ಬದುಕಿರುವಾಗಲೇ ಸ್ವರ್ಗ ಸಿಗುವ ತಾಣ ಇದು ಎಂದು ವೈರಲ್ ಆದ ಕೇದಾರ ನಾಥ ಮಂದಿರದ ಅತ್ಯದ್ಭುತ ದೃಶ್ಯ ನೋಡಿ ಮೈಮರೆಯುತ್ತಿದ್ದಾರೆ ನೆಟ್ಟಿಗರು!
ಸ್ವರ್ಗ ಎಂದರೆ ಅದೊಂದು ಸುಂದರವಾದ ಲೋಕ, ದೇವತೆಗಳ ನಿವಾಸ ತಾಣ, ಎಲ್ಲಾ ಸುಖಭೋಗಗಳು ಸಿಗುವಂತಹ ಸುಂದರವಾದ ಲೋಕ ಮಾತ್ರವಲ್ಲದೇ ಭೂಮಿಯ ಮೇಲೆ ಬದುಕಿರುವಾಗ ಪುಣ್ಯದ ಕೆಲಸಗಳನ್ನು ಮಾಡಿದವರಿಗೆ ಮಾತ್ರವೇ ಮ ರ ಣ ದ ನಂತರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ನಮ್ಮ ನಂಬಿಕೆ. ಅದಕ್ಕಾಗಿಯೇ ಬದುಕಿರುವಾಗ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು, ಒಳ್ಳೆಯ ದಾರಿಯಲ್ಲಿ ನಡೆಯಬೇಕು ಹಾಗೂ ಸದಾಚಾರವನ್ನು ಬೆಳೆಸಿಕೊಳ್ಳಬೇಕು ಎಂದು ನಮ್ಮ ಹಿರಿಯರು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಅಲ್ಲದೆ ಪಾ ಪ ಕ ರ್ಮಗಳನ್ನು ಮಾಡಿದವರು ನರಕದ ದ್ವಾರವನ್ನು ಪ್ರವೇಶಿಸಿ, ಕಂಡು ಕೇಳರಿಯದ ಕ ಠಿ ಣ ಶಿ ಕ್ಷೆ ಗಳನ್ನು ಅನುಭವಿಸಬೇಕಾಗುವುದು ಎಂದು ಕೂಡ ಹೇಳುತ್ತಾರೆ.
ಸ್ವರ್ಗ ನ ರ ಕಗಳು ಇದೆಯೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಏಕೆಂದರೆ ಅಲ್ಲಿಗೆ ಹೋದವರಾರು ಮರಳಿ ಬಂದು ಅನುಭವವನ್ನು ಹಂಚಿಕೊಳ್ಳುವುದು ಅಸಾಧ್ಯವಾದ ಮಾತು. ಆದರೆ ನಮ್ಮ ಕನಸು ಹಾಗೂ ಕಲ್ಪನೆಗಳಲ್ಲಿ ಮಾತ್ರ ಸ್ವರ್ಗ ಎಂದರೆ ಅದೊಂದು ಕಲ್ಪನೆಯನ್ನು ಮೀರಿದಂತಹ ಅದ್ಭುತವಾದ ಪ್ರದೇಶ ಎನ್ನುವುದಂತೂ ನಿಜ. ಆದರೆ ನಮ್ಮ ಭೂಮಿಯ ಮೇಲೆ ಇರುವ ಕೆಲವು ಸುಂದರವಾದ ಪ್ರದೇಶಗಳನ್ನು ಅನೇಕರು ಭೂಲೋಕದ ಸ್ವರ್ಗ ಎಂದು ಕರೆಯುವುದು ಕೂಡ ಉಂಟು. ಅದರಲ್ಲೂ ವಿಶೇಷವಾಗಿ ನಿಸರ್ಗದ ಮಧ್ಯದಲ್ಲಿ ನೆಲೆಯಾಗಿರುವ ಪ್ರದೇಶಗಳು ನಿಜಕ್ಕೂ ಸ್ವರ್ಗವನ್ನು ಮೀರಿಸುವಂತೆ ನಮಗೆ ಭಾಸವಾಗುವುದು ಕೂಡಾ ನಿಜ.
ಸೋಶಿಯಲ್ ಮೀಡಿಯಾದಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದು ಭೂಲೋಕದ ಸ್ವರ್ಗವನ್ನು ನಮ್ಮ ಕಣ್ಮುಂದೆ ಅನಾವರಣಗೊಳಿಸಿದೆ. ವಿಡಿಯೋ ಶೇರ್ ಮಾಡಿ ಕೊಂಡ ಸುಶಾಂತ್ ನಂದರವರು, ನೀವು ಸ ತ್ತ ಮೇಲೆ ಸ್ವರ್ಗಕ್ಕೆ ಹೋಗುವುದಿಲ್ಲ, ಆದರೆ ಬದುಕಿರುವಾಗಲೇ ಸ್ವರ್ಗ ನಿಮಗೆ ಇಲ್ಲಿ ಸಿಗುತ್ತದೆ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ, ಇಷ್ಟಕ್ಕೂ ಅವರು ಹೇಳಿದ ಆ ಸ್ವರ್ಗ ಯಾವುದು ಎಂದರೆ ಅದೇ ಮಹಾ ಪುಣ್ಯ ಧಾಮವಾದ ಕೇದಾರನಾಥ ಮಂದಿರದ ರಮಣೀಯ ತಾಣ.
ವೀಡಿಯೋ ನೋಡಿದಾಗ ಕೇದಾರನಾಥನ ಆಲಯದ ಹಿಂಭಾಗದಲ್ಲಿ ಶ್ವೇತವರ್ಣದ ಮೇಘಗಳು ಹೊಗೆಯಂತೆ ಕವಿದಿದ್ದರೆ, ಅದಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಹಿಮಪರ್ವತಗಳು ಬೆಳ್ಳಿಯ ಬೆಟ್ಟದಂತೆ ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ನಾವು ಗಮನಿಸಬಹುದು. ಆ ಇಡೀ ವಾತಾವರಣವು ಒಂದು ಅದ್ಭುತ ದಿವ್ಯತೆಯನ್ನು ನಮಗೆ ದರ್ಶನ ಮಾಡಿಸುತ್ತಿದ್ದು, ವಿಡಿಯೋ ನೋಡಿದಾಗ ಒಂದು ಕ್ಷಣ ನೋಡುಗರು ಕೂಡ ಭಕ್ತಿ ಭಾವ ಪರವಶರಾಗುಂತೆ ಬಹು ರಮಣೀಯ ಹಾಗೂ ಮನಮೋಹಕವಾಗಿ ಕಾಣುತ್ತದೆ ದೇಗುಲದ ಸುಂದರ ದೃಶ್ಯ.
ವಿಡಿಯೋ ನೋಡಿ
You don't go to Heaven when you die. You get it here when you are alive🙏 pic.twitter.com/HaaTea0s6L
— Susanta Nanda IFS (@susantananda3) December 30, 2020
ಇಂದು ಟ್ವಿಟರ್ ನಲ್ಲಿ ಸುಶಾಂತ್ ಅವರು ಶೇರ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ ಹದಿನಾರು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಎರಡು ಸಾವಿರಕ್ಕಿಂತ ಹೆಚ್ಚು ಜನರು ಲೈಕ್ ಗಳನ್ನು ನೀಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರಲ್ಲಿ ಒಬ್ಬರು ಸ್ವರ್ಗ-ನರಕ ಎನ್ನುವುದು ಬೇರೆಲ್ಲೂ ಇಲ್ಲ ಎರಡನ್ನು ಕೂಡ ಈ ಭೂಮಿಯ ಮೇಲೆ ಅನುಭವಿಸಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕೃತಿ ಪ್ರೇಮಿಗಳು ಈ ದೃಶ್ಯವನ್ನು ನೋಡಿ ಬಹಳ ಅದ್ಭುತವಾದ ದೃಶ್ಯ ಎಂದರೆ, ಶಿವಭಕ್ತರು ಕೇದಾರನಾಥದ ರಮ್ಯ ವಾತಾವರಣವನ್ನು ಕಾಮೆಂಟ್ ಗಳ ಮೂಲಕ ಹಾಡಿ ಹೊಗಳಿದ್ದಾರೆ.