ಬಾಬಾ ವೆಂಗಾ ಅವರ ಅಚ್ಚರಿ ಮೂಡಿಸುವ ಭವಿಷ್ಯವಾಣಿ; 2022 ರಲ್ಲಿ ಈ 5 ಘಟನೆಗಳು ಸಂಭವಿಸಲಿವೆ!!!!
2021 ನೇ ವರ್ಷವು ಒಂದಿಷ್ಟು ಒಳ್ಳೆಯ ಮತ್ತು ಒಂದಿಷ್ಟು ಕೆಟ್ಟ ನೆನಪುಗಳೊಂದಿಗೆ ಕೊನೆಗೊಳ್ಳುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ ಆದರೆ, ಕೆಲವು ಖ್ಯಾತ ಪ್ರವಾದಿಗಳು ಆ#ಘಾತಕಾರಿ ಭವಿಷ್ಯ ನುಡಿದಿದ್ದಾರೆ. ಬಲ್ಗೇರಿಯಾದ ವಾಸಿಯಾದ ವಂಗೋಲಿಯಾ ಪಾಂಡೆವಾ ಗುಸ್ತೆರೋವಾ ಅಲಿಯಾಸ ಬಾಬಾ ವೆಂಗಾ ಅವರು ಒಬ್ಬ ಪ್ರಸಿದ್ಧ ಭವಿಷ್ಯಗಾರರು ಆಗಿದ್ದಾರೆ. ಅವರು ದೃಷ್ಟಿ ಇಲ್ಲದಿದ್ದರೂ ಅವರು ಭವಿಷ್ಯವನ್ನು ಸ್ಪಷ್ಟವಾಗಿ ಊಹಿಸಬಹುದು. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂದು ನಂಬಲಾಗಿದೆ. ಅವರು 2022 ರ ವರ್ಷಕ್ಕೆ ಏನನ್ನು ಊಹಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಜಗತ್ತಿನಲ್ಲಿ ನೀರಿನ ಕೊರತೆಉಂಟಾಗುತ್ತದೆ.
ವೆಂಗಾ ಬಾಬಾ ಅವರ ಪ್ರಕಾರ, 2022 ರಲ್ಲಿ ವಿಶ್ವದಲ್ಲಿ ನೀರಿನ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ. ಹಲವು ನಗರಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತವೆ. ನದಿ ನೀರು ಕಲುಷಿತಗೊಳ್ಳುತ್ತದೆ. ನೀರಿನ ಕೊರತೆಯಿಂದಾಗಿ ಜನರು ಸ್ಥಳಾಂತರಗೊಳ್ಳಬೇಕಾಗುತ್ತದೆ.
ಜನರು ಗ್ಯಾಜೆಟ್‌ಗಳ ವ್ಯಸನಿಯಾಗುತ್ತಾರೆ
ಬಾಬಾ ವೆಂಗಾ ಅವರ ಪ್ರಕಾರ, ಜನರು ಈ ವರ್ಷ ಹೆಚ್ಚು ಸಮಯವನ್ನು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಲ್ಲಿ ಕಳೆಯುತ್ತಾರೆ. ಜನರ ಈ ಅಭ್ಯಾಸ ಸಾವಕಾಶವಾಗಿ ಹವ್ಯಾಸದಲ್ಲಿ ರೂಪಾಂತರವಾಗುತ್ತದೆ. ಇದರಿಂದ ಜನರ ಮಾನಸಿಕ ಸ್ಥಿತಿ ಹದಗೆಟ್ಟುಸುತ್ತದೆ ಮತ್ತು ಅವರಿಗೆ ಮಾನಸಿಕ ಅಸ್ವಸ್ಥತೆ ಸಹ ನಿರ್ಮಾಣವಾಗಲಿದೆ ಎಂದು ಬಾಬಾ ಅವರು ತಿಳಿಸಿದ್ದಾರೆ.
ಸೈಬೀರಿಯಾದಲ್ಲಿ ಅಪಾಯಕಾರಿ ವೈರಸ್ ಪತ್ತೆಯಾಗಲಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ರಷ್ಯಾದ ಸೈಬೀರಿಯನ್ ಪ್ರದೇಶದಲ್ಲಿ ಮಂಜುಗಡ್ಡೆ ಕರಗುತ್ತದೆ, ಆದ್ದರಿಂದ ವಿಜ್ಞಾನಿಗಳ ತಂಡವು ಮಾ#ರಣಾಂತಿಕ ವೈರಸ್‌ಗಾಗಿ ಹುಡುಕಾಟ ನಡೆಸುತ್ತದೆ, ವೈರಸ್ ಹೆಚ್ಚು ಸಾಂಕ್ರಾಮಿಕವಾಗಿರುತ್ತದೆ ಮತ್ತು ವೇಗವಾಗಿ ಹರಡುತ್ತದೆ. ಈ ವೈರಸ್ ನ ವಿರುದ್ಧ ಹೋರಾಟ ಮಾಡಲು ಎಲ್ಲ ವ್ಯವಸ್ಥಾಪನೆಗಳು ಅಯಶಸ್ಸು ಕಾಣುತ್ತವೆ. ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ ಭಾರತದ ಮೇಲೆ ಸಹ ಉಂಟಾಗಲಿದೆ. ಆದ್ದರಿಂದ ದೇಶದ ಅನೇಕ ಭಾಗಗಳಲ್ಲಿ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇದರಿಂದ ದೇಶದಲ್ಲಿ ಬರಗಾಲ ನಿರ್ಮಾಣ ವಾಗಲು ಕಾರಣವಾಗುತ್ತದೆ
ಸುನಾಮಿ ಮತ್ತು ಭೂಕಂಪದ ಅಪಾಯ.
ವೆಂಗಾ ಬಾಬಾ ಅವರ ಪ್ರಕಾರ, 2022 ರಲ್ಲಿ ಜಗತ್ತಿನಲ್ಲಿ ಭೂಕಂಪಗಳು ಮತ್ತು ಸುನಾಮಿಗಳ ಅಪಾಯವು ಹೆಚ್ಚಾಗುತ್ತದೆ. ಹಿಂದೂ ಮಹಾಸಾಗರದ ಭೂಕಂಪದ ನಂತರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಡೋನೇಷ್ಯಾ ಮತ್ತು ಭಾರತ ಸೇರಿದಂತೆ ವಿಶ್ವದ ಕರಾವಳಿ ಪ್ರದೇಶಗಳಿಗೆ ಭಾರಿ ಸುನಾಮಿ ಅಪ್ಪಳಿಸಲಿದೆ. ಈ ಸುನಾಮಿಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಾರೆ.