ಬರೋಬ್ಬರಿ 8 ವರ್ಷಗಳ ನಂತರ ಈಗ ವೈರಲ್ ಆಗ್ತಿದೆ ಈ ಆಮೆಯ ವೀಡಿಯೋ: ಏನಿದೆ ಇದ್ರಲ್ಲಿ ಕೋಟಿಗಟ್ಟಲೆ ಜನ ನೋಡುವಂತ ಅದ್ಭುತ?

ಸೋಶಿಯಲ್ ಮೀಡಿಯಾ ಗಳಲ್ಲಿ ಕೆಲವೊಮ್ಮೆ ವರ್ಷಗಳಷ್ಟು ಹಳೆಯ ವಿಡಿಯೋಗಳು ಕೂಡ ಇದ್ದಕ್ಕಿದ್ದಂತೆ ವೈರಲ್ ಆಗಲು ಆರಂಭಿಸುತ್ತವೆ. ವರ್ಷಗಳ ಹಿಂದೆ ಸಾಕಷ್ಟು ವೀಕ್ಷಣೆಗಳನ್ನು ಪಡೆಯದ ವಿಡಿಯೋಗಳೂ ವೈರಲ್ ಆಗುವ ಮೂಲಕ ಊಹಿಸದ ರೀತಿಯಲ್ಲಿ ಕೋಟಿಗಟ್ಟಲೆ ಸಂಖ್ಯೆಯಲ್ಲಿ ವೀಕ್ಷಣೆಗಳನ್ನು ಪಡೆಯುವುದು ಮಾತ್ರವೇ ಅಲ್ಲದೆ ಅಪಾರ ಸಂಖ್ಯೆಯಲ್ಲಿ ಜನರ ಮೆಚ್ಚುಗೆಯನ್ನು ಪಡೆಯುತ್ತವೆ ಹಾಗೂ ಅನೇಕ ಮಂದಿ ಇಂತಹ ಅದ್ಭುತವಾದ ವಿಡಿಯೋ ಇಷ್ಟು ವರ್ಷಗಳಲ್ಲಿ ನಮ್ಮ ಕಣ್ಣಿಗೆ ಯಾಕೆ ಬಿಡಲಿಲ್ಲ ಎಂದು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಾ ಕಾಮೆಂಟ್ಗಳನ್ನು ಕೂಡ ಮಾಡುತ್ತಾರೆ. ಈಗ ಇಂತಹದೇ ಒಂದು ಹಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ವೈರಲ್ ಆಗುತ್ತಾ ಸಾಗುತ್ತಿದ್ದು, ವರ್ಷಗಳ ನಂತರ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ವಿಡಿಯೋ ಇದೀಗ ಊಹೆಗೂ ಮೀರಿದ ಮಟ್ಟದಲ್ಲಿ ವೈರಲ್ ಆಗುತ್ತಿರುವುದು ಮಾತ್ರವೇ ಅಲ್ಲದೆ ಅಸಂಖ್ಯಾತ ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಡುತ್ತಿದ್ದಾರೆ. ಈ ವಿಡಿಯೋದಲ್ಲಿನ ದೃಶ್ಯವನ್ನು ನೋಡಿ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ. ಇನ್ನು ಅನೇಕರು ಬರೋಬ್ಬರಿ ಎಂಟು ವರ್ಷಗಳ ನಂತರ ವಿಡಿಯೋ ಈ ಮಟ್ಟದಲ್ಲಿ ವೈರಲ್ ಆಗುತ್ತಿರುವುದನ್ನು ನೋಡಿ ತಮ್ಮ ಆಶ್ಚರ್ಯವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ವರ್ಷಗಳ ನಂತರ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುವುದನ್ನು ಈಗ ತಿಳಿಯೋಣ ಬನ್ನಿ.

ವಾಸ್ತವವಾಗಿ ಇದೊಂದು ಆಮೆಯ ವಿಡಿಯೋ ಆಗಿದೆ ಆದರೆ. ಆದರೆ ಈ ವೀಡಿಯೋದಲ್ಲಿ ಅಸಾಮಾನ್ಯ ಎನಿಸುಸುವಂತಹ ಒಂದು ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ವೀಡಿಯೋ ಮಾಡಿರುವವರ ಪ್ರಕಾರ ಇದರಲ್ಲಿರುವು ಸ್ನಾಪಿಂಗ್ ಟರ್ಟಲ್ ಎಂದು ಹೇಳಿದ್ದಾರೆ. ಈ ಆಮೆಯನ್ನು ನೋಡಲು ಕೂಡಾ ಸಾಮಾನ್ಯವಾದ ಆಮೆಯಂತೆ ಕಾಣುವುದಿಲ್ಲ. ಇದೊಂದು ವಿಶೇಷ ಜಾತಿಯ ಆಮೆ ಎಂದು ಅದರ ದೇಹವನ್ನು ನೋಡುತ್ತಲೇ ಹೇಳಬಹುದು. ನೋಡಲು ಆಮೆಯಂತೆ ಕಾಣುವ ಇದಕ್ಕೆ ಮೊಸಳೆಯಂತಹ ಬಾಲ ಕೂಡಾ ಇರುವುದು ವಿಶೇಷ. ಒಂದು ಕ್ಷಣ ಅದರ ಬಾಲವನ್ನು, ದೇಹದ ಮೇಲ್ಭಾಗವನ್ನು ನೋಡಿದಾಗ ಈ ಆಮೆ ನಮಗೆ ಬಹಳ ವಿಚಿತ್ರವಾಗಿದೆ ಎನಿಸುತ್ತದೆ.

ವಿಡಿಯೋದಲ್ಲಿರುವ ದೃಶ್ಯವನ್ನು ಗಮನಿಸಿದಾಗ, ಆಮೆಯನ್ನು ಹಿಡಿದುಕೊಂಡಿರುವ ವ್ಯಕ್ತಿಯು ಅದರ ಬಾಯಿಯ ಮುಂದಕ್ಕೆ ಒಂದು ಕಲ್ಲಂಗಡಿ ಹಣ್ಣನ್ನು ತರುತ್ತಾನೆ. ಆಗ ಆಮೆಯು ಆ ಕಲ್ಲಂಗಡಿ ಹಣ್ಣನ್ನು ಆಮೆಯ ಹಾಗೆ ಅಲ್ಲದೇ, ಮೊಸಳೆಯು ಪ್ರಾಣಿಗಳನ್ನು ಬೇಟೆಯಾಡುವ ರೀತಿಯಲ್ಲಿ ಬಾಯಿ ತೆರೆದು ಕಚಕ್ ಎಂದು ಹಿಡಿಯುತ್ತದೆ. ಮೊಸಳೆಯ ಹಾಗೆ ಆಮೆ ಕಲ್ಲಂಗಡಿ ಹಣ್ಣನ್ನು ಒಂದೇ ಏಟಿಗೆ ಕಚ್ಚಿ ಬಾಯಿಗೆ ಹಾಕಿಕೊಳ್ಳುತ್ತದೆ. ಈ ದೃಶ್ಯವನ್ನು ನೋಡಿದಾಗ ಒಂದು ಕ್ಷಣ ನೋಡುಗರು ಮೂಕ ವಿಸ್ಮಿತರಾಗುತ್ತಾರೆ. ಆಮೆಯ ಇಂತಹ ಒಂದು ರೂಪವನ್ನು ನೋಡಿ ಆಶ್ಚರ್ಯವನ್ನು ಪಡುತ್ತಿದ್ದಾರೆ.

ವಿಡಿಯೋ ನೋಡಿ

ಈ ವೈರಲ್ ವಿಡಿಯೋವನ್ನು ಈಗಾಗಲೇ 4 ಕೋಟಿ ಗಳಿಗಿಂತಲೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಒಂದು ಲಕ್ಷಕ್ಕಿಂತ ಅಧಿಕ ಮಂದಿ ಲೈಕ್ ನೀಡಿದ್ದಾರೆ. ಮೂರು ಸಾವಿರಕ್ಕಿಂತ ಅಧಿಕ ಮಂದಿ ಕಾಮೆಂಟ್ಸ್ ಗಳ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಬರೆದುಕೊಂಡಿದ್ದಾರೆ. ಇದರಲ್ಲಿ ಬಹುತೇಕ ಜನರು ಎಂಟು ವರ್ಷಗಳ ನಂತರ ಈ ವಿಶೇಷ ವಿಡಿಯೋವನ್ನು ತಮಗೆ ರೆಕಮೆಂಡ್ ಮಾಡಿದ್ದಕ್ಕಾಗಿ ಯೂಟ್ಯೂಬ್ ಗೆ ಧನ್ಯವಾದಗಳನ್ನು ಹೇಳಿದ್ದಾರೆ. ಇನ್ನು ಅನೇಕ ಮಂದಿ ಈ ವೀಡಿಯೋದಲ್ಲಿನ ವಿಶೇಷ ದೃಶ್ಯವನ್ನು ನೋಡಿ ಬಹಳ ಅದ್ಭುತವಾಗಿದೆ, ಬಹಳ ವಿಚಿತ್ರವಾಗಿದೆ ಹಾಗೂ ಏನೋ ಒಂದು ವಿಸ್ಮಯ ಎನಿಸುವ ಹಾಗಿದೆ ಎಂದೆಲ್ಲ ಕಾಮೆಂಟ್ ಗಳನ್ನು ಮಾಡಿದ್ದಾರೆ.