ಬಹಳ ಸುಲಭವಾಗಿ ಮನೆಯ ಹೂಕುಂಡದಲ್ಲೇ ಬೆಳೆಸಬಹುದು ಬಹುಪಯೋಗಿ ನಿಂಬೆಹಣ್ಣು: ಪೂರ್ತಿ ಮಾಹಿತಿ ಇಲ್ಲಿದೆ ನೋಡಿ!
ದಿನದಿಂದ ದಿನಕ್ಕೆ ಹೇಗೆ ಬೇಸಿಗೆಯ ತೀವ್ರತೆಯು ಹೆಚ್ಚುತ್ತಿದೆಯೇ ಅದೇ ರೀತಿಯಲ್ಲಿ ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆಯೂ ಕೂಡಾ ಹೆಚ್ಚಾಗುತ್ತಿದೆ. ಒಂದು ವೇಳೆ ಮನೆಯ ಮುಂದೆ ವಿಶಾಲವಾದ ಜಾಗ ಇರುವವರು ಬೇಕಿದ್ದರೆ ನಿಂಬೆಹಣ್ಣಿನ ಗಿಡವನ್ನು ಬೆಳೆಸಿ ಬಳಸುವ ಅವಕಾಶ ಇದೆ. ಆದರೆ ನಗರಗಳಲ್ಲಿ ಸಣ್ಣ ಪುಟ್ಟ ಮನೆಗಳಲ್ಲಿ ,ಪ್ಲಾಟ್ ಗಳಲ್ಲಿ ವಾಸಿಸುವ ಜನರಿಗೆ ನಿಂಬೆಹಣ್ಣನ್ನು ಹಣಕೊಟ್ಟು ಮಾರುಕಟ್ಟೆಯಿಂದಲೇ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವಂತಹ ಹಣ್ಣು ಮತ್ತು ತರಕಾರಿಗಳಲ್ಲಿ ರಾಸಾಯನಿಕಗಳು ಕಂಡು ಬರುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಇಂತಹ ತರಕಾರಿಗಳ ಬಳಕೆಯಿಂದ ನಮ್ಮ ದೇಹದ ಮೇಲೆ ಇವುಗಳ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳ ಬಗ್ಗೆ ಕೂಡಾ ಆಗಾಗ ಸುದ್ದಿಗಳು ಬರುತ್ತಲೇ ಇರುತ್ತವೆ.
ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಷಯ ನಿಮಗೆ ಆರೋಗ್ಯ ಸಮಸ್ಯೆಗಳಿಂದ ಒಂದು ಪರಿಹಾರ ಮಾತ್ರವೇ ಅಲ್ಲದೆ ನಿಂಬೆಹಣ್ಣಿನ ಏರುತ್ತಿರುವ ಬೆಲೆಯಿಂದ ಕೂಡಾ ಪರಿಹಾರವನ್ನು ಒದಗಿಸುವ ಮಾರ್ಗವಾಗಿದೆ. ಏಕೆಂದರೆ ನಮ್ಮ ಮನೆಯಲ್ಲಿ ಕುಂಡಗಳಲ್ಲಿ ( Pot ) ನಿಂಬೆಹಣ್ಣಿನ ಗಿಡವನ್ನು ಬೆಳೆಸಿ, ನಿಂಬೆಹಣ್ಣನ್ನು ಪಡೆಯುವ ವಿಧಾನದ ಬಗ್ಗೆ ನಾವಿಂದು ತಿಳಿಯಲಿದ್ದೇವೆ. ಹಾಗಾದರೆ ನಿಂಬೆ ಹಣ್ಣಿನ ಗಿಡವನ್ನು ಮನೆಯಲ್ಲಿ ಬೆಳೆಸಲು ಏನೆಲ್ಲಾ ಬೇಕು, ಹೇಗೆಲ್ಲಾ ಜಾಗ್ರತೆ ವಹಿಸಬೇಕೆಂದು ತಿಳಿಯೋಣ ಬನ್ನಿ. ಮನೆಯಲ್ಲಿ ನಿಂಬೆ ಹಣ್ಣಿನ ಗಿಡವನ್ನು ಬೆಳೆಸಬೇಕೆಂದರೆ ಮೊದಲಿಗೆ ಒಂದು ದೊಡ್ಡ ಕುಂಡದ ಅವಶ್ಯಕತೆ ಇರುತ್ತದೆ. ನಂತರ ನಿಂಬೆಹಣ್ಣಿನ ಗಿಡವನ್ನು ಬೆಳೆಸಲು ಅಗತ್ಯವಿರುವ ಬೀಜದ ಅಥವಾ ಸಸಿಯ ಅವಶ್ಯಕತೆ ಇರುತ್ತದೆ. ಇವೆರಡೂ ಸಿದ್ಧವಾದ ನಂತರ ಕುಂಡಕ್ಕೆ ಹಾಕಲು ಶುದ್ಧವಾದ ಮಣ್ಣು ಮತ್ತು ಪ್ರಾಕೃತಿಕ ಗೊಬ್ಬರದ ಅವಶ್ಯಕತೆ ಇರುತ್ತದೆ.

ಇವೆಲ್ಲವುಗಳ ಜೊತೆಯಲ್ಲಿ ಗಿಡಕ್ಕೆ ಅವಶ್ಯಕತೆ ಇರುವ ನೀರಿನ ವ್ಯವಸ್ಥೆ ಇರಬೇಕು ಹಾಗೂ ನೀರು ಉಪ್ಪಾಗಿರಬಾರದು. ಗಿಡ ಒಣಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದ್ದು, ಇವೆಲ್ಲವುಗಳ ಜೊತೆಗೆ ಒಂದು ಖುರ್ಪಿಯ ಅಗತ್ಯವಿರುತ್ತದೆ. ನಿಂಬೆಹಣ್ಣಿನ ಗಿಡವನ್ನು ಬೆಳೆಸಲು ಮಾರುಕಟ್ಟೆ ಯಲ್ಲಿ ಬೀಜವೂ ಸಿಗುತ್ತದೆ, ಅದೇ ರೀತಿ ಸಸಿಯೂ ಕೂಡಾ ಸಿಗುತ್ತದೆ. ನೀವು ಬೀಜವನ್ನು ಕೊಳ್ಳುವುದಾದರೆ ಮೊದಲಿಗೆ ಬೀಜಗಳ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ ಕೆಲವು ವರ್ಷದ ಎಲ್ಲಾ ಕಾಲದಲ್ಲಿ ನಿಂಬೆಹಣ್ಣನ್ನು ಬಿಟ್ಟರೆ, ಇನ್ನು ಕೆಲವು ನಿಂಬೆ ಜಾತಿಯು ಬೇಸಿಗೆಯಲ್ಲಿ ಮಾತ್ರವೇ ನಿಂಬೆಹಣ್ಣನ್ನು ಬಿಡುತ್ತವೆ. ಆದ್ದರಿಂದ ಅದನ್ನು ತಿಳಿದುಕೊಂಡು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಬೀಜವನ್ನು ಖರೀದಿಸಿ.
ಸಸಿಯನ್ನು ಖರೀದಿ ಮಾಡುವುದಾದರೆ ಹತ್ತಿರದ ನರ್ಸರಿಗೆ ಭೇಟಿ ನೀಡಿ. ಸಾಮಾನ್ಯವಾಗಿ ಸಸಿಗಳ ಬೆಲೆ ಅವುಗಳ ಗಾತ್ರದ ಆಧಾರದಲ್ಲಿ ಇರುತ್ತದೆ. ಹೆಚ್ಚು ಎತ್ತರವಿರುವ ಸಸಿಗಳನ್ನು ಖರೀದಿ ಮಾಡಬೇಡಿ. ಏಕೆಂದರೆ ಎತ್ತರವಾಗಿರುವ ಸಸಿಗಳನ್ನು ಕುಂಡಗಳಲ್ಲಿ ನೆಡುವುದು ಕಷ್ಟವಾಗುತ್ತದೆ. ಮಾರುಕಟ್ಟೆಯಿಂದ ಕುಂಡವನ್ನು ಖರೀದಿಸಿ ತರುವುದಾದರೆ ಪ್ಲಾಸ್ಟಿಕ್ ಬದಲಾಗಿ ಮಣ್ಣಿನ ಅಥವಾ ಸಿಮೆಂಟ್ ನಿಂದ ತಯಾರಿಸಿದ ಕುಂಡವನ್ನು ಖರೀದಿಸಿ, ಅದರ ಗಾತ್ರ ಸ್ವಲ್ಪ ದೊಡ್ಡದಾಗಿರಲಿ. ಮನೆಗೆ ತಂದ ಮೇಲೆ ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ ಹಾಗೆಯೇ ಬಿಡಿ. ಕುಂಡದ ತಳಭಾಗದಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿ, ಏಕೆಂದರೆ ಕುಂಡದಲ್ಲಿ ನೀರು ನಿಲ್ಲಬಾರದು.

ಸಸಿ ಅಥವಾ ಬೀಜವನ್ನು ಹಾಕಲು ಅಗತ್ಯವಿರುವ ಮಣ್ಣನ್ನು ಖರೀದಿ ಮಾಡಬೇಡಿ. ಬದಲಾಗಿ ನಿಮ್ಮ ಮನೆಯ ಹತ್ತಿರದ ಖಾಲಿ ನಿವೇಶನಗಳಲ್ಲಿ ಅಥವಾ ನೆಲದಿಂದಲೇ ಮಣ್ಣನ್ನು ಅಗೆದು ತನ್ನಿ. ಮಣ್ಣು ಹೆಚ್ಚು ಹಳೆಯದಾಗಿರಬಾರದು ಹಾಗೂ ಮಣ್ಣಿನಲ್ಲಿ ಕಲ್ಲು ಹಾಗೂ ಹೆಂಟೆ ಗಳು ಇರಬಾರದು. ಹೀಗೆ ತಂದ ಮಣ್ಣನ್ನು ಒಂದು ಕಡೆ ಹರಡಿ ನೀರನ್ನು ಚಿಮುಕಿಸಿ ಚೆನ್ನಾಗಿ ಒಣಗಲು ಬಿಡಿ. ಹಾಗೆ ಒಣಗಿದ ನಂತರ ಸಡಿಲವಾಗುವ ಮಣ್ಣನ್ನು ಕುಂಡದಲ್ಲಿ ತುಂಬಿಸಿ, ಇದರಲ್ಲಿ ಸಸ್ಯದ ಬೇರುಗಳು ಸುಲಭವಾಗಿ ಹರಡಿಕೊಳ್ಳಲು ಯಾವುದೇ ಸಮಸ್ಯೆ ಇರುವುದಿಲ್ಲ. ಕಲ್ಲು ಅಥವಾ ಹೆಂಟೆಗಳು ಇದ್ದರೆ ಬೇರಿನ ವಿಕಸನವೂ ಸರಿಯಾಗಿ ಆಗುವುದಿಲ್ಲ.
ಇನ್ನು ಸಸ್ಯಕ್ಕೆ ಹಾಕಲು ಗೊಬ್ಬರದ ಅವಶ್ಯಕತೆಯಿದ್ದು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಹತ್ತಿರದ ಮಾರುಕಟ್ಟೆಯಿಂದ ಪ್ಯಾಕಿಂಗ್ ರೂಪದಲ್ಲಿ ಸಿಗುವ ಗೊಬ್ಬರವನ್ನು ತಂದು ಉಪಯೋಗಿಸಬೇಕಾಗುತ್ತದೆ. ಸಣ್ಣ ಪಟ್ಟಣ ಪ್ರದೇಶಗಳಲಾದರೆ ಹತ್ತಿರದಲ್ಲೇ ಎಲ್ಲಾದರೂ ಇರುವ ಹಸು ಅಥವಾ ಹೆಮ್ಮೆಯ ಸಗಣಿಯಿಂದ ತಯಾರಾಗಿರುವ ಕೊಳೆತ ಸಾವಯವ ಗೊಬ್ಬರವನ್ನು ಬಳಸಬಹುದು. ಈ ಗೊಬ್ಬರ ಬಹಳ ಉಪಯುಕ್ತ ಎನಿಸುತ್ತದೆ. ನೀವು ನರ್ಸರಿಯಿಂದ ಸಸಿಯನ್ನು ತಂದಿದ್ದರೆ ಅದನ್ನು ಸಂಜೆ ವೇಳೆ ನೆಡುವ ಕೆಲಸವನ್ನು ಮಾಡಿ. ಗಿಡವನ್ನು ಹೊರ ತೆಗೆಯುವಾಗ ನರ್ಸರಿಯ ಮಣ್ಣು ಕೆಳಗೆ ಬೀಳದಂತೆ ಎಚ್ಚರವಹಿಸಿ. ನರ್ಸರಿಯಿಂದ ತಂದಿರುವ ಗಿಡದ ಬೇರುಗಳಲ್ಲಿರುವ ಮಣ್ಣಿನ ಸಹಿತವಾಗಿ ಕುಂಡದೊಳಗೆ ಅದನ್ನು ಇಟ್ಟು ಗಿಡವನ್ನು ನೆಡಬೇಕು.
ನೆಟ್ಟ ನಂತರ ಸ್ವಲ್ಪ ನೀರನ್ನು ಹಾಕಿ. ಸಸಿಯ ಬದಲಾಗಿ ಬೀಜವನ್ನು ತಂದಿದ್ದರೆ ಬೀಜವನ್ನು ಒಂದು ರಾತ್ರಿಯಿಡೀ ಚೆನ್ನಾಗಿ ನೀರಿನಲ್ಲಿ ನೆನೆಸಿ ಮರುದಿನ ಅದನ್ನು ಮಣ್ಣಿನಲ್ಲಿ ಎರಡು ಅಥವಾ ಮೂರು ಇಂಚು ಆಳದಲ್ಲಿ ನೆಡಬೇಕಾಗುತ್ತದೆ. ಎಲ್ಲಾ ಸಸ್ಯಗಳಿಗೂ ನೀರು ಅತ್ಯವಶ್ಯಕ ವಾಗಿರುವುದರಿಂದ ನಿಂಬೆಹಣ್ಣಿನ ಗಿಡಕ್ಕೂ ಕಾಲಕಾಲಕ್ಕೆ ನೀರನ್ನು ಪೂರೈಕೆ ಮಾಡಿ. ಬೇಸಿಗೆಯಲ್ಲಿ ಪ್ರತಿದಿನ ನೀರನ್ನು ಹಾಕಬಹುದು. ವಾತಾವರಣ ತಂಪಾಗಿ ಇದ್ದಾಗ ಎರಡು ದಿನಕ್ಕೊಮ್ಮೆ ನೀರನ್ನು ಹಾಕಿದರೆ ಸಾಕು. ಗಿಡಕ್ಕೆ ನೀರನ್ನು ಹಾಕುವಾಗ ಮಣ್ಣನ್ನು ಒಮ್ಮೆ ಪರೀಕ್ಷಿಸಿ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿದ್ದರೆ ನೀರನ್ನು ಹಾಕಬೇಕಾಗುತ್ತದೆ. ಹೆಚ್ಚು ನೀರನ್ನು ಹಾಕುವುದರಿಂದ ಬೇರುಗಳು ಹಾಳಾಗುತ್ತದೆ. ಆದ್ದರಿಂದ ಎಚ್ಚರಿಕೆವಹಿಸಿ ಆಗಾಗ ಮಣ್ಣನ್ನು ಸ್ವಲ್ಪಸ್ವಲ್ಪವೇ ಅಗೆಯಿರಿ, ಗಿಡದ ಸುತ್ತ ಬರುವ ಕಳೆಯನ್ನು ತೆಗೆಯಿರಿ.

ಮಣ್ಣನ್ನು ಹೀಗೆ ಅಗೆಯುವುದರಿಂದ ಮಣ್ಣು ಗಟ್ಟಿಯಾಗುವುದಿಲ್ಲ, ಸಸ್ಯವು ಚೆನ್ನಾಗಿ ಬೆಳೆಯಲು ಇದು ಅನುವು ಮಾಡಿಕೊಡುತ್ತದೆ. ಇದು ಮಾತ್ರವೇ ಅಲ್ಲದೆ ಸಸ್ಯದ ಮೇಲೆ ಸೊಳ್ಳೆಗಳು ಕುಳಿತುಕೊಳ್ಳುವುದು ಅಥವಾ ಇನ್ನಾವುದೇ ರೀತಿಯ ರೋಗದ ಲಕ್ಷಣಗಳು ಕಂಡುಕೊಂಡರೆ, ಕೂಡಲೇ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಔಷಧಿಯನ್ನು ಬಳಕೆ ಮಾಡಿ. ಈ ರೀತಿ ಔಷಧಿಯನ್ನು ಬಳಸುವುದರಿಂದ ಗಿಡದ ಮೇಲೆ ಸೊಳ್ಳೆಗಳು ಕೂರುವುದಿಲ್ಲ. ಗಿಡಗಳು ಸಂಪೂರ್ಣ ಆರೋಗ್ಯವಂತವಾಗಿ ಬೆಳೆಯಲು ಅವಕಾಶವಾಗುತ್ತದೆ. ಗಿಡವನ್ನು ನೆಟ್ಟ ಮೇಲೆ ಅದರಲ್ಲಿ ಬೆಳೆಯುವ ಕಳೆಯನ್ನು ಸಕಾಲದಲ್ಲಿ ತೆಗೆದುಹಾಕಿ ಇಲ್ಲದೆ ಹೋದರೆ ಅದು ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತದೆ.