ಬಾಲಿವುಡ್ ಗೆ ಗುಡ್ ಬೈ ಹೇಳಿದ ‘ಈ’ ಟಾಪ್ ಸುಂದರ ನಟಿ! ಅಂತಾರೆ ಇನ್ನೆಂದೂ ಬಾಲಿವುಡ್ ಮುಖ ನೋಡುವುದಿಲ್ಲವಂತೆ!

ಸದ್ಯ ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ ಮತ್ತು ಇತರ ಕಲಾಕಾರರಲ್ಲಿ ದೊಡ್ಡ ವಾರ್ ನಡೆದ ಹಾಗೆ ಕಂಡು ಬರುತ್ತಿದೆ. ಸುಶಾಂತ್ ಸಿಂಗ್ ರಾಜಪೂತ್ ರ ನಿರ್ಗಮಂದಿಂದ ಈ ವಿಷಯ ಹುಟ್ಟಿಕೊಂಡಿದೆ.

ಈ ಮೇಲಿನ ಕಾರಣದಿಂದಲೇ ಶತೃಘ್ನ ಸಿನ್ಹಾ ಅವರ ಮಗಳಾದ ಮತ್ತು ದಬಂಗ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಸೋನಾಕ್ಷಿ ಸಿನ್ಹಾ ಅವರೇ ಬಾಲಿವುಡ್ ಬಿಡುತ್ತಿರುವ ಪ್ರಸಿದ್ಧ ನಟಿ.

ಬಾಲಿವುಡ್ ತ್ಯಜಿಸುವ ಕಾರಣವೇನೀರಬಹುದು ಅಂತೀರಾ….?

ಸೋನಾಕ್ಷಿಯವರು ಮೊದಲು ಫ್ಯಾಶನ್ ಡಿಸೈನಿಂಗ್ ನಲ್ಲಿ ತುಂಬಾ ಚೆನ್ನಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಕ್ಷೇತ್ರದಲ್ಲಿ ಅವರ ಅವರ ಕಾರ್ಯವು ನಿಷ್ಠೆಯಿಂದ ನಡೆದಿತ್ತು. ಏತನಮಧ್ಯೆ ಸಲ್ಮಾನ್ ಅವರು ಒಮ್ಮೆ ಫ್ಯಾಶನ್ ಕಾರ್ಯಕ್ರಮ ಒಂದರಲ್ಲಿ ಭೆಟ್ಟಿಯಾಗಿ ದಬಂಗ್ ಚಿತ್ರದ ಸಲುವಾಗಿ ಕಾಸ್ಟ್ ಮಾಡಲು ಕೇಳಿದರು. ಇದೇ ಮಾತಿನಿಂದ ಅವರು ಚಿತ್ರಕ್ಕೆ ಒಪ್ಪಿದರು. ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಯಶಸ್ಸು ಕಂಡಿತು. ಒಂದು ಸಮಯ ಬಾಲಿವುಡ್ ನಲ್ಲಿ ಬಂದು ಒಳ್ಳೆಯದೇ ಆಯಿತು ಎಂದು ಸೋನಾಕ್ಷಿ ಅವರಿಗೆ ಎನಿಸಿತು. ಆದರೆ ಆನಂತರ ಮುಂದೆ ಆದದ್ದೆಲ್ಲ ಬೇರೆಯೇ.

ಅವರ ಚಿತ್ರಗಳು ಯಶಸ್ಸು ಕಾಣುವುದಕ್ಕಿಂತ ನೆಲಕಚ್ಚುವದೇ ಜಾಸ್ತಿಯಾಯಿತು. ದಬಂಗ್, ರೌಡಿ ರಾಥೋಡ್, ತೇವರ್, ಆಕ್ಷನ್ ಜಾಕ್ಸನ್, ಅಕೀರಾ, ಸೋಲ್ಜರ್ ಹೀಗೆ ಕೆಲವೇ ಚಿತ್ರಗಳು ಯಶಸ್ಸು ಕಂಡವು. ಅವುಗಳಲ್ಲಿಯೂ ಕೆಲವು ನಾಯಕನಿಗೆಯೇ ಹೆಚ್ಚು ಬಾಜಿ ಹೊಡೆದಾಗಿತ್ತು.

ಈ ಎಲ್ಲ ಪರಿಣಾಮಗಳಿಂದ ಸೋನಾಕ್ಷಿಯ ಮೇಲೆ ಟೀಕೆ ಟ್ರೋಲ್ಸ್ ಗಳಾಗಲು ಶುರುವಾದವು. ಸ್ಟಾರ್ ಕಿಡ್ಸ್ ಗಳಿಗೆ ಫಿಲಂ ಇಂಡಸ್ಟ್ರಿಯಲ್ಲಿ ಡೈರೆಕ್ಟ್ ಎಂಟ್ರಿ ಸಿಗುತ್ತೆ, ತಂದೆಯ ಪ್ರಭಾವದಿಂದ ಕೆಲಸ ಸಿಗುತ್ತೆ, ಇವರ ಹತ್ತಿರ ಕಲೆ ಇಲ್ಲವೇ ಇಲ್ಲ ಹೀಗೆ.

ಇದೇ ಕಾರಣದಿಂದ ಸೋನಾಕ್ಷಿಯು ತನ್ನ ಟ್ವೀಟರ್ ಅಕೌಂಟ್ ಸಹಿತ ಡಿಲೀಟ್ ಮಾಡಿದರು.

ಅಭಿನಯದಲ್ಲಿಯೂ ಚಿತ್ರ ರಸಿಕರ ಮೇಲೆ ವಿಶೇಷ ಮೋಡಿ ಮಾಡದ ಸೋನಾಕ್ಷಿಯವರಿಂದ ಅನೇಕ ಪ್ರೊಜೆಕ್ಟ್ ಗಳು ಕೈಯಿಂದ ಜಾರಿ ಹೋದವು. ಸಂಘರ್ಷವನ್ನು ಮಾಡದೇ ಸುಲಭವಾಗಿ ಚಿತ್ರದಲ್ಲಿ ಕೆಲಸ ಅದು ಕಲೆಯಿಲ್ಲದೆ ಸಿಗುವುದರಿಂದ ಜನರು ಒಂದು ರೀತಿಯಲ್ಲಿ ಸೋನಾಕ್ಷಿಯ ಚಿತ್ರಗಳ ಕಡೆಗೆ ಬೆನ್ನು ಮಾಡಿದರು.

ಸದ್ಯ ನಿರ್ಮಾಪಕರು ಸಹ ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ಸ್ ಗಳನ್ನು ತೆಗೆದುಕೊಂಡು ಚಿತ್ರವನ್ನು ನಿರ್ಮಿಸಿದರೆ ತಮ್ಮ ಚಿತ್ರ ಯಶಸ್ಸು ಕಾಣುವದು ತುಂಬಾ ಕಡಿಮೆ ಎಂದು ಹೀಗೂ ವಿಚಾರ ಮಾಡುತ್ತಿದ್ದಾರೆ. ತುಂಬಾ ವೆಚ್ಚದಲ್ಲಿ ಹಣವನ್ನು ಹೂಡಿ ಮುಂದೆ ಚಿತ್ರ ನಡೆಯದೇ ಇದ್ದಲ್ಲಿ ನಿರ್ಮಾಪಕ ಪಂಗನಾಮ ಹಾಕಿಕೊಂಡು ಹೋಗಬೇಕಾಗುತ್ತದೆ.

ಈ ರೀತಿಯ ಎಲ್ಲ ಕಾರಣಗಳಿಗೆ ಬೇಸತ್ತು ಸೋನಾಕ್ಷಿಯು ತನ್ನ ಬಾಯ್ ಫ್ರೆಂಡ್ ನಾದ ಜಹೀರ್ ಇಕ್ಬಾಲ್ ಜೊತೆಗೆ ಮದುವೆಯಾಗಲು ಸಜ್ಜಾಗಿದ್ದಾರೆ. ಕಳೆದ ಒಂದು ವರ್ಷದಿಂದ ಜಹೀರ್ ಇಕ್ಬಾಲ್ ಸೋನಾಕ್ಷಿಗೆ ಡೇಟ್ ಮಾಡುತ್ತಿದ್ದಾರೆ. ನೋಟ್ ಬಂದಿ ಚಿತ್ರದಲ್ಲಿ ಜಹೀರ್ ಗೆ ಸಲ್ಮಾನ್ ಲಾಂಚ್ ಮಾಡಿದ್ದರು. ಸೋನಾಕ್ಷಿಗೆ ಈ ಕಠಿಣ ಸಮಯದಲ್ಲಿಯೂ ಜೊತೆಯಲ್ಲಿ ಗೆಳೆಯನಾಗಿ ಸಾತ್ ಕೊಟ್ಟದ್ದರಿಂದ ಈ ವೃತ್ತದ ಮೇಲೆ ಒಂದು ವೇಳೆ ವಿಶ್ವಾಸ ವಿಟ್ಟು ನೋಡಿದರೆ ಸೋನಾಕ್ಷಿಯ ಮದುವೆ ಈತನ ಜೊತೆಗೆ ನಡೆಯಬಹುದು.