ಬಂತು ದೀಪಾವಳಿ; ಪಟಾಕಿ ಉಡಾಯಿಸಲು ಆತುರ ಪಡುತ್ತಿರುವ ನಾಯಿಯ ಅವಾಂತರ ನೋಡಿ! ನಕ್ಕು ನಕ್ಕು ಸುಸ್ತೋ ಸುಸ್ತು!

ಮನೆಯಲ್ಲಿಯ ಸಾಕು ಪ್ರಾಣಿಗಳಿಂದ ಕೆಲವೊಮ್ಮೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗುತ್ತವೆ. ಈ ಸಾಕು ಪ್ರಾಣಿಗಳು ಯಾವಾಗ ಯಾವ ರೀತಿ ವರ್ತಿಸುತ್ತವೆ ಎಂಬುದು ತಿಳಿಯುವುದೇ ಇಲ್ಲ. ಸದ್ಯದ ವಿಡಿಯೋ ನೋಡಿದಾಗ ನೀವು ನಕ್ಕು ನಕ್ಕು ಸುಸ್ತಾಗುವಿರಿ ನಿಶ್ಚಿತ. ಏಕೆಂದರೆ ಇಲ್ಲಿ ಪುಟ್ಟ ನಾಯಿ ದೊಡ್ಡ ಅವಾಂತರವೇ ಸೃಷ್ಟಿ ಮಾಡಿದೆ.

ದೀಪಾವಳಿಯಲ್ಲಿ ಅನೇಕ ರೀತಿಯ ಪಟಾಕಿಗಳನ್ನು ಮಕ್ಕಳು ಅತ್ಯಂತ ಆನಂದದಿಂದ ಮನೆಯ ಮುಂದೆ ಹಾರಿಸುತ್ತಾರೆ. ಅದರಲ್ಲಿಯೇ ಒಂದು ಫೌಂಟನ್ ಪಟಾಕಿಯನ್ನು ಮನೆಯ ಮುಂದೆ ಹಾರಿಸುತ್ತಿರುವಾಗ ನಾಯಿಯು ಒಂದು ವಿಚಿತ್ರ ಕೆಲಸ ಮಾಡಿಬಿಟ್ಟಿದೆ. ಈ ಪಟಾಕಿ ಸುರಸುರನೇ ಉರಿಯುತ್ತಿರುವಾಗ ನಾಯಿಮರಿಯೊಂದು ಸ್ವಲ್ಪವೂ ಹೆದರದೆ ಅದನ್ನು ಬಾಯಿಯಲ್ಲಿ ಹಿಡಿದುಕೊಂಡು ಹಠಾತ್ತನೆ ಮನೆಯೊಳಗೆ ಓಡಿದೆ. ಮನೆ ಮಾಲೀಕ ತಬ್ಬಿಬ್ಬಾಗಿ ನಾಯಿಯ ಹಿಂದೆ ಓಡಿಹೋಗಿ ಅದರ ಬಾಯಿಯಲ್ಲಿದ್ದ ಫೌಂಟನ್ ಪಟಾಕಿಯನ್ನು ಹೇಗೋ ಬಿಡಿಸಿಕೊಂಡು ಹೊರಗೆ ತಂದು ಇಡುತ್ತಾನೆ. ಈ ಕ್ಷಣದಲ್ಲಿ ತಕ್ಷಣ ನಾಯಿ ಅಲ್ಲಿಯೂ ವಕ್ಕರಿಸಿ ಅದೇ ಫೌಂಟನ್ ಪಟಾಕಿಯನ್ನು ಮತ್ತೆ ಬಾಯಲ್ಲಿ ಹಿಡಿದು ತಾನು ವಾಸಿಸುವ ಕೆನಲ್ ನಲ್ಲಿ ತೆಗೆದುಕೊಂಡು ಹೋಗುತ್ತದೆ ಹಾಗೂ ತನ್ನ ಮನೆಯಲ್ಲಿಯೂ ಪಟಾಕಿ ಸಿಡಿಸುತ್ತ ದೀಪಾವಳಿ ಆಚರಣೆ ಮಾಡುತ್ತದೆ. ಪ್ರಸ್ತುತ ದೃಶ್ಯ ನೋಡಲು ಮೊದಲಿಗೆ ಸ್ವಲ್ಪ ಹೆದರಿಕೆ ಬರುವಂತಿದ್ದರೂ ನಂತರ ಮಾತ್ರ ಖತರ್ನಾಕ್ ತಮಾಷೆಯ ದೃಶ್ಯ ಇಲ್ಲಿ ಕಂಡು ಬರುತ್ತದೆ. ನಾಯಿಯ ಈ ಅವಾಂತರ ದೊಡ್ಡ ಅನಾಹುತಕ್ಕೂ ಕಾರಣವಾಗಬಹುದಿತ್ತು. ಆದರೆ ಅದೃಷ್ಟ ಚೆನ್ನಾಗಿರುವುದರಿಂದ ಯಾವುದೇ ರೀತಿಯ ಅನಾಹುತ ಘಟಿಸಿಲ್ಲ. ಈ ವಿಡಿಯೋ ನೋಡುವವರಿಗೆ ತಮಾಷೆಯ ಜೊತೆಗೆ ಒಂದು ಪಾಠವನ್ನೂ ನೀಡುತ್ತದೆ. ಸಾಮಾನ್ಯವಾಗಿ ಪ್ರಾಣಿಗಳು ಬೆಂಕಿ ಎಂದರೆ ದೂರವಿರುತ್ತವೆ. ಆದರೆ ಇಲ್ಲಿ ನಾಯಿ ಪಟಾಕಿ ಜೊತೆಗೆ ಆಡಿದ ಆಟ ನೋಡಿದರೆ ನಗು ತಡೆಯುವುದು ಅಸಾಧ್ಯವಾಗುತ್ತದೆ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋ ನೋಡಲು ತಮಾಷೆಯಾಗಿದ್ದು ನಾಯಿಯ ಆಟದ ಈ ವಿಡಿಯೋ ದೀಪಾವಳಿ ತುಂಬಾ ಸಮೀಪವೇ ಬಂದಿದೆ ಎಲ್ಲಾರೂ ರೆಡಿಯಾಗಿ ಎಂದು ಹೇಳುವಂತಿದೆ. ಈ ವಿಡಿಯೋ instagram ನಲ್ಲಿ ಶೇರ್ ಮಾಡಿದ್ದು ನೆಟ್ಟಿಗರು ತುಂಬಾ ತಮಾಷೆಯಿಂದ ಮಜಾ ಲುಟಾಯಿಸುತ್ತಿದ್ದಾರೆ.