ಬಾಹ್ಯಾಕಾಶದಲ್ಲಿ ರಹಸ್ಯವಾದುದೇನೋ ಇದ್ದು ಅದು ಎಲ್ಲವನ್ನೂ ನಾಶ ಮಾಡುತ್ತಿದೆ: ಸ್ಪೇಸ್ ಎಕ್ಸ್ ಮಾಲೀಕ ಎಲೆನ್ ಮಸ್ಕ್

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ, ಸ್ಪೇಸ್ ಎಕ್ಸ್ ಕಂಪನಿಯ ಮಾಲೀಕರಾದ ಎಲೆನ್ ಮಸ್ಕ್ ಅವರು ಅಂತರಿಕ್ಷಕ್ಕೆ ಸಂಬಂಧಿಸಿದ ಹಾಗೆ ನೀಡಿರುವ ಹೇಳಿಕೆಗಳು ಇಡೀ ವಿಶ್ವದ ಗಮನವನ್ನು ಸೆಳೆದಿವೆ‌.‌ ಕೆಲವೇ ದಿನಗಳ ಹಿಂದೆ ಅವರು ಮಾನವ ಸಂಕುಲ ಉಳಿಯಬೇಕಾದರೆ ಆದಷ್ಟು ಬೇಗ ಅನ್ಯ ಗ್ರಹಗಳ ಮೇಲೆ ಮಾನವರು ನೆಲೆಸುವಂತೆ ಆಗಬೇಕು ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು. ಅಲ್ಲದೇ ಅವರು ಹೇಗೆ ವಿಶ್ವದ ನಾಗರೀಕತೆಗಳಲ್ಲಿ ಆಗಿರುವ ಬದಲಾವಣೆಗಳು, ಮರೆತ ವಿಚಾರಗಳು ಹಾಗೂ ಜೀವ ಸಂಕುಲದಲ್ಲಿ ಉಂಟಾಗಿರುವ ಬದಲಾವಣೆಗಳು ಹಾಗೂ ಪ್ರ ಳ ಯದ ಕುರಿತಾಗಿ ಕೂಡಾ ಮಾತನಾಡಿದ್ದರು. ಆಗಲೂ ಅವರು ತಮ್ಮ ಮಾತಿನಲ್ಲಿ ಅನ್ಯ ಗ್ರಹದ ಮೇಲೆ ನಗರಗಳ ನಿರ್ಮಾಣದ ಬಗ್ಗೆ, ಮಾನವರು ಅಲ್ಲಿಗೆ ಹೋಗಿ ನೆಲಸುವ ಮೂಲಕ ಮಾನವ ಸಂಕುಲವನ್ನು ಹೇಗೆ ದೀರ್ಘ ಕಾಲದವರೆಗೆ ಉಳಿಸಬಹುದು ಎಂಬುದನ್ನು ತಿಳಿಸಿದ್ದರು.

ಅದೇ ಎಲೆನ್ ಮಸ್ಕ್ ಅವರು ಅಂತರಿಕ್ಷದ ಬಗ್ಗೆ ನೀಡಿರುವ ಹೇಳಿಕೆ ಏನು ಎನ್ನುವುದಾದರೆ ಅವರು ಬ್ರಹ್ಮಾಂಡದಲ್ಲಿ ಏನೋ ಒಂದು ರಹಸ್ಯವಾಗಿದ್ದು ಅದು ಎಲ್ಲವನ್ನೂ ನಾ ಶ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತಾ ಒಂದು ದಿನ ತಮ್ಮ ಕಂಪನಿಯು 100 ಟನ್ ಉಪಕರಣಗಳನ್ನು ಹಾಗೂ ತಲಾ ನೂರು ಜನರನ್ನು ಹೊತ್ತ 1000 ಬಾಹ್ಯಾಕಾಶ ನೌಕೆಗಳು ಅಂತರಿಕ್ಷಕ್ಕೆ ತೆರಳುವವು ಎಂಬ ಆಶಾವಾದವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಹೀಗೆ ಬಾಹ್ಯಾಕಾಶಕ್ಕೆ ಹೋಗುವ ಜನರು ಮಂಗಳ ಗ್ರಹದ ಮೇಲೆ ನಿರ್ಮಾಣವಾಗಲಿರುವ ಶಾಶ್ವತವಾದ ವಸಾಹತು ಗಳಲ್ಲಿ ನೆಲೆಸಲು ಹೋಗಲಿದ್ದಾರೆಂದು ಎಲೆನ್ ಮಸ್ಕ್ ತಿಳಿಸಿದ್ದಾರೆ.

ಮಸ್ಕ್ ಈ ಮೊದಲು ಒಮ್ಮೆ ತಮ್ಮ ಯೋಜನೆಯ ಬಗ್ಗೆ ಹೇಳುತ್ತಾ 2050 ರ ವೇಳೆಗೆ ಅಂತರಿಕ್ಷದಲ್ಲಿ ಸುಮಾರು ಹತ್ತು ಲಕ್ಷ ನೆಲೆಸಿದ್ದಾರೆ ಎಂದು ಹೇಳಿದ್ದರು. ಆದರೆ ಅನಂತರ ಅವರು ಈ ಯೋಜನೆಯ ಗುರಿಯನ್ನು ತಲುಪುವಲ್ಲಿ ಇನ್ನೂ ಕೆಲವು ತೊಂದರೆಗಳಿವೆ ಎಂದು ಕೂಡಾ ಒಪ್ಪಿಕೊಂಡಿದ್ದರು. ಮಸ್ಕ್ ಅವರು ಹೇಳುವ ಪ್ರಕಾರ ಒಂದು ವೇಳೆ ಭೂಮಿಯಿಂದ ಮಂಗಳಕ್ಕೆ ಹೋಗುವ ಬಾಹ್ಯಾಕಾಶ ನೌಕೆಗಳೇನಾದರೂ ಬರುವುದನ್ನು ನಿಲ್ಲಿಸಿದರೆ ಇದೊಂದು ಪರೀಕ್ಷೆಯ ಸಮಯವಾಗಿರುತ್ತದೆ. ಅಲ್ಲದೇ ಈ ವೇಳೆ ಮಂಗಳದ ಮೇಲಿರುವ ಜನರು ಸಾಯುತ್ತಾರೆಯೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಹಾಗೇನಾದರೂ ಆದರೆ ನಾವೊಂದು ಸುರಕ್ಷಿತವಲ್ಲದ ಸ್ಥಳದಲ್ಲಿ ಇದ್ದೇವೆ ಎಂದರ್ಥ ಎಂದು ಅವರು ಹೇಳಿದ್ದಾರೆ.

ಸ್ಪೇಸ್ ಎಕ್ಸ್ ಸಂಸ್ಥೆಯ ಸಿಇಓ ಆಗಿರುವ ಪ್ರೊಫೆಸರ್ ರಾಬಿನ್ ಹ್ಯಾನ್ಸನ್ ಅವರು ನೀಡಿರುವಂತಹ ಗ್ರೇಟ್ ಫಿಲ್ಟರ್ ಸಿದ್ಧಾಂತವನ್ನು ಕೂಡಾ ಈ ವೇಳೆ ಎಲೆನ್ ಮಸ್ಕ್ ಅವರು ಉಲ್ಲೇಖ ಮಾಡಿದ್ದಾರೆ. ಪ್ರೊಫೆಸರ್ ರಾಬಿನ್ ಅವರು ಹೇಳುವ ಹಾಗೆ ಅಂತರಿಕ್ಷದಲ್ಲಿ ಏನೋ ಒಂದು ಕಾರ್ಯಾಚರಣೆ ನಡೆದಿದ್ದು, ಅದು ಪೂರ್ತಿ ಅಂತರಿಕ್ಷದಲ್ಲಿ ಜೀವನದ ವಿಸ್ತರಣೆಯ ಮೊದಲೇ ಅದನ್ನು ನಾಶಪಡಿಸುತ್ತಿದೆ. ಪ್ರೊಫೆಸರ್ ರಾಬಿನ್ ಅವರು 2014 ರಲ್ಲಿ, ಅಂತರಿಕ್ಷವು ಬಹಳ ವಿಶಾಲವಾಗಿದೆ, ಗಾಢಾಂಧಕಾರದಿಂದ ತುಂಬಿದೆ, ತಂಪಾದ, ಕಪ್ಪಾದ ಹಾಗೂ ಸ ತ್ತ ಸ್ಥಳದಂತೆ ಇದೆ‌. ನಾವು ಎತ್ತ ಕಡೆ ನೋಡಿದರೂ ಕೂಡಾ ಎಲ್ಲವೂ ಸ ತ್ತಂ ತೆ ಇದೆ ಎಂದು ಹೇಳಿದ್ದರು.

ಪ್ರೊಫೆಸರ್ ರಾಬಿನ್ ಅವರು ನೀವೇನಾದರೂ ಏಲಿಯನ್ ಗಳನ್ನು ನೋಡಿದರೆ ಭ ಯ ಪಡುವಿರಿ. ಅಲ್ಲದೇ ಅವು ನಿಮ್ಮೊಂದಿಗೆ ಹೇಗೆ ವರ್ತನೆ ಮಾಡಬಹುದು ಎಂದು ಆಲೋಚಿಸಿ ಕೂಡಾ ಆಶ್ಚರ್ಯ ಪಡುವಿರಿ‌, ಆದರೆ ನಿಮಗೆ ಏಲಿಯನ್ ಗಳು ಕಾಣದೇ ಹೋದರೆ ಹಾಗೂ ಏನೂ ಕಾಣದೇ ಹೋದರೆ ಆಗ ಇನ್ನಷ್ಟು ಭ ಯ ಪಡಬೇಕು ಎಂದು ಹೇಳಿದ್ದರು. ರಾಬಿನ್ ಅವರ ಈ ಸಿದ್ಧಾಂತದ ಪ್ರಕಾರ ಅಂತರಿಕ್ಷದಲ್ಲಿ ಏನೋ ಒಂದು ಇದ್ದು ಅದು ಎಲ್ಲಾ ವಸ್ತುಗಳನ್ನು ಕೂಡಾ ನಾ ಶ ಮಾಡುತ್ತಾ ಬರುತ್ತಿದೆ ಮತ್ತು ನಾವು ಅದರ ಮುಂದಿನ ಬ ಲಿ ಪ ಶುಗಳಾದರೂ ಆಗಬಹುದು ಎಂದಿದ್ದಾರೆ.