫೋಟೋಗ್ರಾಫರ್ ಮುಂದೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಅದೇ ಸಮಯಕ್ಕೆ ಅಲ್ಲಿ ಒಬ್ಬ ಪೊಲೀಸ್ ನು ಅಕ್ಷಯ್ ಕುಮಾರ್ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಬರುತ್ತಾನೆ. ಪೊಲೀಸನು ಅಕ್ಷಯ್ ಕುಮಾರ್ ಅವರ ಮುಂದೆ ಬಂದದ್ದನ್ನು ನೋಡಿ ಅಕ್ಷಯ್ ಅವರ ಬಾಡಿಗಾರ್ಡ್ ಆತನನ್ನು ಬದಿಗೆ ಸರಿಸುತ್ತಾನೆ. ಇದನ್ನು ನೋಡಿದ ಅಕ್ಷಯ್ ಕುಮಾರ್ ಅವರು ತಕ್ಷಣ ಬಾಡಿಗಾರ್ಡ್ ಗೆ ನಿಲ್ಲಿಸಿ ಪೊಲೀಸನ ಜೊತೆಗೆ ಫೋಟೋ ಕ್ಲಿಕ್ ಮಾಡಿಕೊಳ್ಳುತ್ತಾರೆ. ಅಕ್ಷಯ್ ಅವರ ಇದೇ ವಿಡಿಯೋ ನೋಡಿ ನೇಟಿಜನ್ಸ್ ಗಳು ಅಕ್ಷಯ್ ಅವರ ಈ ಕೃತ್ಯಕ್ಕೆ ಹೊಗಳುತ್ತಿದ್ದಾರೆ.

ವಿಡಿಯೋ ನೋಡಿ

‘ಸೂರ್ಯವಂಶಿ’ ಚಿತ್ರದ ನಂತರ ಅಕ್ಷಯ್ ಕುಮಾರ್ ಅವರು ಬಹುಬೇಗ ‘ಅತರಂಗಿ ರೇ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಡಿಸೆಂಬರ್ 24 ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಜೊತೆಗೆ ಸಾರಾ ಅಲಿಖಾನ್ ಮತ್ತು ನಟ ಧನುಷ್ ಅವರು ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.