ಬಾತ್ ರೂಮಿನಲ್ಲಿ ನುಸುಳಿ ಬಂದ ವಿಷಕಾರಿ ಹಾವಿನ ವಿಡಿಯೋ ಆಯಿತು ವೈರಲ್ ! ವ್ಯಕ್ತಿ ಬಾತ್ ರೂಮ್ ಬಾಗಿಲು ತೆರೆದಾಗ…
ಜಗತ್ತಿನ ವಿಷಕಾರಿಯಾಗಿರತಕ್ಕಂತಹ ಹಾವುಗಳಲ್ಲಿ ಕಿಂಗ್ ಕೋಬ್ರಾ ಎಲ್ಲಕ್ಕೂ ಉದ್ದವಾಗಿರುತ್ತದೆ. ಒಂದು ವಯಸ್ಸಾದ ಕಿಂಗ್ ಕೋಬ್ರಾದ ಉದ್ದಳತೆ ಸುಮಾರು 10 ರಿಂದ 12 ಅಡಿಗಳವರೆಗೆ ಮತ್ತು ತೂಕ 20 ಪೌಂಡ್ ವರೆಗೆ ಇರುತ್ತದೆ. ಯಾವಾಗ ಕಿಂಗ್ ಕೋಬ್ರಾ ಹೆಡೆ ಎತ್ತಿ ನಿಲ್ಲುತ್ತದೆ ಆಗ ಎದುರಿನವರ ದೇಹವೆಲ್ಲಾ ಭಯದಿಂದ ಕಂಪಿಸುತ್ತದೆ. ಈ ಕಿಂಗ್ ಕೋಬ್ರಾ ಸಾಮಾನ್ಯವಾಗಿ ಚಿಕ್ಕಪುಟ್ಟ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಹಾಗೂ ಹಾವುಗಳನ್ನು ತಿನ್ನುತ್ತದೆ. ಈ ಪ್ರಾಣಿಯು ಆದಷ್ಟು ಮನುಷ್ಯನಿಂದ ದೂರವಿರಲು ಪ್ರಯತ್ನಿಸುತ್ತವೆ. ಮನುಷ್ಯನಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರ ಅದು ಮನುಷ್ಯನಿಗೆ ಕಚ್ಚಲು ಯತ್ನಿಸುತ್ತದೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಕೋಬ್ರಾದ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಕಿಂಗ್ ಕೋಬ್ರಾ ಒಬ್ಬರ ಮನೆಯಲ್ಲಿಯ ಟಾಯ್ಲಟ್ ನಲ್ಲಿ ನುಸುಳಿ ಬಂದಿದೆ. ಕಾರಣ ಅದಕ್ಕೆ ಅಲ್ಲಿ ಸ್ವಲ್ಪ ತಂಪು ವಾತಾವರಣವಿರುತ್ತದೆ. ಟಾಯ್ಲೆಟ್ ಗೆ ಹೋಗುವ ಸಲುವಾಗಿ ವ್ಯಕ್ತಿಯು ಬಾಗಿಲು ತೆರೆದಾಗ ಎದುರಿಗೆ ಕಿಂಗ್ ಕೋಬ್ರಾ ಕಾಣಿಸಿದಾಗ ಆ ವ್ಯಕ್ತಿಗೆ ಹೇಗಾಗಿರಬೇಡ.
ಆತ ಬಾಗಿಲು ತೆರೆದಾಗ ಎದುರಿಗೆ ಇದನ್ನೇ ನೋಡಿದ್ದಾನೆ. ಅದು ಹೇಗಾದರೂ ಮಾಡಿ ಹೊರಗೆ ಹೋಗುವ ಸಲುವಾಗಿ ಅತ್ತಿತ್ತ ಬಿಲ ಅಥವಾ ದಾರಿಯನ್ನು ಹುಡುಕುತ್ತಿತ್ತು. ಅದರ ದೇಹದ ಮೇಲೆ ಟಾಯ್ಲೆಟ್ ಪೇಪರ್ ಸಹ ಸುತ್ತಿಕೊಂಡಿರುವದು ಕಾಣುತ್ತಿದೆ. ಟಾಯ್ಲೆಟ್ ನಲ್ಲಿರುವ ಹಾವನ್ನು ನೋಡಿದ ನಂತರ, ಅದು ಮನೆಯ ಬೇರೆ ಭಾಗದಲ್ಲಿ ನುಸುಳ ಬಾರದೆಂದು ವ್ಯಕ್ತಿಯು ಹಠಾತ್ತನೆ ಟಾಯ್ಲೆಟ್ ಬಾಗಿಲನ್ನು ಮುಚ್ಚಿ ಬಿಟ್ಟಿದ್ದಾನೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಎಲ್ಲರೂ ನೋಡಿಯೇ ನೋಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು snake_unity ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋ ಅಪ್ ಲೋಡ್ ಮಾಡಿದ ನಂತರ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ವೀಕ್ಷಿಸಿ ಲೈಕ್ ಸಹ ಮಾಡುತ್ತಿದ್ದಾರೆ. ಜೊತೆಗೆ ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.