ಬಿಗ್ ಬ್ರೇಕಿಂಗ್ ನ್ಯೂಸ್! ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೊಸ ಕೋಚ್ ನೇಮಕ; ಇಷ್ಟೊಂದು ಸಂಭಾವನೆಗೆ ಆಯಿತು ಡೀಲ್!
ಐಪಿಎಲ್ ಸೀಸನ್ ಮುಗಿಯುತ್ತಲೇ ಟೀಮ್ ಇಂಡಿಯಾದಿಂದ ಹೊಸ ಸುದ್ದಿಯೊಂದು ಬಂದಿದೆ. ‘ದ ವಾಲ್’ ಎಂದೇ ಖ್ಯಾತರಾಗಿರುವ ಕರ್ನಾಟಕದ ಕಲಿ ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ಎಂದು ಆಯ್ಕೆ ಮಾಡಲಾಯಿತು. ಈ ಸಂಬಂಧವಾಗಿ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿದ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದ್ರಾವಿಡ್ ಎರಡು ವರ್ಷ ಅಂದರೆ 2023 ರವರೆಗೆ ಟೀಮ್ ಇಂಡಿಯಾದ ತರಬೇತುದಾರರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ನಿನ್ನೆ ದುಬೈನಲ್ಲಿ ಐಪಿಎಲ್ ನ ಕೊನೆಯ ಪಂದ್ಯ ಆಡಲಾಯಿತು. ಇದೇ ಸಂದರ್ಭದಲ್ಲಿ ನಡೆದ ಮೀಟಿಂಗ್ನಲ್ಲಿ ಟೀಮ್ ಇಂಡಿಯಾದ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲು ಸೌರವ್ ಗಂಗೂಲಿ ಮತ್ತು ಜಯ್ ಶಹಾ ಇಬ್ಬರೂ ರಾಹುಲ್ ದ್ರಾವಿಡ್ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಬಂದಿದೆ. ಕೆಲವೇ ದಿನಗಳಲ್ಲಿ ಟಿ20 ವರ್ಲ್ಡ್ ಕಪ್ ಮುಗಿಯಲಿದೆ. ಅದರ ನಂತರ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ರಾಹುಲ್ ದ್ರಾವಿಡ್ ತಮ್ಮ ಹೆಗಲ ಮೇಲೆ ತೆಗೆದುಕೊಳ್ಳುವವರು ಇದ್ದಾರೆ. ಮುಂದೆ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಅದೇ ಸಮಯಕ್ಕೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಮೊದಲ ಮಿಷನ್ ಆರಂಭಿಸಲಿದ್ದಾರೆ. ಏತನ್ಮದ್ಯೆ ರಾಹುಲ್ ಅವರು NCA ದ ರಾಜೀನಾಮೆ ನೀಡಲಿದ್ದಾರೆ.
10 ಕೋಟಿ ರೂಪಾಯಿಗಳ ಡೀಲ್…
ಮುಖ್ಯ ಕೋಚ್ ಆಗಿ ನೇಮಕ ಆಗುತ್ತಿರುವ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಎಷ್ಟೊಂದು ಸಂಭಾವನೆ ನೀಡಲಿದೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತಿರಬಹುದು. ಈ ಪ್ರಶ್ನೆಯ ಉತ್ತರ 10 ಕೋಟಿ ರೂಪಾಯಿಗಳು. ಈ ಎರಡು ವರ್ಷದ ಕರಾರಿಗಾಗಿ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಒಟ್ಟು 10 ಕೋಟಿ ರೂಪಾಯಿಗಳನ್ನು ನೀಡಲಿದೆ. ರಾಹುಲ್ ದ್ರಾವಿಡ್ ಅವರಿಗೆ NCA ಹೆಡ್ ಮಾಡಲಾಗಿತ್ತು. ಅಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ತುಂಬಾ ಉತ್ತಮ ರೀತಿಯಲ್ಲಿ ನಿಭಾಯಿಸಿದರು. ಅವರ ಗರಡಿಯಲ್ಲಿ ತಯಾರಾದ ಆಟಗಾರರು ಇಂದು ಟೀಮ್ ಇಂಡಿಯಾ ಮತ್ತು ಐಪಿಎಲ್ ಅಂಗಣದಲ್ಲಿ ಮಿಂಚುತ್ತಿದ್ದಾರೆ. ಇದೇ ರೀತಿ ಟೀಮ್ ಇಂಡಿಯಾಗೆ ಮತ್ತಷ್ಟು ಯಶಸ್ಸಿನ ಮೇಲೆ ಒಯ್ಯುವಂತಹ ಕೋಚ್ ಬಿಸಿಸಿಐಗೆ ಅವಶ್ಯಕವಾಗಿತ್ತು. ಗಂಗೂಲಿ ಮತ್ತು ಶಹಾ ಇವರಿಬ್ಬರಿಗೂ ರಾಹುಲ್ ದ್ರಾವಿಡ್ ಹೊರತಾಗಿ ಬೇರೆ ಪರ್ಯಾಯ ಯಾರು ಕಾಣಿಸಲಿಲ್ಲ. ಆದ್ದರಿಂದಲೇ ಬಿಸಿಸಿಐ ಬಹುಶಃ ರಾಹುಲ್ ದ್ರಾವಿಡ್ ರಂತಹ ಲೆಜೆಂಡರಿ ಆಟಗಾರನ ಕೈಯಲ್ಲಿ ಟೀಮ್ ಇಂಡಿಯಾವನ್ನು ಒಪ್ಪಿಸುತ್ತಿದೆ ಎಂದರೆ ತಪ್ಪಾಗಲಾರದು.