ಬಾಲಿವುಡ್ ನಟ ಅಜಯ್ ದೇವಗನ್ ಪತ್ನಿ ಕಾಜೋಲ್ ಮತ್ತು ಮಕ್ಕಳೊಂದಿಗೆ ಇರುತ್ತಾರೆ ಮುಂಬೈನ ‘ಈ’ ಐಷಾರಾಮಿ ಬಂಗಲೆಯಲ್ಲಿ; ಬಂಗಲೆಯ ಬೆಲೆ ಕೇಳಿದರೆ

ಬಾಲಿವುಡ್ ನಲ್ಲಿ ಸಿಂಘಂ ಹೆಸರಿನಿಂದ ಪ್ರಖ್ಯಾವಾಗಿರುವ ಅಜಯ್ ದೇವಗನ್ ಅವರು ಕಾಜಲ್ ಜೊತೆಗೆ ಮದುವೆಯಾಗಿ ಮಕ್ಕಳೊಂದಿಗೆ ತುಂಬಾ ಚೆನ್ನಾಗಿ ಸಂಸಾರ ಮಾಡಿ ಬಾಲಿವುಡ್ ನ ಆದರ್ಶ ಕಪಲ್ ರಲ್ಲಿ ಒಬ್ಬರು ಆಗಿದ್ದಾರೆ.

ಹಾಗೆ ನೋಡಲಾಗಿ ಅಜಯ್ ಅವರು ಬಾಲಿವುಡ್ ನಲ್ಲಿ ಸ್ವಲ್ಪ ನಾಚಿಕೆಯ ಸ್ವಭಾವದವರಾಗಿದ್ದಾರೆ. ಮಾತ್ರ ಜೀವನ ಶೈಲಿಯೂ ತುಂಬಾ ಹಾಯ್ ಫಾಯ್ ಇದೆ. ಮತ್ತು ಇವರು ಹಾಗೆ ಇರಲೇಬೇಕಾಗುತ್ತದೆ. ಮುಂಬಯಿಯ ಪಾಷ್ ಏರಿಯಾ ಆದ ಜುಹುನಲ್ಲಿ ಇವರ ಸ್ವಂತ ಬಂಗಲೆ ‘ ಶಿವಶಕ್ತಿ ‘ ಹೆಸರಿನಿಂದ ಕಂಗೊಳಿಸುತ್ತಿದೆ. ಈ ಬಂಗಲೆಯಲ್ಲಿ ಕಟ್ಟಿಗೆಯ ಕೆಲಸ ಜಾಸ್ತಿ ಮಾಡಲಾಗಿದೆ. ಮನೆಯ ಒಳಗಿನ ಭಾಗವು ಕಂದು ಬಣ್ಣದ ಕಟ್ಟಿಗೆಯ ಫರ್ನಿಚರ್ ಹಾಗೂ ತೆಳು ಬಣ್ಣದ ಪರದೆಗಳಿಂದ ಮತ್ತಷ್ಟು ಸುಶೋಭಿತವಾಗಿ ಕಂಡು ಬರುತ್ತದೆ. ಮನೆಯ ಗೋಡೆಗಳು ಬೆಳ್ಳಗಿನ ಬಣ್ಣದಿಂದ ಅಲಂಕೃತವಾಗಿದ್ದು ಅದರ ಮೇಲೆ ಸುಂದರ ಚಿತ್ರಗಳನ್ನು ತೆಗೆಯಲಾಗಿದೆ.

ಈ ಬಂಗಲೆಯಲ್ಲಿ ಎಲ್ಲವೂ ಆಧುನಿಕ ಶೈಲಿಯ ಸುಸಜ್ಜಿತ ಐಷಾರಾಮಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿ ಸ್ವಿಮಿಂಗ್ ಪೂಲ್, ಜಿಮ್, ಮಿನಿ ಥಿಯೇಟರ್, ಲೈಬ್ರರಿ, ಸ್ಪೋರ್ಟ್ಸ್ ರೂಮ್ ಹಾಗೂ ದೊಡ್ಡದಾದ ಗಾರ್ಡನ್ ಸಹಿತ ಇದೆ.

ಮುಂಬಯಿ ಜೊತೆಗೆ ಅಜಯ್ ದೇವಗನ್ ಅವರು ಲಂಡನ್ ನಲ್ಲಿಯೂ ಮನೆಯನ್ನು ಖರೀದಿಸಿದ್ದಾರೆ. ಪಾರ್ಕ್ ವಿಲಾ ದಲ್ಲಿರುವ ಮನೆಯ ಬೆಲೆ ಸುಮಾರು 55 ಕೋಟಿ ರೂಪಾಯಿಗಳಷ್ಟು ಇದೆ. ಇಲ್ಲಿ ಅನೇಕ ಸಲ ಅಜಯ್ ಅವರು ತಮ್ಮ ಕುಟುಂಬದ ಜೊತೆಗೆ ರಜೆಗಳನ್ನು ಕಳೆಯಲು ಹೋಗುತ್ತಾರೆ.

ಇಷ್ಟಲ್ಲದೆ ಅವರ ಸ್ವಂತ ಪ್ರೊಡಕ್ಷನ್ ಹೌಸ್ ಸಹ ಇದೆ. ಈ ಕಂಪನಿಯ ಒಟ್ಟು ಮೌಲ್ಯ ಸುಮಾರು 100 ಕೋಟಿ ರೂಪಾಯಿಗಳಷ್ಟು ಇದೆ. ತಮ್ಮದೆ ಆದ ಪ್ರೊಡಕ್ಷನ್ ನಲ್ಲಿ ಹೆಲಿಕಾಪ್ಟರ್ ಇಲಾ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂಬರುವ ‘ಮೈದಾನ’ ಚಿತ್ರವು ಸದ್ಯದಲ್ಲೇ ತೆರೆ ಕಾಣಲಿದೆ. ಇದರಲ್ಲಿ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.