ಬರೀ ‘ಇವಿಷ್ಟು’ ಅಭ್ಯಾಸ ಬೆಳೆಸಿಕೊಳ್ಳಿ; ಜೋತು ಬಿದ್ದ ಹೊಟ್ಟೆ ಸ್ಥೂಲಕಾಯ ನೋಡು ನೋಡುತ್ತಲೇ ಮಾಯವಾಗುವುದು!
ನಿಮ್ಮ ಜೋತುಬಿದ್ದ ಹೊಟ್ಟೆಯನ್ನು ಕಡಿಮೆ ಮಾಡಲು ಇಚ್ಚಿಸುತ್ತಿದ್ದೀರಾ? ಜೊತೆಗೆ ನಿಮ್ಮ ತೊಡೆಗಳು ದಪ್ಪವಾಗಿವೆ ಎಂದು ಅನಿಸುತ್ತಿದೆಯಾ? ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ಇಂದಿನ ಈ ಲೇಖನ ನಿಮ್ಮ ಈ ಸಮಸ್ಯೆಗಳಿಗೆ 100 ಕ್ಕೆ ನೂರರಷ್ಟು ಪರಿಹಾರ ನೀಡುತ್ತದೆ ಎಂದರೆ ತಪ್ಪಲ್ಲ. ಓದಿ ಹಾಗಾದರೆ ಮುಂದೆ….
ನೀವು ನಿಮ್ಮ ದೇಹದ ಹೆಚ್ಚಿದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ ಇಂದಿನ ಈ ಲೇಖನ ನಿಮ್ಮ ತೂಕವನ್ನು ವೇಗದಿಂದ ಇಳಿಸಲು ಸಹಾಯ ಮಾಡುತ್ತದೆ. ಈ ಲೇಖನದಲ್ಲಿ ನಮೂದಿಸಿದ 10 ಪಾಯಿಂಟ್ಸ್ ಗಳನ್ನು ಗಮನದಲ್ಲಿಡಿ ಮತ್ತು ಅವುಗಳನ್ನು ಪಾಲಿಸಿ. ನಂತರ ನೋಡಿ ನಿಮ್ಮ ತೂಕ ಇಳಿದದ್ದನ್ನು ನೀವೇ ನಿಮ್ಮ ಕಣ್ಣುಗಳಿಂದ ನಂಬಲಾರಿರಿ. ತುಂಬಾ ಚಿಕ್ಕ ಚಿಕ್ಕ ವಿಷಯಗಳಿವೆ, ಆದರೆ ತುಂಬಾ ಮಹತ್ವದ್ದಾಗಿವೆ. ಇವು ನಿಮ್ಮ ತೂಕವನ್ನು ಇಳಿಸಲು ತುಂಬಾ ಸಹಾಯಕಾರಿಯಾಗಿವೆ ಹಾಗೂ ಇದರ ಪರಿಣಾಮ ತುಂಬಾ ಒಳ್ಳೆಯದಾಗಿವೆ.
1) ಎಲ್ಲಕ್ಕೂ ಮೊದಲು ನೀವು ನಿಮ್ಮ ಮನಸ್ಸನ್ನು ಇದಕ್ಕಾಗಿ ತಯಾರಿಸುವದು. ಯಾಕೆಂದರೆ, ಅನೇಕ ಜನರು ವ್ಯಾಯಾಮವನ್ನು ಮಾಡಿದ ಎರಡು ಅಥವಾ ಮೂರನೆಯ ದಿನ ಇಲ್ಲವೇ ಬಹಳೇ ಆದರೆ 10 ಅಥವಾ 12 ದಿನಗಳಲ್ಲಿ ಬೇಸರಿಸಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಿ ಬಿಡುತ್ತಾರೆ. ಇಷ್ಟು ದಿನಗಳಲ್ಲಿ ಯಾವುದೇ ರೀತಿಯ ಒಳ್ಳೆಯ ಪರಿಣಾಮ ಕಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಬೇಸರಿಸಿ ವ್ಯಾಯಾಮ ಮಾಡುವುದನ್ನು ಬಿಟ್ಟು ಬಿಡುತ್ತಾರೆ. ಹೀಗಾಗಿ ಬರೀ 10 ದಿವಸಗಳಲ್ಲ ಒಂದು ತಿಂಗಳವರೆಗೆ ವ್ಯಾಯಾಮವನ್ನು ಮಾಡುತ್ತೇನೆ ಎಂದು ನಿರ್ಧರಿಸಿ. ಮತ್ತು ಯಾವಾಗಲೂ ಧನಾತ್ಮಕ ವಿಚಾರವನ್ನು ಇಡಿ.
2) ಎರಡನೆಯ ಮುಖ್ಯವಾದ ವಿಷಯ ಡಾಯಟ್. ನಮಗೆ ಪೌಷ್ಠಿಕವಾದ ಆಹಾರವನ್ನು ತೆಗೆದುಕೊಳ್ಳುವದಿದೆ. ನಿಮ್ಮ ಮನೆಯ ಸದಸ್ಯರು ಒಂದು ವೇಳೆ ನಿಮ್ಮ ಮುಂದೆ ವಿವಿಧ ರೀತಿಯ ಒಳ್ಳೆಯ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದರೆ ನೀವು ಮಾತ್ರ ಅದರಿಂದ ದೂರವಿರುವ ಪ್ರಯತ್ನ ಮಾಡಬೇಕು. ಒಂದು ವೇಳೆ ನೀವು ಆ ಆಹಾರ ಪದಾರ್ಥಗಳನ್ನು ಸೇವಿಸಿದ್ದೇ ಆದರೆ ಅಂದಿನ ಒಂದು ಹೊತ್ತಿನ ಊಟವನ್ನು ತ್ಯಜಿಸಬೇಕು. ಇನ್ನೊಂದು ಮಹತ್ವದ ವಿಷಯವೆಂದರೆ ದಿನಂಪ್ರತಿ ನಾವು ಮೂರು ಹೊತ್ತು ಆಹಾರ ಸೇವನೆ ಮಾಡುತ್ತಿದ್ದರೆ, ಉದಾಹರಣೆಗೆ ಮುಂಜಾನೆ, ಮಧ್ಯಾಹ್ನ ಮತ್ತು ರಾತ್ರಿ. ಮುಂಜಾನೆಯ ಸಮಯದಲ್ಲಿ ಹೆಚ್ಚು ಕ್ಯಾಲರಿಯ ಆಹಾರವನ್ನು ಸೇವಿಸಿದರೆ, ಒಂದು ಹೊತ್ತಿನ ಊಟವನ್ನು ಬಿಟ್ಟು ಬಿಡಬೇಕು. ಅದರ ಬದಲಾಗಿ ಲೆಮನ್ ಜ್ಯೂಸ್, ಸೂಪ್ ಈ ರೀತಿಯ ತೆಳು ಪದಾರ್ಥಗಳನ್ನು ಸೇವಿಸಬಹುದು. ರುಚಿಕಟ್ಟಾದ ಪದಾರ್ಥಗಳನ್ನು ಉದಾಹರಣೆಗೆ ಕೇಕ್, ಪೇಸ್ಟ್ರಿ, ಚಾಕಲೇಟ್ ಗಳಂತಹ ಹಾಗೂ ಸಕ್ಕರೆ ಅಂಶವು ಕಡಿಮೆ ಇರುವ ಪದಾರ್ಥಗಳನ್ನು ತುಂಬಾ ಕಡಿಮೆ ಸ್ವರೂಪದಲ್ಲಿ ಸೇವಿಸಬೇಕು. ಊಟಿನಲ್ಲಿ ಉಪ್ಪಿನ ಪ್ರಮಾಣವನ್ನು ತುಂಬಾ ಕಡಿಮೆ ಇಡಿ. ಉಪ್ಪು ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದರ ಉಪಯೋಗ ಕಡಿಮೆ ಪ್ರಮಾಣದಲ್ಲಿ ಮಾಡಬೇಕು.
3) ದೈನಂದಿನ ಜೀವನದಲ್ಲಿ ವಾಕಿಂಗ್ ತುಂಬಾ ಮಹತ್ವದ್ದಾಗಿದೆ. ನಡೆಯುವುದು ದೇಹಕ್ಕೆ ತುಂಬಾ ಲಾಭದಾಯಕವಾಗಿದೆ. ಅದರಲ್ಲಿಯೂ ಮುಂಜಾನೆಯ ವಾಕಿಂಗ್ ದೇಹಕ್ಕೆ ಬಹಳೇ ಫಲಪ್ರದವಾಗಿದೆ. ರಾತ್ರಿ ಊಟವಾದ ನಂತರ 30ರಿಂದ 35 ನಿಮಿಷ ನಡೆದಾಡಬೇಕು. ಇದರಿಂದ ಸೇವಿಸಿದ ಆಹಾರವು ಸರಿಯಾಗಿ ಪಚನವಾಗುತ್ತದೆ.
4) ದಿನಂಪ್ರತಿ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹತ್ತರಿಂದ ಇಪ್ಪತ್ತು ನಿಮಿಷ ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗಲಿಕ್ಕೆ ಸಹಾಯವಾಗುತ್ತದೆ.
5) ದಿನಾಲು ಪ್ರತಿ ಒಂದುವರೆ ಗಂಟೆಗೆ ಅರ್ಧ ಅರ್ಧ ಗ್ಲಾಸ್ ನೀರನ್ನು ಕುಡಿಯುತ್ತಿರಬೇಕು. ಇದರಿಂದ ಮೆಟಬಾಲಿಸಂ ಚೆನ್ನಾಗಿ ಆಗುತ್ತದೆ. ದೇಹದಲ್ಲಿ ಬೊಜ್ಜು ಬೆಳೆಯುವುದಿಲ್ಲ.
6) 12 ರಿಂದ 13 ಗಂಟೆ ಉಪವಾಸವಿರುವುದು. ಉಳಿದ ಸಮಯದಲ್ಲಿ ಒಳ್ಳೆಯ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ತೂಕ ಇಳಿಯಲು ಸಹಾಯವಾಗುತ್ತದೆ. ಈ ಸಮಯದಲ್ಲಿ ನೀರು ಮತ್ತು ಗ್ರೀನ್ ಟೀ ಸಹಿತ ಸೇವಿಸಬಹುದಾಗಿದೆ.
7) ಮಾರ್ನಿಂಗ್ ವಾಕ್ ಮಾಡುವುದರಿಂದ ತ್ವಚೆ, ಕೂದಲು ಮತ್ತು ಕಣ್ಣುಗಳಿಗೆ ತುಂಬಾ ಲಾಭವಾಗುತ್ತದೆ.
8) ಬ್ರೇಕ್ ಫಾಸ್ಟ್, ಡಿನ್ನರ್ ಮತ್ತು ಲಂಚ್ ಇವುಗಳನ್ನು ಚಿಕ್ಕ ಚಿಕ್ಕ ಪ್ಲೇಟುಗಳಲ್ಲಿಯೇ ತಿನ್ನಿ. ನೀವು ಸೇವಿಸುವ ಆಹಾರದಲ್ಲಿ ಫಾಯ್ಬರ್ ಮತ್ತು ಪ್ರೊಟೀನ್ ಅಂಶಗಳು ಜಾಸ್ತಿಯಾಗಿ ಇರಲಿ. ಇವು ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಅವಶ್ಯಕವಾಗಿವೆ. ಪ್ರೊಟೀನ್ ಅಂಶವು ಬೇಳೆ, ಸೋಯಾಬೀನ್, ಹಾಲು ಮತ್ತು ಪನ್ನೀರ್ ನಲ್ಲಿ ಜಾಸ್ತಿಯಾಗಿರುತ್ತದೆ.
9) ವಿಟಮಿನ್-ಸಿ ದೇಹಕ್ಕೆ ತುಂಬಾ ಅವಶ್ಯಕವಾಗಿದೆ. ಉದಾಹರಣೆಗೆ ನಿಂಬೆರಸ, ನೆಲ್ಲಿಕಾಯಿ ಮತ್ತು ಕಿತ್ತಳೆ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ನಿಮ್ಮ ತೂಕ ಹೆಚ್ಚಿಸುವುದಿಲ್ಲ. ಜೊತೆಗೆ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ.
10) ಕೊನೆಯದಾಗಿ ಹಾಗೂ ಅತೀ ಮುಖ್ಯವಾದ ವಿಷಯವೆಂದರೆ ಡಿ ಮೋಟಿವೇಟ್ ಆಗದೆ ಇರುವುದು. ನಿಮ್ಮ ಹತ್ತಿರವಿರುವ ಬಟ್ಟೆಗಳನ್ನು ಮತ್ತೆ ಮತ್ತೆ ತೊಟ್ಟುಕೊಂಡು ನೋಡಿ. ವ್ಯಾಯಾಮದ ಜೊತೆಗೆ ಮೇಲೆ ಹೇಳಿದ ಟಿಪ್ಸಗಳನ್ನು ಅನುಕರಿಸಿ. ಒಂದು ದಿನ ನಿಮ್ಮ ದೇಹಕ್ಕೆ ಹಳೆಯ ಬಟ್ಟೆಗಳು (ಫಿಟ್ ಆಗಿರುವ)ಸಹ ಸರಿಯಾಗಿ ತೊಟ್ಟುಕೊಳ್ಳಲು ಬಂದೇ ಬರುತ್ತದೆ. ಆದ್ದರಿಂದ ಯಾವುದಕ್ಕೂ ಸೋಲೊಪ್ಪಿಕೊಳ್ಳದೆ ಮನಸ್ಸಿನಿಂದ ಬಲಶಾಲಿಯಾಗಿ. ಉದ್ದಿಷ್ಟ ಸಾಧ್ಯವಾಗಿ ಗೆಲವು ನಿಮ್ಮದಾಗಿರುತ್ತದೆ.