ಬರೀ ಇಬ್ಬರು ಕುಳಿತುಕೊಳ್ಳುವ ಬೈಕ್ ಮೇಲೆ ಎಷ್ಟು ಜನರು ಕುಳಿತಿದ್ದಾರೆ ಒಮ್ಮೆ ಕೌಂಟ್ ಮಾಡಿ ನೋಡಿ ಈ ವೈರಲ್ ವಿಡಿಯೋದಲ್ಲಿ…
ರೋಹಿತ್ ಶೆಟ್ಟಿ ನಿರ್ಮಾಣದ ಬಾಲಿವುಡ್ ಫಿಲಂ ಗೋಲ್ಮಾಲ್ ನಲ್ಲಿ ನಟ ಅಜಯ್ ದೇವಗನ್ ಅವರು ಮಾಡಿಫೈಡ್ ಬೈಕ್ ಮೇಲೆ ಅನೇಕರನ್ನು ತೆಗೆದುಕೊಂಡು ನಡೆಸಿರುವುದನ್ನು ಬಹುಶಃ ನೋಡಿರಬೇಕು. ಆದರೆ ರಿಯಲ್ ನಲ್ಲಿ ಈ ರೀತಿಯ ಬೈಕ್ ನೋಡಿದ್ದೀರಾ? ಒಂದು ವೇಳೆ ಉತ್ತರ ಇಲ್ಲವಾದರೆ ನಿಮಗಾಗಿ ಇಂಥದ್ದೊಂದು ಐಡಿಯಾದಿಂದ ತಯಾರಿಸಿದ ಬೈಕ್ ಇಲ್ಲಿ ತೋರಿಸಲಿದ್ದೇವೆ.
ಈ ಬೈಕ್ ಮೇಲೆ ಇಬ್ಬರೂ ಅಥವಾ ಮೂವರು ಅಷ್ಟೇ ಕುಳಿತುಕೊಳ್ಳದೆ ಸಹಜವಾಗಿ ಅರ್ಧ ಡಜನ್ ಗಿಂತ ಹೆಚ್ಚಿನವರು ಕುಳಿತಿರುವ ದೃಶ್ಯ ಇಲ್ಲಿಯ ವಿಡಿಯೋದಲ್ಲಿ ಕಾಣಸಿಗಲಿದೆ.
ತಯಾರಿಸಿದನು ಜುಗಾಡು (ಐಡಿಯಾ) ಬೈಕ್…
ಬೈಕ್ ಮೇಲೆ ಬರೀ ಇಬ್ಬರಿಗೆ ಮಾತ್ರ ಪ್ರವಾಸ ಮಾಡಲು ಅನುಮತಿ ಇದೆ. ಇಬ್ಬರಿಗಿಂತ ಹೆಚ್ಚಿಗೆ ಜನ ಕುಳಿತರೆ ಸಾರಿಗೆ ನಿಯಮ ಉಲ್ಲಂಘನೆಯ ಅಡಿಯಲ್ಲಿ ಫೈನ್ ಕಟ್ಟಬೇಕಾಗುತ್ತದೆ. ಆದರೆ ವ್ಯಕ್ತಿಯೊಬ್ಬ ತನ್ನದೇ ತಲೆಯನ್ನು ಉಪಯೋಗಿಸಿ ಇಂಥದ್ದೊಂದು ಮಹಾಬೈಕ್ ತಯಾರಿಸಿದ್ದಾನೆ. ಹೀಗಾಗಿ ಈ ಬೈಕ್ ಮೇಲೆ ಸಹಜವಾಗಿ ಏಳೆಂಟು ಜನ ಕೂಡುವ ಹಾಗೆ ವ್ಯವಸ್ಥೆ ಮಾಡಿದ್ದಾನೆ. ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ವಿಡಿಯೋ ಮಾತ್ರ ವಿದೇಶದ್ದಾಗಿದೆ ಎಂಬುದು ತಿಳಿದು ಬರುತ್ತದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಬೈಕ್ ಚಾಲಕ ಸುಮಾರು 10 ಅಡಿ ಉದ್ದದ ಬೈಕ್ ಮೇಲೆ ಕುಳಿತಿದ್ದಾನೆ. ತದನಂತರ ಈ ಬೈಕ್ ಮೇಲೆ ಒಬ್ಬಬ್ಬೊರಾಗಿ ಬಂದು ಕೂಡಲು ಶುರು ಮಾಡುತ್ತಾರೆ. ಹೀಗೆ ಸೀಟ್ ಮುಗಿಯುವವರೆಗೆ ಒಟ್ಟು ಚಾಲಕ ಸಮೇತ 8 ಜನ ಕುಳಿತುಕೊಳ್ಳುತ್ತಾರೆ.
ವೀಡಿಯೋ ನೋಡಿ
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಮಿಮ್ ವಾಲಾ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.