“ಬಿಂದಾಸ್ ಗ್ಯಾಸ್ ಬಿಡುವ ಅಧಿಕಾರ ಪುರುಷರಿಗಷ್ಟೇ ಏಕೆ?” ಮಹಿಳೆಯರಿಗೇಕೆ ಇಲ್ಲ? – ನೀನಾ ಗುಪ್ತಾ

‘Why Should Boys Have All the Fun’ ಈ ಪ್ರಶ್ನೆ ಬಾಲಿವುಡ್ ಜ್ಯೇಷ್ಠ ಅಭಿನೇತ್ರಿ ನೀನಾ ಗುಪ್ತಾ ಹುಟ್ಟು ಹಾಕಿದ್ದಾರೆ. ಇವರು ಬಿಂದಾಸ್ ವ್ಯಕ್ತಿಮತ್ವ ಹಾಗೂ ನೇರ ನುಡಿಗೆ ಪರಿಚಿತ.

ಈಗ ಅವರು ಪ್ರಶ್ನೆ ಎತ್ತಿದ್ದು ಗ್ಯಾಸ್ ನಿಂದ ಮಹಿಳೆಯರ ಆರೋಗ್ಯಕ್ಕೆ ಆಗುತ್ತಿರುವ ಹಾನಿಯ ಬಗ್ಗೆ. ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ,”ಬಿಂದಾಸ್ ಆಗಿ ಗ್ಯಾಸ್ ಬಿಡುವ ಅಧಿಕಾರ ಬರೀ ಪುರುಷರಿಗಷ್ಟೇ ಏಕೆ? ಮಹಿಳೆಯರಿಗೂ ಉದರದ ಸಮಸ್ಯೆಗಳಿರುತ್ತವೆ ಆದ್ದರಿಂದ ಮಹಿಳೆಯರೂ ಸಹಿತ ಅದನ್ನು ಮುಲಾಜಿಲ್ಲದೆ ಬಿಡಬೇಕು.” ಎನ್ನುವ ಮಾತು ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಈ ಮುಂದಿನ ವಿಷಯ ಹೀಗೂ ಹೇಳುತ್ತಾರೆ. “ಸಾರ್ವಜನಿಕ ಜೀವನದಲ್ಲಿ ಸತತವಾಗಿ ಮಹಿಳೆಯರೇ ಹೇಗಿರಬೇಕೆಂಬುದರ ಬಗ್ಗೆ ಹೇಳಲಾಗುತ್ತದೆ. ಬರೀ ಮಹಿಳೆಯರ ಮೇಲೆಯೇ ಒತ್ತಡ ತರಲಾಗುತ್ತದೆ. ಸದ್ಯಕ್ಕೆ ಲಾಕ್ ಡೌನ್ ಇದೆ. ಮಹಿಳೆಯರು ಕುಟುಂಬದ ಸದಸ್ಯರಿಗೆ ಅಡುಗೆ ಮಾಡುವದರಲ್ಲಿ ಮತ್ತು ಮನೆಕೆಲಸದಲ್ಲಿ ಬಿಜಿ ಇದ್ದಾರೆ. ಇಷ್ಟೆಲ್ಲ ಮಾಡುವಾಗ ಅವರಿಗೂ ಊಟ ಮಾಡಿದ್ದು ಸರಿಯಾಗಿ ಪಚನವಾಗುವದಿಲ್ಲ. ಗ್ಯಾಸ್ ಸಮಸ್ಯೆ ಅವರಿಗೂ ಇರುತ್ತೆ. ಡೇಕರಿಕೆ ಅವರಿಗೂ ಬರುತ್ತದೆ. ಆದ್ದರಿಂದ ಬರೀ ಪುರುಷರೇ ಬಿಂದಾಸ್ ಆಗಿ ಗ್ಯಾಸ್ ಬಿಡಬೇಕು, ಡೇಕರಿಕೆ ಬಿಡಬೇಕು, ಮಹಿಳೆಯರು ಬಿಡಬಾರದು ಇದು ಎಲ್ಲಿಯ ನಿಯಮ? ಮಹಿಳೆಯರೂ ಸಹಿತ ಗ್ಯಾಸ್ ಬಿಡಬೇಕು, ಡೇಕರಿಕೆ ಬಿಡಬೇಕು, ಹಾಗೆಯೇ ತಮಗೆ ಹೇಗೆ ಬೇಕೋ ಹಾಗೆ ಕೂಡಬೇಕು” ಅಂತ ಹೇಳ್ತಾರೆ.

https://www.instagram.com/tv/B_ZN8lPlqAE/?igshid=pskfjiz1zf2z

ಪುರುಷರು ತನಗನಿಸಿದ್ದನ್ನು ಮುಲಾಜಿಲ್ಲದೆ ಮಾಡುತ್ತಾರೆ. ಅದೇ ಒಬ್ಬಳು ಸ್ತ್ರೀ ಯಾಕೆ ಮಾಡಬಾರದು? ಮಹಿಳೆಯರಿಗೂ ಅಧಿಕಾರವಿದೆ. ಅದಕ್ಕಾಗಿ ಈ ವಿಷಯಗಳನ್ನು ತುಳಿಯುವ ಪ್ರಯತ್ನ ಮಾಡಬಾರದು. ಸಮಾಜದಲ್ಲಿ ಅಸ್ವಸ್ಥತೆಯಿಂದ ಜೀವಿಸಬಾರದು. ನೀವೂ ನಿಮ್ಮ ಪ್ರಕಾರ ಫ್ರೀ ಯಾಗಿ ಯಾಕೆ ಜೀವಿಸಬಾರದು ಎಂದು ಪ್ರಶ್ನೆ ಮಾಡುತ್ತಾರೆ.

ನೀನಾ ಗುಪ್ತಾ ಅವರು ಉಪಸ್ಥಿತ ಮಾಡಿದ ಈ ಪ್ರಶ್ನೆಗಳಿಗೆ ಅವರ ಫ್ಯಾನ್ಸ್ ಗಳಿಂದ ಶಹಭಾಶ್ ದೊರಕಿದೆ. ಒಬ್ಬ ಫ್ಯಾನ್ ಅಂತೂ ನಿಮ್ಮ ವಿಚಾರಗಳಿಗೆ ನನ್ನ ಸಮರ್ಥನೆ ಇದೆ ಎಂದಿದ್ದಾನೆ. ಇನ್ನೊಬ್ಬನಂತೂ ತನ್ನ ಕಾಮೆಂಟ್ ನಲ್ಲಿ ಜನರೂ ಸಹ ಇಂಥ ವಿಚಾರಗಳನ್ನು ಸಹಜವಾಗಿ ತೆಗೆದುಕೊಳ್ಳಬೇಕು.

ನೀನಾ ಗುಪ್ತಾ ಸದ್ಯಕ್ಕೆ ತಮ್ಮ ಪತಿಯೊಂದಿಗೆ ಮುಕ್ತೇಶ್ವರದಲ್ಲಿ ವಾಸಿಸುತ್ತಾರೆ. ಮೊದಲಿನಿಂದಲೂ ತಮ್ಮ ವಿಚಾರಗಳನ್ನು ಮುಚ್ಚುಮರೆ ಇಲ್ಲದೆ ಸಮಾಜದ ಮುಂದೆ ತಮಗನಿಸಿದ ಹಾಗೆ ಇಡುವ ಮನೋಭಾವದವರಾಗಿದ್ದಾರೆ.