ಬರೀ 16 ಸೆಕೆಂಡುಗಳ ಅಂತರದಲ್ಲಿಯೇ ಎರಡು ಬಾರಿ ಜೀವ ಉಳಿಸಿತು ಹೆಲ್ಮೆಟ್! ನೋಡಿ ಈ ವೈರಲ್ ವಿಡಿಯೋ…
ದಿನನಿತ್ಯ ಅನೇಕ ಅಪಘಾತಗಳ ಸುದ್ದಿಗಳನ್ನು ಕೇಳುತ್ತೇವೆ. ಎಷ್ಟೋ ಜನರು ಇದರಲ್ಲಿ ತಮ್ಮ ಜೀವವನ್ನು ಕಳೆದುಕೊಂಡರೆ ಮತ್ತೆ ಎಷ್ಟೋ ಜನರು ಅದೃಷ್ಟವಶಾತ್ ಸಾವಿನಿಂದ ಪಾರಾಗಿ ಬಿಡುತ್ತಾರೆ. ಇಂಥ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ವೈರಲ್ ಆಗುವುದನ್ನು ನೋಡುತ್ತೇವೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೈಕ್ ಸವಾರ ತುಂಬಾ ರೋಚಕವಾಗಿ ಉಳಿದು ಕೊಂಡಿದ್ದಾನೆ. ಅದು ಒಂದಲ್ಲ ಎರಡು ಬಾರಿ. ಇದಕ್ಕೆ ಮುಖ್ಯ ಕಾರಣ ಆತ ಧರಿಸಿದ ಹೆಲ್ಮೆಟ್.
ಸರಕಾರ ಮತ್ತು RTO ಪದೇ ಪದೇ ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿಯನ್ನು ನೀಡಿದರೂ ಸಾಕಷ್ಟು ಜನ ಇದರ ಕಡೆಗೆ ನಿರ್ಲಕ್ಷಿಸಿ ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಹೆಲ್ಮೆಟ್ ನಿಂದ ಜೀವ ಹೇಗೆ ಉಳಿಯುತ್ತದೆ ಎಂಬ ಸುಂದರ ವಿಡಿಯೋ ನೀವಿಲ್ಲಿ ನೋಡಬಹುದು. ಪ್ರಸ್ತುತ ಬೈಕ್ ಸವಾರ ವೇಗದಲ್ಲಿ ಹೊರಟಿರುವಾಗ ಕಾರಿನ ಚಾಲಕ ಹಿಂದೆ ನೋಡದೆ ಆತನಿಗೆ ಅಡ್ದಲಾಗಿ ಬಂದಿದ್ದಾನೆ. ಇದರಿಂದ ಒಮ್ಮೆಲೆ ತಬ್ಬಿಬ್ಬಾದ ಬೈಕ್ ಸವಾರ ತನ್ನ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆಯ ಮದ್ಯೆ ಇರುವ ಎಲೆಕ್ಟ್ರಿಕ್ ಕಂಬಕ್ಕೆ ಜೋರಾಗಿ ಢಿಕ್ಕಿ ಹೊಡೆದು ಬೀಳುತ್ತಾನೆ. ಬೈಕ್ ಸವಾರನ ಅದೃಷ್ಟ ತುಂಬಾ ಚೆನ್ನಾಗಿತ್ತು, ಆತನಿಗೆ ಗಂಭೀರವಾದ ಪೆಟ್ಟು ಬಿದ್ದಿರಲಿಲ್ಲ. ಹೀಗಾಗಿ ಆತ ಹೇಗೋ ತನ್ನನ್ನು ಒಗ್ಗೂಡಿಸಿ ಏಳುತ್ತಿರುವಾಗಲೇ ಮತ್ತೊಂದು ಘಟನೆ ಅಲ್ಲಿ ನಡೆಯುತ್ತದೆ. ಅದೇನೆಂದರೆ ಆತನೇ ಢಿಕ್ಕಿ ಹೊಡೆದ ಎಲೆಕ್ಟ್ರಿಕ್ ಕಂಬ ನೇರ ಆತನ ತಲೆಯ ಮೇಲೆಯೇ ಡಮಾರ್ ಎಂದು ಬಿದ್ದು ಬಿಡುತ್ತದೆ. ಇಲ್ಲೂ ಯುವಕನ ಅದೃಷ್ಟ ಮತ್ತೊಮ್ಮೆ ಚೆನ್ನಾಗಿತ್ತು, ಹಾಗೂ ಮಹತ್ವದ ವಿಷಯವೇನೆಂದರೆ ಆತನ ತಲೆಯ ಮೇಲೆ ಹೆಲ್ಮೆಟ್ ಇರುದರಿಂದ ಯಾವುದೇ ರೀತಿಯ ಜೋರಾದ ಪೆಟ್ಟು ಆತನಿಗೆ ತಾಗಿಯೇ ಇಲ್ಲ. ಪ್ರಸಂಗಗಳು ಯಾವರೀತಿ ಎದುರಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮಿತ್ರರೇ ಎಲ್ಲಿಯೇ ಹೋಗುವದಿರಲಿ ಎಷ್ಟೇ ಸಮೀಪ, ದೂರವಿರಲಿ ಮೊದಲು ಹೆಲ್ಮೆಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂಬ ಪಾಠ ಈ ವಿಡಿಯೋ ನೀಡುವಂತಿದೆ ನಿಜ.
ವಿಡಿಯೋ ನೋಡಿ
God helps those who wear helmet !#RoadSafety#DelhiPoliceCares pic.twitter.com/H2BiF21DDD
— Delhi Police (@DelhiPolice) September 15, 2022
ಪ್ರಸ್ತುತ ವಿಡಿಯೋ ದೆಹಲಿ ಪೊಲೀಸ್ ತನ್ನ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದು ಲಕ್ಷಾವಧಿ ಜನರು ಈ ವಿಡಿಯೋ ನೋಡಿದ್ದು ಸಾಕಷ್ಟು ಜನರು ಇದನ್ನು ಶೇರ್ ಮಾಡುತ್ತಿದ್ದಾರೆ.