ಬಟ್ಟೆಗಳನ್ನು ಒಣ ಹಾಕಲು ಯತ್ನಿಸುವಾಗ ಮಹಿಳೆ ಬಿದ್ದಳು 19 ನೇ ಮಹಡಿಯಿಂದ; ರೋಮಾಂಚನವಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆ…
ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಸಾಮಾನ್ಯವಾಗಿ ಬಹುಮಹಡಿಯ ಕಟ್ಟಡಗಳನ್ನು ನೋಡಬಹುದು. ಅಲ್ಲಿ ಇರುವವರು ಹೆಚ್ಚಾಗಿ ತಮ್ಮ ಚಿಕ್ಕದಾದ ಬಾಲ್ಕನಿ ಬಟ್ಟೆಗಳನ್ನು ಒಣಗಿಸುವ ಸಲುವಾಗಿ ಉಪಯೋಗಿಸುವರು. ಕೆಲವೊಂದು ಸಲ ಈ ರೀತಿಯ ಎತ್ತರವಾದ ಬಾಲ್ಕನಿಗಳಲ್ಲಿ ಜಾಗ್ರತೆ ವಹಿಸದೆ ಇದ್ದರೆ ದೊಡ್ಡ ಅನಾಹುತಗಳು ಘಟಿಸುತ್ತವೆ.
ಇದೇ ರೀತಿಯ ಘಟನೆಯೊಂದು ಚೀನಾದಲ್ಲಿಯ ಎತ್ತರವಾದ ಕಟ್ಟಡದಲ್ಲಿ ನಡೆದಿದೆ. 82 ವರ್ಷದ ವೃದ್ಧ ಮಹಿಳೆಯೊಬ್ಬಳು ಬಾಲ್ಕನಿಯಲ್ಲಿ ಬಟ್ಟೆಗಳನ್ನು ಒಣ ಹಾಕುವ ಸಲುವಾಗಿ ಪ್ರಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಅದೃಷ್ಟವೆಂದರೆ ಆಕೆ ಬಟ್ಟೆಗಳನ್ನು ಒಣ ಹಾಕುವ ರ್ಯಾಕ್ ನಲ್ಲಿ ನೇತಾಡುತ್ತಿರುವುದು ಕಂಡುಬಂತು. ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ನೀಡಿದ ವರದಿಯ ಪ್ರಕಾರ, ದಕ್ಷಿಣ ಚೀನಾದಲ್ಲಿಯ ಜಿಯಾಂಗ್ಸು ಪ್ರಾಂತದ ಯಂಗಜೋವುನಲ್ಲಿ ಈ ಘಟನೆ ನಡೆದಿದೆ. 19 ನೆಯ ಮಹಡಿಯಲ್ಲಿ ಮಹಿಳೆಯು ಬಟ್ಟೆಗಳನ್ನು ಒಣ ಹಾಕುವ ಯತ್ನದಲ್ಲಿದ್ದಾಗ ಈ ಘಟನೆ ನಡೆದಿದೆ.
ಮೈನವಿರೇಳಿಸುವ ಈ ವಿಡಿಯೋದಲ್ಲಿ ಮಹಿಳೆಯ ಎರಡು ಕಾಲುಗಳು 19 ನೆಯ ಮಹಡಿಯಿಂದ ಬಿದ್ದಾಗ 18ನೇ ಮಹಡಿಯ ಮೇಲಿದ್ದ ಬಟ್ಟೆಗಳನ್ನು ಒಣಗಿಸುವ ರ್ಯಾಕಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಮಹಿಳೆಯ ದೇಹವು 17ನೇ ಮಹಡಿಯ ಮೇಲೆ ನೇತಾಡುತ್ತಿತ್ತು. ಆಕೆಗೆ ಜೀವಸಹಿತ ಉಳಿಸುವ ಸಲುವಾಗಿ ಅಗ್ನಿಶಾಮಕದಳದ ಸಿಬ್ಬಂದಿ ವರ್ಗ ತ್ವರಿತ ಘಟನೆ ನಡೆದ ಸ್ಥಳಕ್ಕೆ ಹಾಜರಾಗಿ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದಾರೆ. 82 ವರ್ಷದ ವೃದ್ಧ ಮಹಿಳೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ವರ್ಗ ಯಶಸ್ವಿಯಾಗಿದೆ.
ಆ ಮಹಿಳೆಯನ್ನು ಅಗ್ನಿಶಾಮಕದಳದ ಸಿಬ್ಬಂದಿ ವರ್ಗ ಉಳಿಸಿಕೊಂಡ ರೀತಿಯ ವಿಡಿಯೋವನ್ನು ಇಲ್ಲಿ ನೋಡಿ….
An 82-year-old woman was seen dangling upside down from a clothes rack after falling from the 19th floor of a building in eastern China’s Jiangsu province. pic.twitter.com/Y4yvFRNBo8
— South China Morning Post (@SCMPNews) November 23, 2021
ಮಹಿಳೆಯನ್ನು ಸುರಕ್ಷಿತವಾಗಿ ಜೀವ ಸಹಿತ ಉಳಿಸಿದ್ದಕ್ಕಾಗಿ ನೆಟ್ಟಿಗರು ಅಗ್ನಿಶಾಮಕ ದಳದ ಸಿಬ್ಬಂದಿವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.