ಬಹಿರಂಗವಾಯಿತು ಕೊಹ್ಲಿಯವರನ್ನು ಕ್ಯಾಪ್ಟನ್ ಶಿಪ್ ನಿಂದ ತಗೆದ ಕಾರಣ! ರೋಹಿತ್ ಶರ್ಮಾ ಇಟ್ಟಿದ್ದರಂತೆ ಈ ದೊಡ್ಡ ಷರತ್ತು, ತಿಳಿದುಕೊಳ್ಳಿ
ಡಿಸೆಂಬರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ದಕ್ಷಿಣಿ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕಾಗಿ ತಂಡವನ್ನೂ ಪ್ರಕಟಿಸಲಾಗಿದೆ. ಪ್ರವಾಸಕ್ಕೂ ಮುನ್ನ ಬಿಸಿಸಿಐ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿದೆ.
ಟಿ- 20 ನಂತರ ರೋಹಿತ್ ಶರ್ಮಾಗೆ ಏಕದಿನ ನಾಯಕತ್ವವನ್ನು ಸಹ ಬಿಸಿಸಿಐ ಹಸ್ತಾಂತರಿಸಿದೆ. ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಏಕಾಏಕಿ ತೆಗೆದುಹಾಕಿರುವುದು ಎಲ್ಲರ ಮನಸ್ಸಿನಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ರೋಹಿತ್ ಶರ್ಮಾ ಅವರನ್ನು ಕಪ್ತಾನ ಮಾಡಲು ಒಂದು ಹೊಸ ಮಾಹಿತಿ ಬೆಳಕಿಗೆ ಬಂದಿದೆ ಅದೇನೆಂದರೆ ರೋಹಿತ್ ಶರ್ಮಾ ಅವರು ಟಿ-20 ಕಪ್ತಾನ ಪದ ಸ್ವೀಕರಿಸುವ ಮುನ್ನ ಆಯ್ಕೆದಾರರ ಮುಂದೆ ಒಂದು ಷರತ್ತು ಇಟ್ಟಿದ್ದರು. ಆ ಷರತ್ತು ಯಾವುದು ಎಂದರೆ ‘ ಟಿ-20 ನಾಯಕತ್ವ ಸ್ವೀಕರಿಸುವ ಮುನ್ನ ನನಗೆ ಮುಂದೆ ಏಕದಿನ ಪಂದ್ಯದ ನಾಯಕತ್ವ ಸಹ ನೀಡುವದಾದರೆ ಮಾತ್ರ ನಾನು ಈ ಟಿ-20 ನಾಯಕತ್ವ ಸ್ವೀಕರಿಸಲು ಸಿದ್ಧನಿದ್ದೇನೆ’ ಎಂಬ ಷರತ್ತು ಶರ್ಮಾ ಅವರು ಆಯ್ಕೆಗಾರರ ಮುಂದೆ ಇಟ್ಟಿದ್ದರಂತೆ. ಕೊಹ್ಲಿಯವರು ಬಹಳ ದಿವಸಗಳ ಹಿಂದೆಯೇ ಟಿ-20 ನಾಯಕತ್ವ ಬಿಡುವ ಘೋಷಣೆ ಮಾಡಿದ್ದರು ತದನಂತರ ಈಗ ಏಕದಿನ ಪಂದ್ಯದ ನಾಯಕತ್ವ ಸಹ ವಿರಾಟ್ ಅವರಿಂದ ಕಸಿದುಕೊಳ್ಳಲಾಗಿದೆ.
ಕ್ರಿಕಬಜ್ ನ ಒಂದು ವರದಿಯ ಅನುಸಾರ ಯಾವಾಗ ಕೊಹ್ಲಿಯವರನ್ನು ಏಕದಿನ ನಾಯಕತ್ವದಿಂದ ತಗೆದು ಹಾಕಲು ಸಭೆ ತಗೆದುಕೊಳ್ಳಲಾಯಿತೋ ಆಗ ಈ ಕುರಿತು ಶರ್ಮಾ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ವಂತೆ. ಆ ಸಮಯದಲ್ಲಿ ರೋಹಿತ್ ಅವರು ಮುಂಬೈನಲ್ಲಿ ಕೆ ಎಲ್ ರಾಹುಲ್, ಅಜಿಂಕ್ಯಾ ರಹಾನೆ ಮತ್ತು ರಿಷಬ್ ಪಂತ ಅವರೊಂದಿಗೆ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದರಂತೆ. ಅದಲ್ಲದೆ ಆಯ್ಕೆದಾರರ ಮುಂದೆ ಮೊದಲೇ ರೋಹಿತ್ ಶರ್ಮಾ ಅವರು ಏಕದಿನ ಕಪ್ತಾನ ಬಗೆಗಿನ ಇಚ್ಛೆ ಸಹ ವ್ಯಕ್ತ ಪಡಿಸಿದ್ದರು. ನಾಯಕನಾಗಿ ರೋಹಿತ್ ಅವರ ದಾಖಲೆ ಅತ್ಯುತ್ತಮವಾಗಿದೆ. ಒಂಡೆಗಳಲ್ಲಿ, ರೋಹಿತ್ ಇದುವರೆಗೆ 10 ಪಂದ್ಯಗಳಲ್ಲಿ ನಾಯಕರಾಗಿದ್ದು ಅದರಲ್ಲಿ 8 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ. ರೋಹಿತ್ ಅವರ ಏಕದಿನ ಪಂದ್ಯದ ವಿನ್ನಿಂಗ್ ಪ್ರತಿಶತ 80.00 ಇದೆ. ಅಲ್ಲದೆ ರೋಹಿತ್ ಅವರು ಟಿ-20 ಅಂತರರಾಷ್ಟ್ರೀಯ 22 ಪಂದ್ಯಗಳಲ್ಲಿ ನಾಯಕತ್ವವಹಿಸಿದ್ದಾರೆ. ಇವುಗಳಲ್ಲಿ 18 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಅವರು ಇದುವರೆಗೆ 4 ಸಲ ಐಪಿಎಲ್ ಟ್ರಾಫಿಯನ್ನು ತಮ್ಮ ತಂಡಕ್ಕೆ ತಂದು ಕೊಟ್ಟಿದ್ದಾರೆ ಇದೆಲ್ಲದೇ ವಿರಾಟ್ ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರು ಭಾರತೀಯ ತಂಡದ ಜವಾಬ್ದಾರಿ ಹೊತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ.