ಫ್ಲೈ ಓವರ್ ಮೇಲೆ ಅತಿ ವೇಗವಾಗಿ ಬಂದ ಕಾರು, ಮುಂದೆ ನಡೆದಿದ್ದು ನೋಡಿದರೆ ಮೈ ನಡಗುವುದು ಖಚಿತ!

ರಸ್ತೆ ಸಂಚಾರದ ವಿಷಯ ಬಂದಾಗಲೆಲ್ಲಾ ಪ್ರಮುಖವಾಗಿ ನೆನಪಿಡಬೇಕಾದ ಅಂಶವೆಂದರೆ ಅದು ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದು. ಆದರೆ ವಿಪರ್ಯಾಸ ಏನೆಂದರೆ ನಮ್ಮ ದೇಶದಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ಅದೆಷ್ಟೋ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಸಂಚಾರಿ ನಿಯಮಗಳ ಪಾಲನೆ ತಮ್ಮ ಪ್ರಾಣರಕ್ಷಣೆಗೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಎನ್ನುವುದನ್ನು ಜನ ತಿಳಿದಿದ್ದಾರೆ ಆದರೆ ಅದರ ಹೊರತಾಗಿಯೂ ಪ್ರಾಣವನ್ನು ಪಣಕ್ಕಿಟ್ಟು, ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಸಂಚರಿಸಿ ಅದೆಷ್ಟೋ ಜನ ಅಪಾಯಗಳಿಗೆ ಆಹ್ವಾನವನ್ನು ನೀಡಿದರೆ, ಇನ್ನೂ ಕೆಲವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ವಿಷಯಗಳು ಪ್ರತಿನಿತ್ಯ ಸುದ್ದಿಯಾದರೂ ಕೂಡಾ ಬಹಳಷ್ಟು ಜನರಲ್ಲಿ ಬದಲಾವಣೆ ಎನ್ನುವುದು ಮಾತ್ರ ಲವಲೇಶವೂ ಕಾಣುತ್ತಿಲ್ಲ.

ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಂಭವಿಸುವಂತಹ ಅದೆಷ್ಟೋ ಅಪಘಾತಗಳ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ಅಥವಾ ಘಟನೆಗಳಲ್ಲಿ ಅಪಘಾತಕ್ಕೆ ಪ್ರಮುಖ ಕಾರಣ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ವಾಹನವನ್ನು ಚಲಾಯಿಸಿದ್ದೇ ಆಗಿರುತ್ತದೆ. ಇಂತಹ ಘಟನೆಗಳನ್ನು ನೋಡಿದಾಗ ಜನರು ಅವುಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಕಾಮೆಂಟದ ಗಳನ್ನು ಮಾಡುತ್ತಾರೆ. ಆದರೆ ಇವೆಲ್ಲವುಗಳ ಪರಿಣಾಮ ಎನ್ನುವಂತಹ ಒಂದು ಸಕಾರಾತ್ಮಕ ಬದಲಾವಣೆ ಎನ್ನುವುದು ಮಾತ್ರ ಇನ್ನು ಸಾಧ್ಯವಾಗಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಬಹಳ ವೈರಲ್ ಆಗಿದೆ.‌ ರ‌್ಯಾಷ್ ಡ್ರೈವಿಂಗ್ ಅಥವಾ ಬಹಳ ವೇಗದಿಂದ ವಾಹನವನ್ನು ಚಲಾಯಿಸಿ ಹೇಗೆ ಅಪಘಾತಕ್ಕೆ ಅತಿ ವೇಗವೇ ಕಾರಣವಾಯಿತು ಎನ್ನುವುದನ್ನು ತೋರಿಸುವ ದೃಶ್ಯ ಎಲ್ಲರ ಮುಂದೆ ಬಂದಿದೆ. ಈ ವಿಡಿಯೋವನ್ನು ನೋಡಿದಾಗ ಒಂದು ಕ್ಷಣ ದಿಗ್ಬ್ರಮೆಗೊಳ್ಳುತ್ತೇವೆ. ನಾವು ನೋಡಿದ್ದು ಏನು ಎಂದು ಆ ಘಾ ತಕ್ಕೆ ಒಳಗಾಗುತ್ತೇವೆ. ಹೌದು ವೈರಲ್ ವಿಡಿಯೋದಲ್ಲಿ ನೋಡಿದಾಗ, ಇದು ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ ನ ಗಚ್ಚಿಬೋಲಿ ಎನ್ನುವ ಸ್ಥಳದಲ್ಲಿನ ಒಂದು ಫ್ಲೈಓವರ್ ಮೇಲೆ ನಡೆದಂತಹ ಘಟನೆ ಎನ್ನಲಾಗಿದ್ದು, ಫ್ಲೈ ಓವರ್ ಮೇಲೆ ಬಂದಂತಹ ಕಾರೊಂದು ಹೇಗೆ ಅಪಘಾತಕ್ಕೆ ಗುರಿಯಾಯಿತು ಎನ್ನುವುದನ್ನು ನೋಡಬಹುದಾಗಿದೆ.

ಅತಿ ವೇಗವಾಗಿ ಬಂದಂತಹ ಕಾರು ಫ್ಲೈಓವರ್ ಮೇಲೆ ತಿರುವಿನಲ್ಲಿ, ಟರ್ನ್ ತೆಗೆದುಕೊಳ್ಳುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದಂತೆ ಕಂಡುಬಂದಿದೆ. ವಾಹನದ ವೇಗದ ಕಾರಣದಿಂದಾಗಿ ಕಾರು ಫ್ಲೈ ಓವರ್ ಮೇಲಿಂದ ಗಾಳಿಯಲ್ಲಿ ಹಾರಿ ಸುಮಾರು ಅಡಿಗಳ ಕೆಳಗೆ ಬಿದ್ದಿದೆ. ಇನ್ನು ವರದಿಗಳು ಅಥವಾ ಮಾಹಿತಿಯ ಪ್ರಕಾರ ಆ ಅನಿರೀಕ್ಷಿತ ಅವಘಡದಲ್ಲಿ ಕೆಳಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಬ್ಬ ಮಹಿಳೆಯ ಪ್ರಾಣ ಕೂಡಾ‌ ಹೋಗಿದೆ ಎನ್ನಲಾಗಿದೆ. ಕಾರಿನ ಚಾಲಕನ ಅತಿವೇಗದ ಚಾಲನೆಯು ಆತನಿಗೆ ಅಪಾಯವನ್ನು ತಂದೊಡ್ಡಿದ್ದು, ಮಾತ್ರವೇ ಅಲ್ಲದೆ ಒಂದು ಅಮಾಯಕ ಜೀವಕ್ಕೂ ಕುತ್ತಾಗಿದೆ. ನಿಜಕ್ಕೂ ಈ ಘಟನೆ ವಾಹನ ಚಾಲನ ಮಾಡುತ್ತಿದ್ದ ವ್ಯಕ್ತಿಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುವಂತಿದೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ಜನರು ಆ ಕಾರನ್ನು ಚಾಲನೆ ಮಾಡುತ್ತಿದ್ದವನು, ನಿಜಕ್ಕೂ ಫ್ಲೈ ಓವರ್ ಮೇಲೆ ಫ್ಲೈಓವರ್ ಮಾಡಿದ್ದಾನೆ ಎಂದು ಹಾಸ್ಯ ಮಾಡಿದ್ದಾರೆ. ಫ್ಲೈ ಓವರ್ ಎಂದರೆ ನಿಜವಾದ ಅರ್ಥ ಏನು ಎಂಬುದನ್ನು ಆ ಚಾಲಕ ತಿಳಿದುಕೊಂಡಿದ್ದಾನೆ ಎಂದು ವ್ಯಂಗ್ಯ ಮಾಡಿದ್ದಾರೆ. ಒಂದಷ್ಟು ಜನರು ಕಾರಿನ ಚಾಲಕನದು ತಪ್ಪಿದೆ, ಅದೇ‌ವೇಳೆ ಫ್ಲೈ ಓವರ್ ನಿರ್ಮಾಣದ ವಿನ್ಯಾಸವು ಕೂಡಾ ಸರಿಯಿಲ್ಲ ಎಂದು, ಫ್ಲೈಓವರ್ ನಲ್ಲಿ ತಿರುವುಗಳು ಇರುವ ಕಾರಣದಿಂದಲೇ ಇಂತಹುದೊಂದು ಅವಘಡ ಸಂಭವಿಸಿದೆ ಎನ್ನುತ್ತಾ, ಆದ ಅಪಘಾತಕ್ಕೆ ಫ್ಲೈಓವರ್ ಕಾರಣ ಎಂದಿದ್ದಾರೆ. ಏನೇ ಆದರೂ ಜನ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುವುದು ಸಹಜ. ಆದರೆ ಅತಿವೇಗದ ಪ್ರಯಾಣ ಪ್ರಾಣಕ್ಕೆ ಸಂಚಕಾರ ಎನ್ನುವುದು ಸಹಾ ವಾಸ್ತವ.