ಬಾಯಿಯ ದುರ್ವಾಸನೆಗೆ 7 ಪ್ರಮುಖ ಕಾರಣಗಳು… ಮತ್ತು ಮನೆಯಲ್ಲಿಯೇ ಮಾಡಬಹುದಾದ ಸುಲಭ ಉಪಾಯಗಳು!
ಬಾಯಿಯ ದುರ್ವಾಸನೆಯು ಅನೇಕ ಸಲ ವ್ಯಕ್ತಿಯನ್ನು ತುಂಬಾ ಮುಜುಗರಕ್ಕೆ ಈಡು ಮಾಡುತ್ತದೆ. ಎಷ್ಟೋ ಸಲ ನಮಗೆ ತಿಳಿಯದೆ ನಮ್ಮ ಬಾಯಿಯಿಂದ ದುರ್ವಾಸನೆ ಹೊರಹೊಮ್ಮುತ್ತಿರುತ್ತದೆ. ಆಗ ನಮ್ಮ ಸಂಪರ್ಕದಲ್ಲಿ ಇರುವವರು ನಮ್ಮಿಂದ ದೂರ ಇರಲು ಇಷ್ಟಪಡುತ್ತಾರೆ. ಯಾರಾದರೂ ನಮ್ಮ ಬಾಯಿಯಿಂದ ಬರುವ ದುರ್ವಾಸನೆಯ ಬಗ್ಗೆ ಹೇಳಿದರೆ ಆಗಂತೂ ನಮಗೆ ತುಂಬಾ ಅಸಹ್ಯ ಹಾಗೂ ಅವಮಾನವಾದಂತೆ ಎನಿಸುತ್ತದೆ. ಇದರಿಂದ ಮುಕ್ತವಾಗಲು ಮೊದಲು ಬಾಯಿಯ ದುರ್ವಾಸನೆಗೆ ಕಾರಣಗಳೇನು ಎಂಬುದು ತಿಳಿದುಕೊಳ್ಳುವುದು ಅಗತ್ಯ. ಅದರ ನಂತರ ಇದರ ಪರಿಹಾರದ ಬಗ್ಗೆ ಕೆಲವು ಸರಳ ಉಪಾಯಗಳನ್ನು ಇಲ್ಲಿ ಕೊಡಲಾಗಿದೆ. ಅವು ಯಾವವು ಎಂಬುವುದನ್ನು ತಿಳಿದುಕೊಳ್ಳಿ.
1 ) ಒಸಡಿನ ನೋವು ಶರೀರದಲ್ಲಿಯ ಜಿಂಕ್ ಅಂಶವು ಕಡಿಮೆಯಾಗುವುದರಿಂದ ಆಗುತ್ತದೆ. ಮತ್ತು ಮಧುಮೇಹದ ಕಾರಣದಿಂದಲೂ ದುರ್ವಾಸನೆ ಬರುವ ಸಾಧ್ಯತೆಗಳಿವೆ. ಆದ್ದರಿಂದ ಜಿಂಕ್ ಅಂಶವು ಸಮೃದ್ಧವಾದ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಬೇಕು. ಮತ್ತು ಬಾಯಿಯನ್ನು ಸ್ವಚ್ಛವಾಗಿಡಲು ನಿಯಮಿತವಾಗಿ ನೀರಿನಿಂದ ಬಾಯಿಯನ್ನು ಮುಕ್ಕುಳಿಸುತ್ತ ಇರಬೇಕು.
2 ) ತುಂಬಾ ಸಮಯದವರೆಗೆ ಏನನ್ನೂ ತಿನ್ನದೆ ಇರುವದರಿಂದಲೂ ಬಾಯಿಯಿಂದ ದುರ್ವಾಸನೆ ಬರುವದು. ಆದ್ದರಿಂದ ಸಮಯ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವದರ ಜೊತೆಗೆ ಹಲ್ಲುಗಳಲ್ಲಿ ಸಿಕ್ಕು ಬೀಳುವ ಅನ್ನಕಣಗಳನ್ನು ತೆಗೆದು ಹಾಕಿ ಬಾಯಿಯನ್ನು ಸ್ವಚ್ಛವಾಗಿಡಬೇಕು.

3 ) ತಂಬಾಕು ತಿನ್ನುವವರು ಹಾಗೂ ಸಿಗರೇಟ್ ಸೇದುವವರಲ್ಲಿಯೂ ಬಾಯಿಯ ದುರ್ಗಂಧದ ಸಮಸ್ಯೆ ಕಂಡು ಬರುತ್ತದೆ. ಇದರ ಮುಖ್ಯ ಕಾರಣವೇನೆಂದರೆ, ಈ ಚಟಗಳನ್ನು ಮಾಡುವ ವ್ಯಕ್ತಿ ಯಾವತ್ತು ಉಗುಳುವ ಚಟವನ್ನು ಹೊಂದಿರುತ್ತಾನೆ. ಇದರಿಂದ ಬಾಯಿಯಲ್ಲಿಯ ಲಾಲಾರಸವನ್ನು ಹೊರೆಗೆ ಹಾಕಲಾಗುತ್ತದೆ. ಇದರಿಂದ ಬಾಯಿಯು ಒಣಗಿ ಒಂದು ರೀತಿಯ ವಿಶಿಷ್ಠ ಪ್ರಕಾರದ ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ. ಇದರ ಮೇಲಿರುವ ಒಂದೇ ಉಪಾಯವೆಂದರೆ ಈ ಚಟಗಳಿಂದ ದೂರವಿರುವದು.
4 ) ಪಚನಕ್ರಿಯೆಯು ಸರಿಯಾಗಿಲ್ಲದಿರುವ ಕಾರಣದಿಂದ ಮತ್ತು ಹೊಟ್ಟೆ ಕೆಟ್ಟಿದ್ದರಿಂದಲೂ ಬಾಯಿಯಿಂದ ದುರ್ವಾಸನೆ ಬರುತ್ತದೆ. ಇದಕ್ಕಾಗಿ ಸ್ವಲ್ಪ ಸಮಯ ವಾಕಿಂಗ್ ಹಾಗೂ ಪಾಚಕ ಪದಾರ್ಥಗಳ ಸೇವನೆ ಅವಶ್ಯಕವಾಗಿದೆ.
5 ) ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ಕರಿಮೆಣಸು ಇಂಥ ಪದಾರ್ಥಗಳ ಸೇವನೆಯಿಂದಲೂ ಬಾಯಿಯಿಂದ ವಾಸನೆ ಬರಬಹುದು. ಅದಕ್ಕಾಗಿ ಈ ಪದಾರ್ಥಗಳ ಉಪಯೋಗ ಆದಷ್ಟು ಕಡಿಮೆ ಮಾಡಬೇಕು. ಅವಶ್ಯಕತೆ ಇದ್ದಾಗ ಹಲ್ಲುಗಳನ್ನು ಉಜ್ಜಿ ಬಾಯಿ ತೊಳೆದುಕೊಳ್ಳಬೇಕು.

6 ) ಬಡೆಸೋಪ್, ಯಾಲಕ್ಕಿ, ಹುರಿದ ಜೀರಿಗೆ, ಜೇನು, ಕೊತ್ತಂಬರಿ ಕಾಳು ಇವು ನೈಸರ್ಗಿಕವಾದ ಮಾವುತ್ ಫ್ರೆಶ್ ನರ್ ಗಳಿದ್ದು ಊಟದ ನಂತರ ಹಾಗೂ ಇನ್ನೀತರ ಸಮಯದಲ್ಲಿಯೂ ಬಾಯಿ ಚಪ್ಪರಿಸುವದರಿಂದ ದುರ್ವಾಸನೆ ದೂರಾಗಲೂ ಸಹಾಯವಾಗುತ್ತದೆ.
7 ) ಬಾಯಿ ಒಣಗುವದರಿಂದ ಜೀವಾಣುಗಳ ಬೆಳವಣಿಗೆ ವೇಗದಿಂದಾಗುತ್ತದೆ. ಆದ್ದರಿಂದ ನಿಯಮಿತವಾಗಿ ನೀರಿನ ಸೇವನೆ ಮಾಡುವದು ತುಂಬಾ ಅಗತ್ಯ. ಜೊತೆಗೆ ಮಾವುತ್ ವಾಷ್ ಅಥವಾ ಮಾವುತ್ ಫ್ರೆಶ್ ನರಗಳನ್ನು ಉಪಯೋಗಿಸುವದು ತುಂಬಾ ಅಗತ್ಯ.
ಮಿತ್ರರೇ, ಈ ಲೇಖನದಲ್ಲಿ ಮಂಡಿಸಿದ ವಿಚಾರಗಳು ಸರ್ವ ಸಾಮಾನ್ಯವಾದ ಮಾಹಿತಿಗಳ ಮೇಲೆ ಆಧಾರವಿದ್ದು ಹಾಗೂ ವಿವಿಧ ಮಾಧ್ಯಮಗಳಲ್ಲಿಯ ಮಾಹಿತಿಯನ್ನು ಸಂಕಲನ ಮಾಡಿ ತಯಾರಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ಯಾವದಕ್ಕೂ ಸಂಬಂಧಪಟ್ಟ ತಜ್ಞರ ಅಥವಾ ವೈದ್ಯರ ಜೂತೆಗೆ ಸಮಾಲೋಚಿಸಬೇಕು.