ಬಾಲಿವುಡ್ ನ ಇನ್ನೊಂದು ಮುಖ ಬಯಲು ಮಾಡಿದ ನಟಿ ಮಾಧುರಿ ದಿಕ್ಸಿತ್; ಅಂತಾರೆ “ಆ ಘಟನೆ ನೆನೆಸಿಕೊಂಡರೆ ಈಗಲೂ ಹೇಸಿಗೆ ಬರುತ್ತದೆ!”
ಪ್ರತಿಯೊಂದು ಚಿತ್ರ ರೋಮ್ಯಾನ್ಸ್ ಮತ್ತು ಇಂಟಮೇಟ್ ಸೀನ್ ಗಳಿಲ್ಲದೆ ಪೂರ್ಣವಾಗಲು ಸಾಧ್ಯವಿಲ್ಲ. ಚಿತ್ರಗಳ ಸ್ವರೂಪಕ್ಕೆ ತಕ್ಕಂತೆ ಕೆಲವೊಂದು ಸೀನ್ ಗಳನ್ನು ಹಾಕಲೇಬೇಕಾಗುತ್ತದೆ. ಸದ್ಯಕ್ಕಂತೂ ಈ ರೀತಿಯ ಸೀನ್ ಗಳು ಚಿತ್ರಗಳಲ್ಲಿ ಇರುವುದು ದೊಡ್ಡ ವಿಷಯವೇನಲ್ಲ.
ಆದರೆ ಇಂಥ ಸೀನ್ ಗಳನ್ನು ಶೂಟ್ ಮಾಡುವಾಗ ಕಲಾಕಾರರಿಗೆ ತುಂಬಾ ಅಡಚಣೆಗಳು ಬರುತ್ತವೆ. ಕೆಲವೊಂದು ಸಲ ಮುಜುಗರಕ್ಕೆ ಈಡಾಗುವ ಪ್ರಸಂಗಗಳು ಬರುತ್ತವೆ. ವಿಶೇಷವಾಗಿ ಚಿತ್ರದಲ್ಲಿಯ ನಟಿಮಣಿಯರಿಗೆ ಇಂತಹ ಸೀನ್ ಗಳು ತುಂಬಾ ಸಮಸ್ಯೆ ನಿರ್ಮಾಣ ಮಾಡುತ್ತವೆ. ಇತ್ತೀಚೆಗಂತೂ ಈ ರೀತಿಯ ಸೀನ್ ಗಳನ್ನು ಶೂಟ್ ಮಾಡಲು ನಟಿಯರು ಸಹಿತ ಹಿಂದೆ-ಮುಂದೆ ನೋಡುತ್ತಿಲ್ಲ. ಆದರೆ ನಿಜವಾಗಿಯೂ ಶೂಟ್ ಮಾಡುವಾಗ ಮಾತ್ರ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ರೋಮ್ಯಾನ್ಸ್ ಸೀನ್ ಗಳ ಶೂಟ್ ಮಾಡುವಾಗ ಕೆಲವೊಂದು ಸಲ ಕಲಾಕಾರರು ತಮ್ಮ ಎಲ್ಲೆಯನ್ನು ಮೀರುವುದುಂಟು.
ಬಾಲಿವುಡ್ ದಲ್ಲಿ ದಕ್ ದಕ್ ಗರ್ಲ್ ಎಂದು ಪ್ರಸಿದ್ಧಿ ಪಡೆದ ಮಾಧುರಿ ದೀಕ್ಷಿತ್ ಅವರು 90 ರ ದಶಕದ ಪ್ರಸಿದ್ಧ ನಟಿಯಾಗಿದ್ದರು. ಇವರ ಜೊತೆಗೆ ಒಂದು ಘಟನೆ ಹೀಗೆ ನಡೆದಿತ್ತು. ಚಿತ್ರದಲ್ಲಿ ಅನೇಕ ಬೋ ಲ್ಡ್ ಸೀನ್ ಗಳಿರುವುದು ಮಾಧುರಿ ಅವರಿಗೆ ಮೊದಲೇ ಹೇಳಲಾಗಿತ್ತು. ಅದನ್ನು ನೋಡಿಯೇ ಅವರು ಈ ಚಿತ್ರಕ್ಕಾಗಿ ಸೈನ್ ಮಾಡಿದ್ದರು. ಸ್ಕ್ರಿಪ್ಟ್ ನ ಡಿಮಾಂಡ್ ಇರುವದರಿಂದ ಮಾಧುರಿ ದೀಕ್ಷಿತ್ ಅವರು ಅಂಥ ಸೀನ್ ಗಳಿಗೆ ಒಪ್ಪಿಕೊಂಡಿದ್ದರು. ಆ ಚಿತ್ರದ ಹೆಸರು ದಯಾವಾನ್ ಇದ್ದು ಚಿತ್ರದಲ್ಲಿ ವಿನೋದ್ ಖನ್ನಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿಯ ಇಂಟಿಮೇಟ್ ಸೀನ್ ಚಿತ್ರಿಸುವಾಗ ವಿನೋದ್ ಖನ್ನಾ ಮತ್ತು ಮಾಧುರಿ ದೀಕ್ಷಿತ್ ಇಬ್ಬರ ಕಿ ಸ್ಸಿಂಗ್ ಸೀನ್ ನಲ್ಲಿ ವಿನೋದ್ ಖನ್ನಾ ಅವರು ಮಾಧುರಿಯ ತುಟಿಗಳಿಗೆ ಕಚ್ಚಿದ್ದರು. ಇದರಿಂದ ಮಾಧುರಿ ದೀಕ್ಷಿತ್ ತುಂಬಾ ಹೆದರಿ ಬಿಟ್ಟಿದ್ದರು.

ಮಾಧುರಿ ದೀಕ್ಷಿತ್ ಅವರು ಒಂದು ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಹೀಗೆ ಹೇಳುತ್ತಾರೆ. ಕಿ ಸ್ಸಿಂಗ್ ಸೀನ್ ಪ್ರಾರಂಭವಾದಾಗ ಮೊದಲೆಲ್ಲಾ ಸರಿಯಾಗಿಯೇ ನಡೆದಿತ್ತು, ಆದರೆ ನಂತರ ಮಾತ್ರ ವಿನೋದ್ ಖನ್ನಾ ಅವರು ನನ್ನ ತು ಟಿಗಳನ್ನು ಕಚ್ಚಲು ಶುರುಮಾಡಿದರು. ಇದೆಲ್ಲವೂ ನಡೆದಾಗ ಚಿತ್ರದ ದಿಗ್ದರ್ಶಕರು ಸೀನ್ ಕಟ್ ಎನ್ನದೆ ಹಾಗೆ ಸುಮ್ಮನೆ ನಿಂತುಬಿಟ್ಟಿದ್ದರು. ಈ ರೀತಿಯ ವರ್ತನೆಯಿಂದಾಗಿ ನಾನು ತುಂಬಾ ಹೆದರಿ ಬಿಟ್ಟಿದ್ದೆ. ಆ ಸಮಯದಲ್ಲಿ ನನಗೆ ಅಳು ಬರುವದರ ಜೊತೆಗೆ ಎಲ್ಲರ ಮೇಲು ತುಂಬಾ ರೋಷ ಉಕ್ಕಿ ಬಂದಿತ್ತು. ಕಾರಣ ಯಾರು ಮಾತನಾಡದೆ ಮೌನವಾಗಿ ಸುಮ್ಮನೆ ನಿಂತು ಬಿಟ್ಟಿದ್ದರು. ಎಲ್ಲರೂ ಎಲ್ಲವನ್ನೂ ತಿಳಿದು ಏನನ್ನು ಮಾತನಾಡದೆ ಸುಮ್ಮನೆ ಶಾಂತವಾಗಿ ನೋಡುತ್ತಿದ್ದರು. ನಿಜವಾಗಿಯೂ ಈ ಘಟನೆಯು ನನಗೆ ತುಂಬಾ ಹೇ ಸಿಗೆಯನ್ನು ತಂದಿತ್ತು.
ಈ ಘಟನೆಯ ನಂತರ ವಿನೋದ್ ಖನ್ನಾ ಅವರು ನನ್ನಲ್ಲಿ ಕ್ಷಮೆ ಕೇಳಿದರು. ಆದರೆ ಕ್ಷಮೆ ಕೇಳಿದ ನಂತರ ಇಂಥ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ನನ್ನ ಹಾಗೂ ವಿನೋದ್ ಖನ್ನಾ ಅವರ ನಡುವೆ ಒಳ್ಳೆಯ ಮೈತ್ರಿ ಇತ್ತು. ಈ ಘಟನೆಯ ನಂತರ ಆ ಸ್ನೇಹದಲ್ಲಿ ಅಷ್ಟೊಂದು ವಿಶ್ವಾಸ ಉಳಿಯಲಿಲ್ಲ. ನಂತರ ಮುಂದೆ ನಾನು ಯಾವುದೇ ಚಿತ್ರಗಳಲ್ಲಿ ಇಂಥ ಸೀನ್ ಗಳನ್ನು ಮಾಡಲು ಒಪ್ಪಲಿಲ್ಲ. ಎಲ್ಲಿ ಸ್ಕ್ರಿಪ್ಟ್ ನ ಅವಶ್ಯಕತೆ ಇದೆ ಅಲ್ಲಿ ಅಷ್ಟೇ ಬೋಲ್ಡ್ ಸೀನ್ ಗಳನ್ನು ಮಾಡುತ್ತೇನೆ ಎಂದು ಹೇಳಿದೆನು. ಆದರೆ ಇದರಿಂದ ಪ್ರಶ್ನೆಗಳು ಬಗೆಹರಿಯುವುದಿಲ್ಲ ಎಂದು ಮಾಧುರಿ ಹೇಳುತ್ತಾರೆ.
ಈ ರೀತಿಯ ಘಟನೆ ನಡೆದದ್ದು ಬಾಲಿವುಡ್ನಲ್ಲಿ ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಈ ರೀತಿಯ ಘಟನೆಗಳು ಅನೇಕ ನಡೆದಿದ್ದವು. ಆದರೂ ಇಂಥ ಈ ರೀತಿಯ ಘಟನೆ ಗಳ ಕಡೆಗೆ ನೋಡಿಯೂ ನೋಡದ ಹಾಗೆ ದುರ್ಲಕ್ಷಿಸಲಾಗುತ್ತದೆ. ಆದ್ದರಿಂದಲೇ ಈಗಲೂ ಸಹ ಅನೇಕ ನಟಿಯರು ಇಂಥ ವಿಷಯಗಳ ಬಗ್ಗೆ ದೂರು ದಾಖಲಿಸುತ್ತಿತ್ತಾರೆ