ಬಾಹುಬಲಿಯಲ್ಲಿಯ ‘ಕಟ್ಟಪ್ಪಾ’ ಸತ್ಯರಾಜ ಅವರ ಮಗಳಿದ್ದಾಳೆ ತುಂಬಾ ಸುಂದರ, ಅವಳು ಏನು ಮಾಡುತ್ತಾಳೆ ಗೊತ್ತಾ?
ರಾಜಾಮೌಳಿಯವರ ದಿಗ್ದರ್ಶನದಲ್ಲಿ ತಯಾರಾದ ‘ಬಾಹುಬಲಿ’ ಚಿತ್ರ ವಿಶ್ವದಲ್ಲೇ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿಯೂ ಮೇರು ಪರ್ವತದಂತಹ ಅಸಾಧ್ಯ ಚಿತ್ರಗಳನ್ನು ತಯಾರಿಸುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ಜಗತ್ತಿಗೆ ತಿಳಿಸಿ ಕೊಟ್ಟರು. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳು ವೀಕ್ಷಕರ ಮನದಲ್ಲಿ ಅಚ್ಚಳಿಯದ ಪುಟಗಳಾಗಿಬಿಟ್ಟಿವೆ. ಈ ಚಿತ್ರದ ಯಶಸ್ಸಿನ ನಂತರ ಇದರಲ್ಲಿಯ ಕಲಾಕಾರರು ತಾವು ಪಡೆದುಕೊಳ್ಳುವ ಸಂಬಳವನ್ನು ದುಪ್ಪಟ್ಟು ಮಾಡಿದರು. ಪ್ರಸ್ತುತ ಚಿತ್ರ ಎರಡು ಭಾಗಗಳಲ್ಲಿ ಪ್ರದರ್ಶಿತವಾಯಿತು.
ಚಲನಚಿತ್ರದ ಮೊದಲ ಭಾಗದಲ್ಲಿ ಬರುವ ಕೊನೆಯ ಸೀನ್ ತುಂಬಾ ಜನಪ್ರಿಯವಾಗಿತ್ತು. ಬಾಹುಬಲಿಯ ಮೊದಲ ಭಾಗ ನೋಡಿದ ಪ್ರತಿಯೊಬ್ಬನಿಗೆ ಕಟ್ಟಪ್ಪಾ ಬಾಹುಬಲಿಗೆ ಕೊಲ್ಲಲು ಕಾರಣವೇನು? ಎಂಬ ಪ್ರಶ್ನೆ ಮೂಡಿತ್ತು. ಇದರ ಉತ್ತರ ಮಾತ್ರ ಸಿನಿಮಾ ಪ್ರೇಮಿಗಳಿಗೆ ಎರಡನೆಯ ಭಾಗದಲ್ಲಿ ದೊರಕಿತು. ಈ ಕಟ್ಟಪ್ಪಾ ಪಾತ್ರ ಮಾಡಿದ ವ್ಯಕ್ತಿಯ ಹೆಸರು ಮತ್ತು ಆತನ ಮಗಳು ನೋಡಲಿಕ್ಕೆ ಹೇಗಿದ್ದಾಳೆ? ಹಾಗೂ ಯಾವ ಕೆಲಸವನ್ನು ಮಾಡುತ್ತಾಳೆ? ಎಂಬುದರ ಬಗ್ಗೆ ತಿಳಿಯುವಾ.

ಬಾಹುಬಲಿಯಲ್ಲಿ ಕಟ್ಟಪ್ಪಾ ಪಾತ್ರ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಯ ಹೆಸರು ಸತ್ಯರಾಜ್ ಇದೆ. ಇವರಿಗೆ ಎರಡು ಮಕ್ಕಳಿವೆ. ಒಬ್ಬ ಹುಡುಗ ಇನ್ನೊಬ್ಬಳು ಹುಡುಗಿ. ಮಗಳ ಹೆಸರು ದಿವ್ಯ. ಕಾಣಲು ತುಂಬಾ ಸುಂದರವಾಗಿದ್ದಾಳೆ.
ದಿವ್ಯಾಳು ಬಣ್ಣದ ಜಗತ್ತಿನಿಂದ ಪರೀಪೂರ್ಣವಾಗಿ ಹೊರಗಿದ್ದಾಳೆ. ಇದೇ ಕಾರಣದಿಂದ ಮಾಧ್ಯಮಗಳಲ್ಲಿ ಅವಳ ಫೋಟೋಗಳು ಕಡಿಮೆ ಬರುತ್ತವೆ. ಆದರಿಂದು ಸತ್ಯರಾಜ್ ಅವರ ಮಗಳು ಹೇಗಿದ್ದಾಳೆ ಮತ್ತು ನಿಜಜೀವನದಲ್ಲಿ ಅವರು ಮಾಡುವ ಕೆಲಸವೇನು ನೀವೇ ನೋಡಿ.
ಸತ್ಯರಾಜರ ಹೇಳಿಕೆಯ ಪ್ರಕಾರ ತಾವು ತಮ್ಮ ಮಕ್ಕಳಿಗೆ ಚಲನ ಚಿತ್ರದಲ್ಲಿಯೇ ಬನ್ನಿ ಇಲ್ಲಿಯೇ ನಿಮ್ಮ ಕರಿಯರ್ ನ್ನು ಮಾಡಿಕೊಳ್ಳಿ ಎಂದು ಒತ್ತಾಯ ಮಾಡಿಲ್ಲವಂತೆ. ಹಾಗೂ ಒಂದು ವೇಳೆ ಅವರು ಚಿತ್ರಲೋಕದಲ್ಲಿ ಬರುವದಾದರೆ ಬೇಡ ಅಂತನೂ ನಾನು ಅನ್ನುವದಿಲ್ಲ. ಅವರು ತಮ್ಮ ಬದುಕನ್ನು ಯಾವುದೇ ಕ್ಷೇತ್ರದಲ್ಲಿಯೂ ವಿಸ್ತರಿಸಬಹುದು, ನಾನು ಅದಕ್ಕೆ ಸಪೋರ್ಟ್ ಮಾಡುತ್ತೇನೆ ಎನ್ನುತ್ತಾರೆ.

ಸತ್ಯರಾಜರ ಮಗಳಾದ ದಿವ್ಯ ಒಬ್ಬಳು ನ್ಯೂಟ್ರಿಷಿಯನಿಸ್ಟ್ ಇದ್ದಾಳೆ. ಈಕೆಗೆ ತನ್ನ ಕೆಲಸ ಪ್ರಾಮಾಣಿಕತೆಯಿಂದ ಮತ್ತು ಅಷ್ಟೇ ಪೂರ್ಣ ಸಮರ್ಪಣೆಯಿಂದ ಮಾಡುವ ಹವ್ಯಾಸವಿದೆ. ದಿವ್ಯಳಿಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಜೀವನ ಜೀವಿಸುವ ಅಭಿರುಚಿ ಇದೆ. ಆಕೆಗೆ ತನ್ನ ಸ್ವಂತದ ಕಾಲುಗಳ ಮೇಲೆ ತಾನೇ ಎದ್ದು ನಿಲ್ಲಬೇಕು ಎಂಬ ಆಸೆ ಇದೆ. ಅದಕ್ಕಾಗಿ ತನ್ನ ತಂದೆಯ ಹೆಸರಿನ ಮತ್ತು ಹಣದ ದುರುಪಯೋಗ ಎಂದು ಮಾಡಿಕೊಂಡಿಲ್ಲ. ಈ ಕಾರಣದಿಂದಲೇ ದಿವ್ಯ ಬಣ್ಣದ ಲೋಕದ ಹೊಳಪಿನಿಂದ ದೂರವಿದ್ದಾಳೆ.
ಯಾವತ್ತಾದರೂ ದಿವ್ಯಾಳ ಫೋಟೋಗಳು ಯಾವುದಾದರೂ ಕಾರಣಕ್ಕೆ ಇಂಟರ್ ನೆಟ್ ನಲ್ಲಿ ಸುಳಿದಾಡಿದರೆ ನೆಟ್ಟಿಗರು ಆಗ ನೀವು ತುಂಬಾ ಸುಂದರವಾಗಿದ್ದೀರಿ, ಚಲನಚಿತ್ರದಲ್ಲಿ ಬನ್ನಿ ಅಂತ ಆಕಾಂಕ್ಷೆ ವ್ಯಕ್ತ ಪಡಿಸುತ್ತಾರೆ. ಹೀಗಾಗಿ ಅವರ ಅಭಿಮಾನಿಗಳ ಬಳಗ ದಿನೇ ದಿನೇ ಬೆಳೆಯುತ್ತಿದೆ.