ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ಅಪಘಾತ? ನೋಡಿ ಈ ವಿಡಿಯೋದಲ್ಲಿ ಅವರ ಕೈಗೆ…..

ಬಾಲಿವುಡ್ ನಟಿಯಾದ ಜಾಹ್ನವಿ ಕಪೂರ್ ಅವರು ಕಡಿಮೆ ಸಮಯದಲ್ಲಿಯೇ ಚಲನಚಿತ್ರರಂಗದಲ್ಲಿ ತಮ್ಮ ಗುರುತನ್ನು ನಿರ್ಮಾಣ ಮಾಡಿಕೊಂಡವರು. ಇವರು ಸೋಶಿಯಲ್ ಮೀಡಿಯಾದಲ್ಲಿ ಸತತವಾಗಿ ಯಾವುದಾದರೊಂದು ಕಾರಣಕ್ಕಾಗಿ ಚರ್ಚೆಯಲ್ಲಿ ಇದ್ದೇ ಇರುತ್ತಾರೆ. ಸದ್ಯ ಅವರ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಜಾಹ್ನವಿ ಕಪೂರ್ ಅವರ ಕೈಗೆ ಏನಾದರೂ ಪೆಟ್ಟು ತಗಲಿದಂತೆ ಕಂಡುಬರುತ್ತಿದೆ. ಆದರೆ ವಿಡಿಯೋದಲ್ಲಿ ಜಾಹ್ನವಿ ಕಪೂರ್ ಅವರು ನಡೆದುಕೊಂಡ ವರ್ತನೆ ಮಾತ್ರ ನೇಟಿಜನ್ಸ್ ಗಳಿಗೆ ಸರಿ ಬಂದಿಲ್ಲ. ಹೀಗಾಗಿ ಯೂಸರ್ಸ್ ಗಳು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಶನಿವಾರ ರಾತ್ರಿ ಜಾಹ್ನವಿ ಕಪೂರ್ ಅವರು ಮುಂಬೈಯಲ್ಲಿ ಕಾಣಿಸಿಕೊಂಡರು. ಜಾಹ್ನವಿ ಕಪೂರ್ ಅವರ ಎಡಗೈಗೆ ಪೆಟ್ಟು ಬಿದ್ದಂತೆ ಕಾಣುತ್ತದೆ. ಈ ಕಾರಣಕ್ಕಾಗಿ ಅವರ ಕೈಗೆ ಬೆಲ್ಟ್ ಹಾಕಲಾಗಿದೆ. ಜಾಹ್ನವಿ ಕಪೂರ್ ಅವರ ಈ ಅವಸ್ಥೆಯನ್ನು ನೋಡಿ ಫೋಟೋಗ್ರಾಫರಗಳು ನಿಮ್ಮ ಕೈಗೆ ಏನಾಗಿದೆ ಎಂದು ಕೇಳಿದ್ದಾರೆ. ಆದರೆ ಅದಕ್ಕೆ ಜಾಹ್ನವಿ ಕಪೂರ್ ಅವರು ಯಾವುದೇ ರೀತಿಯ ಉತ್ತರ ನೀಡದೆ ಸಂಪೂರ್ಣವಾಗಿ ದುರ್ಲಕ್ಷಿಸಿದ್ದಾರೆ. ಮತ್ತು ಹಾಗೆಯೇ ತಮ್ಮ ಕಾರಿನಲ್ಲಿ ಕುಳಿತು ಅಲ್ಲಿಂದ ಹೋಗಿದ್ದಾರೆ. ಜಾಹ್ನವಿ ಅವರ ಈ ವರ್ತನೆ ಯೂಸರ್ಸ್ ಗಳಿಗೆ ಹಿಡಿಸದ ಕಾರಣ ಅವರನ್ನು ಟ್ರೊಲ್ ಮಾಡಲು ಶುರು ಮಾಡಿದ್ದಾರೆ.

ವಿಡಿಯೋ ನೋಡಿ

ನೇಟಿಜನ್ಸ್ ಗಳು ಜಾಹ್ನವಿ ಕಪೂರ್ ಅವರಿಗೆ ತೆಗೆದುಕೊಂಡರು ಕ್ಲಾಸ್…

ಒಬ್ಬ ಯೂಜರ್ ನೀನು ಎಷ್ಟೊಂದು ಅಹಂಕಾರಿಯಾಗಿರುವೆ ಎಂದರೆ ಎರಡನೆಯವನು ನಿನಗೆ ಎಷ್ಟೊಂದು ಪ್ರೀತಿಯಿಂದ ಕೇಳಬೇಕು ಎಂದಿದ್ದಾನೆ. ಇನ್ನೊಬ್ಬ ಗೆಟ್ ವೇಲ್ ಸೂನ್ ಎಂದರೂ ಸಹ ನಿನ್ನ ದೃಷ್ಟಿಕೋನ ಬದಲಾಗಿಲ್ಲ ಎಂದಿದ್ದಾನೆ. ಮಗದೊಬ್ಬ ನೀನು ಬಹುದೊಡ್ಡ ಸ್ಟಾರ್ ಆಗಿರುವಂತೆ ಆಟಿಟ್ಯೂಡ್ ತೋರಿಸುತ್ತಿದೆಯಾ ಎಂದು ಟಾಂಟ್ ಹೊಡೆದಿದ್ದಾನೆ. ಆದರೆ ಜಾಹ್ನವಿ ಕಪೂರ್ ಅವರ ಕೈಗೆ ಹೇಗೆ ಗಾಯ ಅಥವಾ ಪೆಟ್ಟು ತಗುಲಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ.