ಬಾಲಿವುಡ್ ಹಾಡಿಗೆ ಮೆಲಕು ಹಾಕಿದ ಆಫ್ರಿಕಿಯನ್, ನಮಗೂ ಭಾರತದ ಭಾಷೆ ಬರುತ್ತೆ ಅಂತ ತೋರಿಸಿ ಕೊಟ್ಟ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ ….!

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ತುಂಬಾನೇ ವಿಶೇಷವಾದ ವಿಡಿಯೋಗಳು ಬೆಳಕಿಗೆ ಬರುತ್ತಿವೆ. ಅಲ್ಲದೆ ಇಂದು ಒಂದು ಹೊಸ ಫೀಚರ್ ಎಲ್ಲ ಜಾಲತಾಣಗಳಲ್ಲಿ ಇದೆ. ಅದೇನೆಂದರೆ ರೀಲ್ಸ್ ಮಾಡುವದು. ರೀಲ್ಸ್ ಮಾಡುವದರ ಮುಖಾಂತರ ಇಂದು ಪ್ರತಿಯೊಬ್ಬರು ತಮ್ಮೊಳಗೆ ಅಡಗಿಕೊಂಡಿರುವ ಕಲೆಯನ್ನು ಬೆಳಕಿಗೆ ತರುತ್ತಿದ್ದಾರೆ. ಅಷ್ಟೇ ಅಲ್ಲ ಇಂದು ಪ್ರತಿಯೊಬ್ಬರು ರೀಲ್ಸ್ ನೋಡಲು ತುಂಬಾನೇ ಇಷ್ಟ ಪಡುತ್ತಾರೆ. ಏಕೆಂದರೆ ರೀಲ್ಸ್ ತುಂಬಾ ಚಿಕ್ಕದಾದ ವಿಡಿಯೋ ಇರುತ್ತೆ ಹಾಗಾಗಿ ಬೇಗ ನೋಡಬಹುದು ಅನ್ನೋ ವಿಚಾರದಿಂದ ನೆಟ್ಟಿಗರು ರೀಲ್ಸ್ ನ ತುಂಬಾನೆ ಇಷ್ಟ ಪಡುತ್ತಿದ್ದಾರೆ.

ಇಂದು ಎಲ್ಲಕ್ಕಿಂತ ಹೆಚ್ಚಾಗಿ ರೀಲ್ಸ್ ರಚನೆಯಾಗುತ್ತಿರುವದು ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ. ಇನ್ಸ್ಟಾಗ್ರಾಮ್ ನಲ್ಲಿ ರಚನೆಯಾದ ರೀಲ್ಸ್ ಗಳು ಫೇಸ್ಬುಕ್ ಮತ್ತು ಯುಟ್ಯೂಬ್ ನಲ್ಲಿ ಸಹ ನೋಡಲು ಸಿಗುತ್ತವೆ ಹೀಗಾಗಿ ಹೆಚ್ಚಾಗಿ ನೆಟ್ಟಿಗರು ರೀಲ್ಸ್ ಇನ್ಸ್ಟಾಗ್ರಾಮ್ ನಲ್ಲಿ ಮಾಡುತ್ತಾರೆ. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಬಹಳಷ್ಟು ಫೀಚರ್ ಸಹ ದೊರೆಯುತ್ತವೆ. ಸದ್ಯಕ್ಕೆ ಆಫ್ರಿಕಾದ ಇಬ್ಬರು ವ್ಯಕ್ತಿಗಳು ಇನ್ಸ್ಟಾಗ್ರಾಮ್ ರೀಲ್ಸ್ ಮಾಡುವದರಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ. ಏಕೆಂದರೆ ಅವರು ಆಫ್ರಿಕಿಯನ್ ಆದರೂ ಸಹ ಅವರು ಮಾಡುತ್ತಿರುವ ರೀಲ್ಸ್ ಮಾತ್ರ ಇಂಡಿಯನ್ ಆಗಿರುತ್ತವೆ. ಹೀಗಾಗಿ ಅವರ ವಿಡಿಯೋ ಗಳು ತುಂಬಾನೇ ವೈರಲ್ ಆಗುತ್ತವೆ.

ಸದ್ಯಕ್ಕೆ ಈ ವ್ಯಕ್ತಿಗಳ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜುಬೆನ್ ನೈನಿತಾಲ್ ಅವರ ‘ರಾತೆ ಲಂಬಿಯ ಕಟೇ ತೆರಿ ಸಂಗಿಯಾ’ ಈ ಹಾಡಿನ ಒಂದು ತುಣುಕನ್ನು ಆಯ್ಕೆ ಮಾಡಿ ಈ ಹಾಡಿಗೆ ತಮ್ಮ ಬಾಯಿ ಸನ್ನೆ ಮಾಡಿದ್ದಾರೆ. ಇವರು ಮಾಡಿರುವ ರೀಲ್ಸ್ ನೋಡಿದರೆ ನಿಜವಾಗಿಯೂ ಇವರು ಭಾರತೀಯರಾಗಿರಬಹುದು ಎಂದು ಅನಿಸುತ್ತೆ. ಆದರೆ ಇವರು ಆಫ್ರಿಕಿಯನ್ ಆಗಿದ್ದಾರೆ. ಈ ವಿಡಿಯೋದಲ್ಲಿ ಕಾಣುವ ವ್ಯಕ್ತಿಯ ಹೆಸರು ಕಿಲಿ ಪೌಲ್ ಎಂದಿದೆ. ಈತನು ತನ್ನ ತಂಗಿಯ ಜೊತೆಗೆ ವಿಡಿಯೋ ಮಾಡುತ್ತಾನೆ. ಪ್ರಸ್ತುತ ವಿಡಿಯೋದಲ್ಲಿ ಸಹ ಅವನ ಹಿಂದುಗಡೆ ಅವನ ತಂಗಿ ಇದ್ದಾಳೆ. ಅವಳು ಸಹ ವಿಡಿಯೋ ಮಾಡುತ್ತಾಳೆ.

ವಿಡಿಯೋ ನೋಡಿ

ಈ ವೀಡಿಯೋಗೆ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕಿಂತಾ ಹೆಚ್ಚು ಲೈಕ್ಸ್ ಬಂದಿವೆ. ಅಲ್ಲದೆ ಸಾವಿರಕ್ಕೂ ಹೆಚ್ಚು ಕಾಮೆಂಟ್ ಬಂದಿವೆ. ಕಿಲಿ ಪೌಲ್ ಒಬ್ಬ ಆಫ್ರಿಕಾದ ಪ್ರಜೆಯಾಗಿದ್ದರು ಸಹ ಭಾರತದ ಹಿಂದಿ ಭಾಷೆಯಲ್ಲಿ ಹಾಡಿರುವ ಈ ವಿಡಿಯೋ ನೆಟ್ಟಿಗರ ಮನಸ್ಸು ಗೆಲ್ಲುತ್ತಿದೆ. ಈ ವಿಡಿಯೋ ಅವರ ಎರಡನೆಯ ವಿಡಿಯೋ ಇದಾಗಿದೆ. ಕಿಲಿ ಪೌಲ್ ಮುಂಬರುವ ಒಬ್ಬ ಇನ್ಸ್ಟಾಗ್ರಾಮ್ ಸ್ಟಾರ್ ಆಗಲು ಸಂದೇಹವೇ ಇಲ್ಲ.