ಬಲೂನು ಮಾರಾಟಮಾಡುವ ಹುಡುಗಿಯೊಬ್ಬಳು ಇಂಟರ್ನೆಟ್ ಸ್ಟಾರ್ ಆದಳು ಒಂದೇ ರಾತ್ರಿಯಲ್ಲಿ! ಹೇಗೆ ಒಲಿದುಬಂತು ಅದೃಷ್ಟ? ಅಂತೀರಾ, ಇಲ್ಲಿ ನೋಡಿ.
ಒಂದು ಚಲನಚಿತ್ರ ಅಥವಾ ಸುಂದರ ಧಾರಾವಾಹಿಗೆ ಮ್ಯಾಚ್ ಆಗುವ ರೀತಿಯಲ್ಲಿದೆ ಈಕೆಯ ಈ ಸ್ಟೋರಿ…
ರಸ್ತೆಯ ಮೇಲೆ ಬಲೂನು ಮಾರಾಟ ಮಾಡಿಕೊಂಡಿದ್ದ ಹುಡುಗಿಯ ಸೌಂದರ್ಯವನ್ನು ಫೋಟೋಗ್ರಾಫರ್ ಒಬ್ಬನು ಪತ್ತೆ ಹಚ್ಚಿದ, ನಂತರ ಈಕೆ ನೋಡುನೋಡುವಷ್ಟರಲ್ಲಿ ಇಂಟರ್ನೆಟ್ ಸ್ಟಾರ್ ಆಗಿ ಗುರುತಿಸಲ್ಪಟ್ಟಳು. ಉದರ ನಿರ್ವಾಹಕ್ಕಾಗಿ ಜನರಿರುವ ಗದ್ದಲದ ಸ್ಥಳದಲ್ಲಿ ಬಲೂನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕಿಸ್ಬೂಳ ಈ ಕಥೆಯಾಗಿದೆ.
ಕಿಸ್ಬೂ ಸುಮಾರು 18-19 ರ ಪ್ರಾಯದ ತರುಣಿ. ಮೂಲತ: ರಾಜಸ್ಥಾನದವಳು. ಆದರೂ ಕಳೆದ ಅನೇಕ ವರ್ಷಗಳಿಂದ ಆಕೆಯ ವಾಸ್ತವ್ಯ ಕೇರಳದಲ್ಲಿ. ಮನೆಯ ಖರ್ಚುಗಳನ್ನು ನೀಗಿಸುವ ಸಲುವಾಗಿ ಅನೇಕ ವರ್ಷಗಳಿಂದ ಬಲೂನು ಮಾರಾಟ ಮಾಡುತ್ತಾಳೆ. ಒಂದು ದಿನ ದಿನನಿತ್ಯದ ಹಾಗೆ ಯಾರಾದರೂ ತನ್ನ ಬಲೂನುಗಳನ್ನು ಖರೀದಿಸಿಕೊಳ್ಳುವರೆನೋ ಎಂದು ಆಸೆಯಿಂದ ತನ್ನ ಕೆಲಸದಲ್ಲಿ ತೊಡಗಿದ್ದಳು. ಸರಿಯಾಗಿ ಅದೇ ಸಮಯಕ್ಕೆ ವೆಡ್ಡಿಂಗ್ ಫೋಟೋಗ್ರಾಫರ್ ಅರ್ಜುನ್ ಕೃಷ್ಣನ್ ಅವರು ತಮ್ಮ ಕ್ಯಾಮೆರಾದಿಂದ ಆಕೆಯನ್ನು ಸೆರೆಹಿಡಿದರು. ಆಕೆಯ ಬಾಡಿ ಲ್ಯಾಂಗ್ವೇಜ್, ಸುಂದರ ಮತ್ತು ಆಕರ್ಷಕವಾದ ಮುಖ ಮತ್ತು ಅನೇಕ ಭಾವಗಳು ತುಂಬಿದ ಬಟ್ಟಲು ಕಣ್ಣುಗಳು ಫೋಟೋಗ್ರಾಫರ್ ಗೆ ತುಂಬಾ ಇಷ್ಟವಾದವು. ಆಕೆಯ ಮುಖ ತುಂಬಾ ಫೋಟೋಜನಿಕ್ ಎನಿಸಿದ ಕಾರಣ ಆಕೆಗೆ ಗೊತ್ತಿಲ್ಲದಂತೆ ಅನೇಕ ಫೋಟೋಗಳನ್ನು ಅರ್ಜುನ್ ಕೃಷ್ಣನ್ ಅವರು ಕ್ಲಿಕ್ಕಿಸಿದ್ದಾರೆ. ತದನಂತರ ಅವರು ಆ ಫೋಟೋಗಳನ್ನು ಕಿಸ್ಬು ಮತ್ತು ಆಕೆಯ ತಾಯಿಗೆ ತೋರಿಸಿದ್ದಾರೆ. ಅವರು ಸಹ ಈ ಫೋಟೋಗಳನ್ನು ತುಂಬಾ ಇಷ್ಟಪಟ್ಟರು.
View this post on Instagram
ನಂತರ ಈ ಫೋಟೋಗಳನ್ನು ಅರ್ಜುನ್ ಅವರ ಮಿತ್ರ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಹುಡುಗಿಯ ಮುಖದ ಮೇಲಿನ ಚಾರ್ಮ್ ದಿಂದಾಗಿ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುವುದರ ಜೊತೆಗೆ ಲೈಕ್ ಮತ್ತು ಕಾಮೆಂಟ್ಸ್ ಗಳ ಅಕ್ಷರಶಃ ಮಳೆ ಸುರಿಯಿತು. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಯನ್ನು ನೋಡಿ ಅರ್ಜುನ್ ಅವರು ಕಿಸ್ಬೂಳ ಮೇಕ್ ಓವರ್ ಮಾಡಿ ಅದ್ಭುತವಾಗಿ ಪ್ರೊಫೆಷನಲ್ ಫೋಟೋಗಳ ಶೂಟ್ ಮಾಡಿದರು.
View this post on Instagram
photoman_official ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ಮುಖಾಂತರ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಶೇರ್ ಮಾಡಲಾಯಿತು. ಅಲ್ಲಿ ”From the street of andalur to peoples heart. And that smile in her face after the make over #KISBU” ಎಂದು ಕ್ಯಾಪ್ಷನ್ ನೀಡಲಾಯಿತು. ಈ ಫೋಟೋಗಳಿಂದಾಗಿ ಕೀಸ್ಬೂ ಕೇರಳದಲ್ಲಿ ಸದ್ಯ ಫೆಮಸ್ ಪರ್ಸನ್ಯಾಲಿಟೀ ಆಗಿದ್ದಾಳೆ.