ಬಿಗ್ ಬಾಸ್ ಮನೇಲಿ ಕ್ಯಾಮೆರಾ ಮುಂದೇನೆ ಎಲ್ಲಾ ನಡೆದಿದೆ ಎಂದಿದ್ದ ನಟಿಯ ಹೊಸ ಅವತಾರ ಕಂಡು ನೆಟ್ಟಿಗರು ಶಾಕ್

ಓಟಿಟಿ ಪ್ಲಾಟ್ ಫಾರಂ ನಲ್ಲಿ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಪ್ರಾರಂಭವಾಗಿ ದೊಡ್ಡ ಸದ್ದು ಮಾಡುತ್ತಿದೆ. ಅಲ್ಲದೇ ಈ ಬಿಗ್ ಬಾಸ್ ಗೆ ಸೆನ್ಸಾರ್ ಇಲ್ಲದ ಕಾರಣ ಸಾಕಷ್ಟು ವಿ ವಾದಗಳಿಗೂ ಸಹಾ ಇದು ಕಾರಣವಾಗಿದೆ. ಈ ಶೋ ನೋಡುವವರಿಗೆ ಭರ್ಜರಿ ಮನರಂಜನೆ ಏನೋ ಸಿಗುತ್ತಿದೆ‌. ಆದರೆ ಇದೇ ವೇಳೆಯಲ್ಲಿ ಶೋ ನಲ್ಲಿ ಸ್ಪರ್ಧಿಗಳ ವರ್ತನೆ, ಅವರ ಮಾತುಗಳು ಹಾಗೂ ಚಟುವಟಿಕೆಗಳನ್ನು ನೋಡಿದಾಗ ಓ ಮೈ ಗಾಡ್ ಏನಿದು? ಎನ್ನಿಸದೇ ಇರದು. ಇಂತಹ ಬಿಂದಾಸ್ ಶೊ ಆಗಿದೆ ಓಟಿಟಿ ಬಿಗ್ ಬಾಸ್. ಓಟಿಟಿ ಬಿಗ್ ಬಾಸ್ ಈಗಾಗಲೇ ಸಖತ್ ಚರ್ಚೆಗಳನ್ನು ಹುಟ್ಟು ಹಾಕಿರುವಾಗಲೇ ಮನೆಯಲ್ಲಿ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಮುಂದೆಯೇ ಇಬ್ಬರು ಲೈಂ ಗಿ ಕ ಕ್ರಿಯೆ ನಡೆಸಿದ್ದಾರೆ ಎನ್ನುವ ಹೇಳಿಕೆಯ ಮೂಲಕ ಬಾಂಬ್ ಸಿಡಿಸಿದ್ದರು‌.

ಹೌದು ಓಟಿಟಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿ, ಈಗಾಗಲೇ ಎಲಿಮಿನೇಟ್ ಆಗಿರುವ ಉರ್ಫಿ ಜಾವೇದ್ ಮನೆಯಲ್ಲಿ ಇರುವಾಗಲೇ ಅಂತಹುದೊಂದು ಸಂಚಲನ ಹುಟ್ಟಿಸುವ ಹೇಳಿಕೆಯನ್ನು ನೀಡಿದ್ದರು. ಕ್ಯಾಮೆರಾ ಮುಂದೆ ಎಲ್ಲಾ ನಡೆದಿದೆ, ನಿಮಗೆ ಅದು ತೋರಿಸಿದ್ದಾರೋ ಇಲ್ವೋ ಗೊತ್ತಿಲ್ಲ ಎಂದು ವೀಕ್ಷಕರಿಗೆ ಉರ್ಫಿ ಹೇಳುವ ವೀಡಿಯೋ ತುಣುಕು ಭರ್ಜರಿ ವೈರಲ್ ಆಗಿತ್ತು. ಹಾಗೆ ಬಿಗ್ ಬಾಸ್ ಮನೆಯಲ್ಲಿ ಸಂಚಲನ ಹೇಳಿಕೆ ನೀಡಿ ಸುದ್ದಿಯಾಗಿದ್ದ ಉರ್ಫಿ ಮನೆಯಿಂದ ಹೊರಗೆ ಬಂದ ಮೇಲೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಉರ್ಫಿ ಸುದ್ದಿ ಮಾತ್ರವೇ ಅಲ್ಲ, ಭರ್ಜರಿ ಟ್ರೋಲ್ ಗಳಿಗೂ ಆಹಾರವಾಗಿದ್ದಾರೆ.

ಹೌದು, ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ಸಹಜವಾಗಿಯೇ ಜನಪ್ರಿಯತೆ ಹೆಚ್ಚಿ ಸೆಲೆಬ್ರಿಟಿಗಳ ಮೇಲೆ ಕ್ಯಾಮರ ಕಣ್ಣುಗಳು ಸದಾ ನೆಟ್ಟಿರುತ್ತವೆ. ಇದೇ ಹಿನ್ನೆಲೆಯಲ್ಲಿ ಉರ್ಫಿ ಇತ್ತೀಚೆಗೆ ಕ್ಯಾಮರಾ ಗಳ ನೋಟಕ್ಕೆ ಸಿಕ್ಕಿ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳಲ್ಲಿ ಉರ್ಫಿ ತೊಟ್ಟ ಬಟ್ಟೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದೆಂತ ಟ್ರೆಂಡ್, ಇದೆಂತ ವಿಚಿತ್ರ ಸ್ಟೈಲ್ , ಸೆಲೆಬ್ರಿಟಿಗಳ ಶೋಕಿ ಅವರಿಗೇ ಸರಿ ಎಂದೆಲ್ಲಾ ಕಾಮೆಂಟ್ ಗಳು ಹರಿದಾಡಿವೆ‌. ಹೌದು ಉರ್ಫಿ ತೊಟ್ಟ ಡ್ರೆಸ್ ನೋಡಿದಾಗ ಒಂದು ಕ್ಷಣ ಎಲ್ಲರೂ ಆಶ್ಚರ್ಯ ಪಡುವುದು ನಿಜ.

ಇನ್ನು ಉರ್ಫಿ ಜಾವೇದ್ ಹಲವು ವಿಚಾರಗಳಿಂದ ಫೇಮಸ್ ಆಗಿದ್ದಾರೆ. ಅಡಲ್ಟ್ ಸೈಟ್ ನಲ್ಲಿ ಉರ್ಫಿಯ ಫೋಟೋ ಕಂಡು ಈಕೆಯನ್ನು ಪೋ ರ್ನ್ ಸ್ಟಾರ್ ಎಂದಿದ್ದರು. ಉರ್ಫಿ ಸೀಕ್ರೆಟ್ ಆಗಿ ವಯಸ್ಕರ ಸಿನಿಮಾ ಮಾಡಿ, ಹಣ ಗಳಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡಿತ್ತು. ಇದರಿಂದ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗಿತ್ತು ಎಂದು ಉರ್ಫಿ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದು ಉಂಟು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸದ್ಯಕ್ಕೆ ಉರ್ಫಿ ಎಲ್ಲೆಡೆ ಸುದ್ದಿಯಾಗುತ್ತಿದ್ದಾರೆ.