ಬಿಗ್ ಶಾಕಿಂಗ್! ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ!

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಕೊನೆಯ ಉಸಿರು ಎಳೆದಿದ್ದಾರೆಂಬ ಬಲ್ಲ ಮೂಲಗಳಿಂದ ಸುದ್ದಿ ಪ್ರಕಟಗೊಂಡಿದೆ.
ಇಡೀ ಸ್ಯಾಂಡಲ್ ವುಡ್ ಗೆ ದೊಡ್ಡ ಶಾಕ್ ಆಗಿದೆ. ಸುದ್ದಿಯನ್ನು ಕೇಳಿದ ಪ್ರತಿಯೊಬ್ಬ ತಾರೆಯರಿಗೆ ವಿಶ್ವಾಸ ಇಡಲಿಕ್ಕೆ ಸಾಧ್ಯವಾಗುತ್ತಿಲ್ಲ.

ಕಳೆದ ರಾತ್ರಿ ಎದೆಯಲ್ಲಿ ನೋವು ಕಾಣಿಸಿದ್ದರಿಂದ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿಯೇ ಪ್ರಾಣಪಕ್ಷಿ ಹಾರಿಹೋಗಿದೆ.

17 ನೇ ಆಕ್ಟೊಬರ್ 1980 ರಲ್ಲಿ ಜನಿಸಿದ ಚಿರಂಜೀವಿ ಸರ್ಜಾ ಅವರು ಬೆಂಗಳೂರಿನಲ್ಲಿ ಜನಿಸಿದ್ದರು. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನೆಲ್ಲ ಇಲ್ಲಿಯೇ ಪೂರೈಸಿದ್ದರು.
2 ಮೇ 2018 ರಲ್ಲಿಯೇ ನಟಿ ಮೇಘನಾ ರಾಜ್ ಅವರ ಜೊತೆ ಮದುವೆಯಾಗಿದ್ದರು. ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅಚ್ಚಳಿಯದ ಛಾಪನ್ನು ನಿರ್ಮಿಸುವದರಲ್ಲಿಯೇ ದೇವರು ಅವರನ್ನು ಬೇಗನೆ ಕರೆದುಕೊಂಡು ಬಿಟ್ಟರು.