ಬರೀ ಪ್ರೀತಿ, ಹ್ಯಾಂಡ್ಸಮ್ ಲುಕ್ ಇದ್ದರೆ ಸಾಲದು; ‘ಈ’ 9 ಸಂಗತಿಗಳ ಹುಡುಕಾಟದಲ್ಲಿ ಇರುತ್ತಾರೆ ಹುಡುಗಿಯರು!

ಎಲ್ಲರ ಆಸೆ ಆಕಾಂಕ್ಷೆಗಳು ಬೇರೆ ಬೇರೆಯಾಗಿರುತ್ತವೆ. ಯಾರಿಗೆ ಮಿತ್ರತ್ವ ತುಂಬಾ ಮಹತ್ವದ್ದೆನಿಸಿದರೆ ಇನ್ನು ಕೆಲವರಿಗೆ ಪ್ರೀತಿ ತುಂಬಾ ಮಹತ್ವದ್ದೆನಿಸುತ್ತದೆ. ಇನ್ನು ಕೆಲವರು ಜೀವನದಲ್ಲಿ ಹಣವೇ ಮುಖ್ಯ ಎಂದು ತಿಳಿಯುತ್ತಾರೆ. ಹಾಗೆಯೇ ಕೆಲವರು ಜೀವನದಲ್ಲಿ ಏಕಾಂತದಲ್ಲಿರಲು ಇಷ್ಟಪಡುತ್ತಾರೆ. ಕೆಲವರ ಪ್ರಕಾರ ಜೀವನಸಂಗಾತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೆನ್ನಾಗಿರಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಸೌಂದರ್ಯ ವಯಸ್ಸಿನ ಜೊತೆಗೆ ನಷ್ಟವಾಗುತ್ತ ಹೋಗುತ್ತದೆ. ಕೊನೆಯವರೆಗೆ ಉಳಿಯುವುದು ಮಾತ್ರ ಸಂಬಂಧ.

ಪುರುಷನಿಗಿಂತ ಸ್ತ್ರೀಯ ಮನಸ್ಸು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ.

ಸ್ತ್ರೀಯಶ್ಚರಿತ್ರ: ಪುರುಷಸ್ಯ ಭಾಗ್ಯಂ ದೇವೋ ನ ಜಾನತಿ ಕುತೋ ಮನುಷ್ಯ:

ಎಂಬ ಸಂಸ್ಕೃತ ಉಕ್ತಿಯ ಹಾಗೆ ಸ್ತ್ರೀಯ ಚರಿತ್ರೆ ಮತ್ತು ಪುರುಷನ ಭಾಗ್ಯದ ಬಗ್ಗೆ ಸಾಕ್ಷಾತ್ ದೇವರಿಗೆ ಗೊತ್ತಾಗಿಲ್ಲ ಇನ್ನು ಮನುಷ್ಯ ಯಾವ ಲೆಕ್ಕ? ಎಂದು ಅರ್ಥ ಕಲ್ಪಿಸಿಕೊಡುತ್ತದೆ.

ಚರಿತ್ರೆಯ ಅರ್ಥ ಇಲ್ಲಿ ನಡವಳಿಕೆ ಅಲ್ಲ, ಆಕೆಯ ಮನಸ್ಸು, ಆಕೆ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದುಕೊಳ್ಳುವುದು ತುಂಬಾ ಕಷ್ಟ.

ಅನೇಕ ಸಂದರ್ಭಗಳಲ್ಲಿ ಹೆಂಡತಿ ತನ್ನ ಗಂಡನಿಂದ ಗೊತ್ತಿಲ್ಲದೆ ಕೆಲವೊಂದು ಗಿಫ್ಟ್ ಗಳ ಆಸೆ ಮಾಡುತ್ತಿರುತ್ತಾಳೆ. ಎಷ್ಟೋ ಸಲ ಆಕೆ ಅದನ್ನು ಬಾಯಿಂದ ಹೇಳದೆ ಮನಸ್ಸಿನಿಂದ ಅಪೇಕ್ಷೆ ಮಾಡುತ್ತಿರುತ್ತಾಳೆ. ಒಂದು ವೇಳೆ ಆ ಸಮಯದಲ್ಲಿ ಅದು ಸಿಗದೇ ಇದ್ದಾಗ ಆಕೆಯ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಗಂಡ ತನ್ನ ತಪ್ಪಿನ ಅರಿವಾಗಿ ಅಯ್ಯೋ ನಾನು ನನ್ನ ಕೆಲಸಿನಲ್ಲಿ ಮರೆತೆ ಹೋದೆನು, ಅಂತ ಇಲ್ಲದ ಸಲ್ಲದ ನೆಪಗಳನ್ನು ಹೇಳಿ ಆ ಪರಿಸ್ಥಿತಿಯಿಂದ ಜಾರಲು ಯತ್ನಿಸುತ್ತಾನೆ ಮತ್ತು ನಾನು ಹಣ ಕೊಡುತ್ತೇನೆ ನಿನಗೇನು ಬೇಕೋ ಅದನ್ನು ತೆಗೆದುಕೋ ಎಂದು ಹೇಳಿ ಉಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಆಗ ಹೆಂಡತಿ ಹೇಳುತ್ತಾಳೆ ನೀವಾಗಿ ಅಂತೂ ಕೊಡಲಿಲ್ಲ, ನಾನು ಬೇಡಿದ ಮೇಲೆಯೇ ಕೊಟ್ಟಿರಿ ಏನು ಉಪಯೋಗ ಎನ್ನುತ್ತಾಳೆ. ಇದರ ಮೇಲಿಂದ ತಾನಾಗಿಯೇ ಮನಸ್ಸಿನಿಂದ ಕೊಡುವ ವಸ್ತುವಿನ ಬೆಲೆ ಜಾಸ್ತಿ ಇರುತ್ತದೆ, ಅಲ್ವಾ?

ಒಡವೆಗಳು, ಆಭರಣ, ಸೀರೆ, ಶಾಪಿಂಗ್, ಹೋಟೆಲ್ ನಲ್ಲಿ ಊಟ ಮಾಡುವುದು, ಸುತ್ತಾಡುವುದು ಇಂಥ ಹ್ಯಾಬೀಟ್ಸ್ ಗಳು ಕೆಲವು ಸ್ತ್ರೀಯರ ವೀಕ್ ಪಾಯಿಂಟ್ ಇರಬಹುದು. ಆದರೆ ಎಲ್ಲ ಸ್ತ್ರೀಯರು ಇದನ್ನೇ ಇಷ್ಟಪಡುತ್ತಾರೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ಸ್ತ್ರೀಯ ವಿಚಾರಮಾಡುವ ಮನಸ್ಸು ಬೇರೆ ಬೇರೆಯಾಗಿರುತ್ತದೆ. ಪ್ರತಿಯೊಂದು ಸ್ತ್ರೀಯ ಬೇಕು-ಬೇಡಗಳು ಭಿನ್ನವಾಗಿರುತ್ತವೆ. ಆದರೆ ಸ್ತ್ರೀಯು ಡ್ಯಾಶಿಂಗ್, ಸ್ನೇಹಮಯಿ, ತನ್ನನ್ನು ಪ್ರೀತಿಸುವ ಮತ್ತು ಮುಕ್ತ ಮನಸ್ಸಿನ ಗಂಡನನ್ನು ಇಷ್ಟಪಡುತ್ತಾಳೆ.

ಆದರೆ ಡ್ಯಾಶಿಂಗ್ ಅರ್ಥ ಪುರುಷ ಯಾವಾಗಲೂ ತನ್ನ ಸ್ವಭಾವದಿಂದ ಹಟಮಾರಿ, ಜಗಳಗಂಟಿ, ಕುತಂತ್ರಿ ಮತ್ತು ವ್ಯಸನಿಯಾಗಿದ್ದರೆ ಯಾರಿಗೆ ತಾನೇ ಇಷ್ಟವಾಗುತ್ತಾನೆ ನೀವೇ ಹೇಳಿ. ಇಂಥ ವ್ಯಕ್ತಿ ಮೇಲಿನಿಂದ ಎಷ್ಟೇ ಚೆನ್ನಾಗಿ ಸುಂದರ ಮತ್ತು ಡ್ಯಾಶಿಂಗ್ ಕಾಣಿಸಿದರೆ ಏನು ಉಪಯೋಗ? ಇದರ ವಿರುದ್ಧ ನಾಲ್ಕು ಜನರಲ್ಲಿ ಎದ್ದುಕಾಣುವ ಮತ್ತು ಮನಸ್ಸಿನಿಂದ ತುಂಬಾ ಮೃದುವಾಗಿರುವ ಹಾಗೂ ಪತ್ನಿಯನ್ನು ಯಾವತ್ತು ಕಾಳಜಿ ಮಾಡುವ ಜೊತೆಗೆ ಗೌರವವನ್ನು ನೀಡುವ ಹೂ ಮನಸಿನ ವ್ಯಕ್ತಿ ಡ್ಯಾಶಿಂಗ್ ವ್ಯಕ್ತಿಗಿಂತಲೂ ತೂಕದಲ್ಲಿ ಹೆಚ್ಚಾಗುತ್ತಾನೆ.

ಪುರುಷರ ಕೆಲವು ಕಾಮನ್ ವಿಚಾರಗಳ ಪ್ರಕಾರ ಹುಡುಗಿ ಸುಂದರ ವ್ಯಕ್ತಿಗೆ ಅಥವಾ ಪುರುಷನಿಗೆ ಇಷ್ಟಪಡುತ್ತಾಳೆ, ಇಲ್ಲ ಹಣವಿದ್ದವರಿಗೆ ಇಷ್ಟಪಡುತ್ತಾಳೆ, ಇಲ್ಲವೇ ಹ್ಯಾಂಡ್ಸಮ್ ಲುಕ್ ಇರುವವನಿಗೆ ಇಷ್ಟಪಡುತ್ತಾಳೆ ಎಂದು ತಿಳಿದುಕೊಂಡರೆ ಅದು ಶುದ್ಧ ತಪ್ಪಾಗುತ್ತದೆ. ಇವುಗಳ ಹೊರತಾಗಿಯೂ ಸ್ತ್ರೀ ಒಂದು ಪುರುಷನಲ್ಲಿ ಕಾಣುವ ಕೆಲವು ಗುಣಗಳು ತುಂಬಾ ಮಹತ್ವದ್ದಾಗಿರುತ್ತದೆ. ಅವು ಯಾವವು ಒಮ್ಮೆ ಇಲ್ಲಿ ನೋಡಿ…

  1. ಗೌರವ:- ಜೀವನದಲ್ಲಿರುವ ಸಿಂಪಲ್ಲಾದ ಒಂದು ಲಾಜಿಕ್ ಇದೆ. ಅದು ಯಾವುದೆಂದರೆ, ಗೌರವವನ್ನು ನೀಡಿ ಗೌರವವನ್ನು ಸಂಪಾದಿಸಿಕೊಳ್ಳುವುದು. ಆತ್ಮಗೌರವ ನೀಡುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊದಲು ಸ್ತ್ರೀಗೆ ಅದನ್ನು ನೀಡಬೇಕು. ಅಹಂಕಾರದಿಂದ ಏನನ್ನು ಗೆಲ್ಲಲು ಸಾಧ್ಯವಿಲ್ಲ ಎಂದಾಗ ಸ್ತ್ರೀಯನ್ನು ಗೆಲ್ಲುವದಂತೂ ತುಂಬಾ ದೂರದ ಮಾತು. ನಾಲ್ಕು ಜನರಲ್ಲಿ ಸ್ತ್ರೀಗೆ ಅವಮಾನಕ್ಕೀಡು ಮಾಡದೆ ಆದರದಿಂದ ನೋಡಿಕೊಳ್ಳುವ ಪುರುಷ ಯಾವುದೇ ಸ್ತ್ರೀಗೆ ಇಷ್ಟವಾಗುತ್ತಾನೆ.
  2. ಪ್ರೀತಿಯಿಂದ ನಡೆಯುವ ನಡೆಸಿಕೊಳ್ಳುವ ಪುರುಷ:- ತನ್ನ ಜೊತೆಗೆ ಅಷ್ಟೇ ಅಲ್ಲದೆ, ತನ್ನವರ ಜೊತೆಗೂ ಪ್ರೀತಿಯಿಂದ ನಡೆದುಕೊಳ್ಳುವ ಪುರುಷ ಸ್ತ್ರೀಗೆ ತುಂಬಾ ಹಿಡಿಸುತ್ತಾನೆ. ಗಂಡ ತನ್ನ ತಂದೆ ತಾಯಿಯರ ಬಗ್ಗೆ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿರಬೇಕೆಂಬ ಮತ್ತು ಅವರ ಕಾಳಜಿ ವಹಿಸಬೇಕೆಂಬ ಆಸೆಯನ್ನು ಹೊಂದಿರುತ್ತಾಳೆ. ಅದರ ಜೊತೆಗೆ ತನ್ನ ತವರಿನವರ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳುವ ಗಂಡ ಸ್ತ್ರೀಗೆ ತುಂಬಾ ಅಪ್ಯಾಯಮಾನವೆನಿಸುತ್ತಾನೆ. ಗಂಡ ದಿನಬೆಳಗಾದರೆ ತನ್ನ ತವರಿಗೆ ಹೋಗಬೇಕೆಂದು ಯಾವ ಸ್ತ್ರೀಯು ಬಯಸುವದಿಲ್ಲ. ಆದರೆ ಅಂದೋ ಇಂದೋ ಯಾವತ್ತಾದರೂ ಸ್ತ್ರೀಯ ತವರಿನವರ ಬಗ್ಗೆ ಕಾಳಜಿ ವ್ಯಕ್ತ ಮಾಡುವ ಗಂಡ ಹೆಂಡತಿಗೆ ತುಂಬಾ ಹತ್ತಿರದವನು ಅನಿಸುತ್ತಾನೆ. ಈ ರೀತಿಯ ತುಂಬಾ ಚಿಕ್ಕದಾದ ವಿಷಯಗಳಲ್ಲಿ ಪುರುಷ ಗಮನ ವಹಿಸಿದರೆ ಹೆಂಡತಿ ತನ್ನ ಗಂಡನಲ್ಲಿ ತುಂಬಾ ಸಮಾಧಾನ ಮತ್ತು ಖುಷಿ ಕಾಣುತ್ತಾಳೆ.
  3. ಚಿಕ್ಕಪುಟ್ಟ ವಿಷಯಗಳ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳುವದು:- ಪತ್ನಿ ಸಂಪೂರ್ಣ ಅಡುಗೆಮನೆಯ ಜವಾಬ್ದಾರಿಯನ್ನು ವಹಿಸಿರುತ್ತಾಳೆ. ಆಕೆಗೆ ಒಂದು ಕಪ್ ಚಹಾ ಅಥವಾ ಕಾಫಿ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿರುವದಿಲ್ಲ. ಆದರೆ ಕೆಲಸಗಳ ಮಧ್ಯದಲ್ಲಿ ಗಂಡ ಎಂದಾದರೂ ಒಂದು ಕಪ್ ಚಹಾ ಅಥವಾ ಕಾಫಿಯನ್ನು ತಯಾರಿಸಿಕೊಟ್ಟರೆ ಹೆಂಡತಿಗೆ ಆ ಖುಷಿ ಹೇಳತೀರದಷ್ಟು ಆಗುತ್ತದೆ. ಕೆಲಸಗಳನ್ನು ಮಾಡಿ ಮಾಡಿ ಸೋತು ಸುಣ್ಣಾದಾಗ ಗಂಡ ಪ್ರೀತಿಯಿಂದ ಹಾಗೂ ಅಷ್ಟೇ ಹುಸಿಗೋಪದಿಂದ ನೀನು ಕೆಲಸ ಮಾಡಿ ಎಷ್ಟೊಂದು ಆಯಾಸವಾಗಿರುವಿ? ಕೆಲಸವನ್ನು ಬಿಟ್ಟು ಮೊದಲು ವಿಶ್ರಾಂತಿ ತೆಗೆದುಕೋ ಎಂದಾಗ ಪತ್ನಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ರೀತಿಯ ಕೆಲವೊಂದು ವಿಷಯಗಳು ಜುಜುಬಿ ಆಗಿರಬಹುದು ಆದರೆ ಹೆಂಡತಿಯ ಮನಸ್ಸಿಗೆ ತುಂಬಾ ಖುಷಿಯನ್ನು ಕೊಟ್ಟು ಹೋಗುತ್ತವೆ. ಹೀಗೆ ಚಿಕ್ಕಪುಟ್ಟ ಕೆಲಸಗಳ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಿಸುವ ಪತಿ ಹೆಂಡತಿಗೆ ತುಂಬಾ ಇಷ್ಟವಾಗುತ್ತಾನೆ.
  4. ಉತ್ತಮ ಆಲಿಸುವವ:- ಸ್ತ್ರೀಗೆ ಆಕೆಯ ಭಾವನೆಗಳನ್ನು ತಿಳಿದುಕೊಳ್ಳಲು ಮತ್ತು ಆಕೆಯ ಮಾತುಗಳನ್ನು ಸರಿಯಾಗಿ ಕೇಳುವ ಒಂದು ಕಿವಿ ಬೇಕಾಗಿರುತ್ತದೆ. ಆಕೆ ಮುಕ್ತವಾಗಿ ಮಾತನಾಡುವ ಮಾತುಗಳನ್ನು ಬರೀ ಕೇಳುವ ಗಂಡ ಬೇಕಾಗಿರುತ್ತಾನೆ. ಆಕೆ ಹೇಳುವ ಮಾತುಗಳನ್ನು ಕೇಳುವ ಮತ್ತು ಅವುಗಳಿಗೆ ಬೆಲೆ ಕೊಡುವ ಗಂಡನಿದ್ದರೆ ಆಕೆಗೆ ತುಂಬಾ ಖುಷಿ.
  5. ವಾತ್ಸಲ್ಯದಿಂದ ನಡೆದುಕೊಳ್ಳುವವ:- ಯಾವುದೇ ರೀತಿಯ ಎಂತಹ ಪರಿಸ್ಥಿತಿ ಬಂದರೂ ನಾನಿದ್ದೇನೆ, ಮತ್ತು ಇದನ್ನು ನಾವಿಬ್ಬರೂ ಮಾಡೋಣ ಎಂದು ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡುವ ಪತಿ ಪತ್ನಿಗೆ ತುಂಬಾ ಹಿಡಿಸುತ್ತಾನೆ. ಇದರ ವಿರುದ್ಧವಾಗಿ ನಡೆಯುವ ಗಂಡನಿದ್ದರೆ ಸ್ತ್ರೀಯು ದೈಹಿಕವಾಗಿ ಆತನ ಹತ್ತಿರವಿದ್ದರೂ ಮಾನಸಿಕವಾಗಿ ಮಾತ್ರ ಆಕೆ ಆತನಿಂದ ದೂರವಿರುತ್ತಾಳೆ.
  6. ಯಾವತ್ತು ಸಂತೋಷದಿಂದಿರುವವನು:- ತನ್ನ ಜೊತೆಯಲ್ಲಿರುವಾಗ ಯಾವತ್ತು ಸಂತೋಷದಿಂದ ಇರುವ ಪುರುಷನನ್ನು ಸ್ತ್ರೀಯು ತುಂಬಾ ಇಷ್ಟಪಡುತ್ತಾಳೆ. ಆ ಪುರುಷ ಸ್ತ್ರೀಗೆ ತುಂಬಾ ಪ್ರೋತ್ಸಾಹಿತನನ್ನಾಗಿ ಮಾಡಲು ಯಶಸ್ವಿಯಾಗುತ್ತಾನೆ. ಪತ್ನಿಯ ಜೊತೆಯಲ್ಲಿ ಇದ್ದಾಗಲೂ ಸತತವಾಗಿ ಮಂಗನ ಹಾಗೆ ಮುಖ ಊದಿಸಿಕೊಂಡಂತೆ ಇರುವ ಪತಿಗೆ ಸ್ತ್ರೀಯು ತುಂಬಾ ತಣ್ಣಗೆ ಪ್ರತಿಕ್ರಿಯಿಸುತ್ತಾಳೆ.
  7. ಯಾವಾಗಲೂ ದೈಹಿಕ ಸುಖವನ್ನು ಆಶಿಸದ ಪುರುಷ:- ಎಷ್ಟೋ ಸಲ ಮನಸ್ಸಿನ ಆಯಾಸವನ್ನು ದೂರ ಮಾಡಲು ಗಂಡನ ಒಂದು ಬಿಸಿ ಅಪ್ಪುಗೆ ಸಾಕಾಗುತ್ತದೆ. ಆ ಸಮಯದಲ್ಲಿ ಬೇರೆ ಯಾವ ಸ್ಪರ್ಶವು ಬೇಕಾಗಿರುವುದಿಲ್ಲ. ವಿಶ್ವಾಸದ ಆಧಾರವನ್ನು ನೀಡುವ ಬರೀ ಒಂದು ಅಪ್ಪುಗೆಯನ್ನು ನೀಡುವ ಪುರುಷ ಸ್ತ್ರೀಗೆ ತುಂಬಾ ಹಿಡಿಸುತ್ತಾನೆ.
  8. ಕೆಲವೊಂದು ಸಲ ಆಕೆಯ ಹುಚ್ಚುತನವನ್ನು ಸಹಿಸಿಕೊಳ್ಳುವವ:- ದಿನದ 24 ಗಂಟೆಗಳಲ್ಲೂ ಹೆಗಲ ಮೇಲೆ ಮುಗಿಲು ಕತ್ತರಿಸಿ ಬಿದ್ದ ಹಾಗೆ ಸದಾ ಗಂಭೀರವಾಗಿರಬಾರದು. ಆಕೆಗೆ ಸ್ವಿಜರ್ಲ್ಯಾಂಡ್ ಪ್ರವಾಸಕ್ಕೆ ಹೋಗಬೇಕಾಗಿರುವದಿಲ್ಲ. ಇಲ್ಲೇ ಸಮೀಪ ಎಲ್ಲಿಯಾದರೂ ನಡೆದುಕೊಂಡು ಜೊತೆಯಾಗಿ ಹೋಗುವ ಸ್ಥಳವಿದ್ದರೂ ನಡೆಯುತ್ತದೆ. ಹುಣ್ಣಿಮೆಯ ಬೆಳದಿಂಗಳಿನಲ್ಲಿ ಸ್ವಲ್ಪ ನಡೆದುಕೊಂಡು ಹೋದರೂ ಆಕೆಗೆ ಆಕಾಶದಷ್ಟು ಖುಷಿ ನೀಡುತ್ತದೆ. ಕೆಲವೊಮ್ಮೆ ಪತ್ನಿಯ ಅರ್ಥವಿಲ್ಲದ ಹಾಸ್ಯಕ್ಕೆ ಮುಕ್ತವಾಗಿ ನಕ್ಕಾಗಲೂ ಪತ್ನಿಗೆ ತುಂಬಾ ಖುಷಿಯಾಗುತ್ತದೆ.

ಇಂತಹ ಕೆಲವು ತುಂಬಾ ಅಗ್ಗದ ಆದರೆ ಅಷ್ಟೇ ಮಹತ್ವದ ಆಸೆ-ಆಕಾಂಕ್ಷೆಗಳ ಬಗ್ಗೆ ಪುರುಷ ತನ್ನ ಪತ್ನಿಯ ಕಾಳಜಿ ವಹಿಸುವಲ್ಲಿ ಯಶಸ್ವಿಯಾದರೆ ಅವರ ವೈವಾಹಿಕ ಜೀವನದಲ್ಲಿ ಪರಸ್ಪರರ ವಿಶ್ವಾಸದ ಬೇರುಗಳು ಮತ್ತಷ್ಟು ಆಳದಲ್ಲಿ ಇಳಿಯಲು ಸಹಾಯವಾಗುತ್ತವೆ. ಕಾರಣ ಮನುಷ್ಯನ ಒಳ್ಳೆಯ ಗುಣ, ಸ್ವಭಾವ ಕೊನೆಯವರೆಗೆ ಹೋಗುತ್ತವೆ. ಇವು ರೂಪ, ಸೌಂದರ್ಯ, ಹಣ, ಹುದ್ದೆ ಇವೆಲ್ಲವುಗಳಿಗಿಂತ ಮುಂದೆ ಇರುತ್ತವೆ. ಕಾಣಲು ತುಂಬಾ ಸುಂದರವಾಗಿದ್ದು ಗುಣಗಳು ಮಾತ್ರ ಕುರೂಪವಾಗಿದ್ದರೆ ಏನು ಉಪಯೋಗ ಹೇಳಿ. ಆದರೆ ತನ್ನನ್ನು ಪ್ರೀತಿಸುವ ಸ್ತ್ರೀಯ ಬಗ್ಗೆ ನೀವು ತಿಳುವಳಿಕೆ ಹೊಂದಿದ್ದರೆ ನೀವು ಸುಂದರವಾಗಿ ಕಾಣದೆ ಇದ್ದರೂ ಸಹ ಸ್ತ್ರೀಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ.