ಬರೀ17 ಸೇಕೆಂಡಿನಲ್ಲಿ ಸೀರೆ ತೊಡಿಸುವ ದಾಖಲೆ ಹೆಸರಿಗೆ! ನೀತಾ ಅಂಬಾನಿ ಹಿಡಿದು ಬಾಲಿವುಡ್ ನಟಿಯರಿಗೂ ಸೀರೆ ತೊಡಿಸಲು ತೆಗೆದುಕೊಳ್ಳುತ್ತಾರೆ ಇಷ್ಟೊಂದು ರೂಪಾಯಿ! ಯಾರಿವಳು?

ಮುಂಬಯಿ ಇದು ನಿಜಕ್ಕೂ ಭಾರತದ ಆರ್ಥಿಕ ರಾಜಧಾನಿ ಎನ್ನುವದು ಸುಳ್ಳಲ್ಲ. ಇಲ್ಲಿ ಎಲ್ಲವೂ ಮಾರುತ್ತದೆ. ಬರೀ ಮಾರಾಟ ಮಾಡುವ ಕೌಶಲ್ಯ ವ್ಯಕ್ತಿಯಲ್ಲಿ ಇರಬೇಕು ಎಂದು ಜನರು ಹೇಳುತ್ತಾರೆ. ಈಗ ನೋಡಿ ಬರೀ ಸೀರೆಯನ್ನೇ ತೊಡಿಸುವ ಉದ್ಯೋಗವನ್ನು ಒಬ್ಬಳು ಮಹಿಳೆ ಮಾಡಿಕೊಂಡಿದ್ದಾಳೆ ಎಂದರೆ ನಂಬುತ್ತೀರಾ? ಹೌದು ಇದು ನಿಜ. ಇನ್ನೊಬ್ಬರಿಗೆ ಸೀರೆಯನ್ನು ತೊಡಿಸುವ ಕೆಲಸವನ್ನೇ ತನ್ನ ಉಪಜೀವನ ದಾರಿ ಮಾಡಿಕೊಂಡಿದ್ದಾಳೆ ಡಾಲಿ ಜೈನ್ ಹೆಸರಿನ ಮಹಿಳೆ. ಇವರ ಜನ್ಮ ನಮ್ಮ ಕರ್ನಾಟಕದ ಬೆಂಗಳೂರಲ್ಲಿಯೇ ಆಗಿದೆ.

ನಮ್ಮ ದೇಶದಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಸೀರೆಗೆ ಅದ್ಭುತವಾದ ಮಹತ್ವವಿದೆ. ಇದೇ ಮಹತ್ವವನ್ನು ಡಾಲಿ ಅವರು ಮನಗಂಡು ಮುಂಬಯಿಯಲ್ಲಿ ಸೀರೆ ತೊಡಿಸುವ ಮಹತ್ವದ ಕಸಬನ್ನೆ ಆಯ್ಕೆ ಮಾಡಿಕೊಂಡಿದ್ದಾರೆ.

ಇಲ್ಲಿಯವರೆಗೆ ಡಾಲಿ ಅವರು ನೀತಾ ಅಂಬಾನಿಯಿಂದ ಹಿಡಿದು ಬಾಲಿವುಡ್ ನಾಯಕಿಯರಿಗೆ ಮತ್ತು ಅನೇಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಅವರ ಮದುವೆಯಲ್ಲಿ ಸೀರೆಯನ್ನು ತೊಡಿಸಿದ್ದಾರೆ. ನೀತಾ ಅಂಬಾನಿಯವರಂತೂ ಡಾಲಿ ಅವರಿಗೆ ಸೀರೆ ತೊಡಿಸುವ ಸಲುವಾಗಿ ಲಕ್ಷ ಲಕ್ಷ ರುಪಾಯಿಗಳನ್ನು ನೀಡುತ್ತಾರೆ.

ದೊಡ್ಡ ದೊಡ್ಡ ಫಂಕ್ಷನ್ ಗಳಿಗಾಗಿ ಸೆಲೆಬ್ರಿಟಿಗಳು ಡಾಲಿ ಅವರನ್ನು ಸೀರೆ ತೋಡಿಸುವದಕ್ಕಾಗಿ ಆಮಂತ್ರಿಸುತ್ತಾರೆ. ಇದೇ ಕಾರಣಕ್ಕಾಗಿ ಇವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ದಾಖಲಾಗಿದೆ. ಇವರು ಕೇವಲ 17 ಸೇಕೆಂಡಿನಲ್ಲಿ ಬೇರೊಬ್ಬರಿಗೆ ಸುಂದರವಾಗಿ ಸೀರೆಯನ್ನು ತೊಡಿಸುತ್ತಾರೆ.